ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ ಕೆರೆಗೆ 8 ಅಡಿ ನೀರು

Last Updated 19 ಅಕ್ಟೋಬರ್ 2014, 19:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಉತ್ತಮ ಮಳೆಯಾಗಿರು­ವುದರಿಂದ  ಹೆಸರಘಟ್ಟ ಕೆರೆಯಲ್ಲಿ ಎಂಟು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ತುಂಬಿರುವ ಕೆರೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ.

ಹೆಸರಘಟ್ಟ ಕೆರೆ ನಗರದಿಂದ 30 ಕಿ.ಮೀ. ಅಂತರದಲ್ಲಿ­ರುವ ಪ್ರಮುಖ ಕೆರೆಯಾಗಿದೆ. ಕೆರೆಯಲ್ಲಿ 10 ಅಡಿಗಿಂತಲೂ ಹೆಚ್ಚು ನೀರು ಸಂಗ್ರಹವಾದರೆ ಅದನ್ನು ಪಂಪ್‌ ಮಾಡಲಾ­ಗುವುದು ಎಂದು ಜಲಮಂಡಳಿ ಎಂಜಿನಿಯರ್‌­ಗಳು ಹೇಳುತ್ತಾರೆ.

‘ಕಾವೇರಿ ನೀರಾವರಿ ನಿಗಮವು ಅರ್ಕಾವತಿ ಜಲಾನಯನ ಪ್ರದೇಶದಲ್ಲಿನ ನದಿ ಪಾತ್ರದ ಒತ್ತುವರಿ ತೆರವು ಕಾರ್ಯ ಕೈಗೊಂಡಿದೆ. ಅದರ ಜೊತೆಗೆ ಹೆಸರಘಟ್ಟ ಕೆರೆಗೆ ಮೇಲ್ಭಾಗದಲ್ಲಿರುವ ಕೆರೆಗಳು ಹಾಗೂ ಕಾಲುವೆಗಳ ಒತ್ತುವರಿ ತೆರವುಗೊಳಿಸಿದರೆ ಕೆರೆಗೆ ಹೆಚ್ಚಿನ ನೀರು ಬರುತ್ತದೆ. ಹೆಸರಘಟ್ಟ ಕೆರೆ ಮೇಲ್ಭಾಗದಲ್ಲಿ ಎರಡು ಕೆರೆಗಳಿವೆ. ಅವು ತುಂಬಿರುವುದರಿಂದ ಕೆರೆಗೆ ಹೆಚ್ಚು ನೀರು ಬಂದಿದೆ’  ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT