ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನಕ್ಕೆ ತೆರೆದುಕೊಂಡ ‘9ಆ್ಯಪ್ಸ್‌’

Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ಆ್ಯಂಡ್ರಾಯ್ಡ್‌ ಆ್ಯಪ್‌ಗಳ ಮಾರುಕಟ್ಟೆ ತಾಣವಾಗಿರುವ ‘9ಆ್ಯಪ್ಸ್’, ಭಾರತದಲ್ಲಿ ವಹಿವಾಟು ವಿಸ್ತರಣೆ ಉದ್ದೇಶದಿಂದ ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ತಂದಿದೆ. ಇದರ ಜತೆಗೆ ದೇಶದಲ್ಲಿ ಆ್ಯಪ್‌ ಬಳಕೆದಾರರ ಮನಸ್ಥಿತಿಯ ಬಗ್ಗೆ ವ್ಯವಸ್ಥಾಪಕ ಇಬ್ರಾಹಿಂ ಪೋಪಟ್‌ ಅವರು ಮಾಹಿತಿ ನೀಡಿದ್ದಾರೆ.

ಗೂಗಲ್‌ ಪ್ಲೇ ಸ್ಟೋರ್‌ನಂತೆಯೇ ‘9 ಆ್ಯಪ್ಸ್‌’ ಕೂಡಾ ಆಂಡ್ರಾಯ್ಡ್‌ ಅಪ್ಲಿಕೇಷನ್‌ ಗಳನ್ನು ಒದಗಿಸುವ ತಾಣವಾಗಿದೆ. ಇದು ಅಲಿಬಾಬಾದ ಯುಸಿವೆಬ್‌ನ ಒಂದು ಭಾಗವಾಗಿದ್ದು, ಜಗತ್ತಿನಾದ್ಯಂತ ತಿಂಗಳಿಗೆ 25 ಕೋಟಿಗೂ ಅಧಿಕ ಸಕ್ರೀಯ ಬಳಕೆದಾರರನ್ನು ಹೊಂದಿದೆ.

ಹೊಸತೇನು?
ಬೇರೆಲ್ಲಾ ಆ್ಯಪ್‌ ಸ್ಟೋರ್‌ ಗಳಿಗಿಂತಲೂ ಇದು ವಿಭಿನ್ನವಾಗಿದೆ. ಬಳಕೆದಾರ ಸ್ನೇಹಿ ಸೌಲಭ್ಯಗಳನ್ನು ಹೊಂದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೇಟಾ ಪ್ಯಾಕ್‌ ದುಬಾರಿ ಯಾಗಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ವೈಫೈ, 3ಜಿ ಸಂಪರ್ಕವೂ ಸಮರ್ಪಕವಾಗಿಲ್ಲ. ಈ ಎಲ್ಲಾ ಅಂಶ ಗಳನ್ನು ಗಮನದಲ್ಲಿಟ್ಟು ಕೊಂಡು ನಮ್ಮ ತಾಣವನ್ನು ಮರು ರೂಪಿಸಲಾಗಿದೆ.

ಕಡಿಮೆ ಗಾತ್ರದ (ಎಂ.ಬಿ./ಜಿ.ಬಿ ಲೆಕ್ಕದಲ್ಲಿ) ಆದರೆ ಗುಣಮಟ್ಟದಲ್ಲಿ ಹೆಚ್ಚಿನ  ವ್ಯತ್ಯಾಸವಿಲ್ಲದ ಆ್ಯಪ್‌ಗಳು ಇಲ್ಲಿ ಲಭ್ಯವಿವೆ.    ಆ್ಯಪ್‌ ಸ್ಟೋರ್‌ಗೆ ಪ್ರವೇಶಿಸುತ್ತಿದ್ದಂತೆಯೇ  ಆ್ಯಪ್‌ನ ಗಾತ್ರವನ್ನೂ ನೋಡಬಹುದು. ಇದರಿಂದ ಮೊಬೈಲ್‌ನಲ್ಲಿರುವ ಖಾಲಿ ಜಾಗವನ್ನು ಪರಿಶೀಲಿಸಿ, ಆ ಆ್ಯಪ್‌ ಡೌನ್‌ಲೋಡ್‌ ಮಾಡಬೇಕೆ? ಬೇಡವೆ? ಎಂದು ನಿರ್ಧರಿಸಲು ಸುಲಭವಾಗುತ್ತದೆ.

ಸ್ಥಳೀಯ ಅಭಿವೃದ್ಧಿದಾರರಿಗೆ ಆದ್ಯತೆ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಸೇರಿದಂತೆ ದೇಶದ ಸ್ಥಳೀಯರಿಗೆ ಹೆಚ್ಚು ಆದ್ಯತೆನೀಡುತ್ತಿದ್ದೇವೆ.  
ಸದ್ಯ, ಮಾರುಕಟ್ಟೆಯಲ್ಲಿರುವ ಶೇ 90 ಜನಪ್ರಿಯ ಗೇಮ್‌ಗಳು ಯುರೋಪ್‌ನಲ್ಲಿ ತಜ್ಞರು ಅಭಿವೃದ್ಧಿಪಡಿಸಿರುವಂತಹವು.

ದೇಶದಲ್ಲಿ ಆ್ಯಪ್‌ ಅಭಿವೃದ್ಧಿಪಡಿಸುವವರಿಗೆ ಉತ್ತೇಜನ ನೀಡಲು ಮತ್ತು ಇಲ್ಲಿನ ಗ್ರಾಹಕರಿಗೆ ಸ್ಥಳೀಯ ಭಾಷೆಯಲ್ಲಿ ಆ್ಯಪ್‌ ಒದಗಿಸುವ ಉದ್ದೇಶದಿಂದ ಭಾರತದ ತಜ್ಞರಿಂದಲೇ ಆ್ಯಪ್‌ ಅಭಿವೃದ್ಧಿಪಡಿಸುತ್ತಿದ್ದೇವೆ.

trends9apps.com
ಇಲ್ಲಿ ಆ್ಯಪ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಲಭ್ಯವಿದೆ. ನಿರ್ದಿಷ್ಟ ಆ್ಯಪ್‌ಗೆ ಸಿಕ್ಕಿರುವ ರ್‍ಯಾಂಕಿಂಗ್‌, ಯಾವ ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಆ್ಯಪ್‌ ಡೌನ್‌ಲೋಡ್‌ ಆಗಿದೆ, ಯಾವ ಮಾದರಿಯ ಮೊಬೈಲ್‌ಗೆ ಡೌನ್‌ಲೋಡ್‌ ಮಾಡಲಾಗಿದೆ ಮತ್ತಿತರ ಮಾಹಿತಿಗಳು ಸಿಗುತ್ತವೆ.
ಈ ಮಾಹಿತಿಗಳು ಆ್ಯಪ್‌ ಅಭಿವೃದ್ಧಿಪಡಿಸುವವರಿಗೆ ಹೆಚ್ಚು ಅನುಕೂಲ ಆಗುತ್ತದೆ. ಇದರ ಆಧಾರದ ಮೇಲೆ ಯಾವ ವಿಧದ ಆ್ಯಪ್‌ಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ತಿಳಿದು ಕೊಳ್ಳಬಹುದು.

business.9apps.com
ನಮ್ಮ ವೇದಿಕೆಯನ್ನು ಬಳಸಿಕೊಳ್ಳಲು ಪಾಲುದಾರರಿಗೆ, ಹೊಸದಾಗಿ ಆ್ಯಪ್‌ ಅಭಿವೃದ್ಧಿಪಡಿಸುವವರಿಗೆ ಮತ್ತು ಸ್ಟಾರ್ಟ್‌ಅಪ್‌ ಸ್ಥಾಪಿಸುವವರಿಗೆ  ಅನುಕೂಲವಾಗುವಂತೆ ಇದನ್ನು ವಿನ್ಯಾಸ ಗೊಳಿಸಲಾಗಿದೆ.

ಸ್ಥಳೀಯ ಭಾಷೆ
ಬಳಕೆದಾರರನ್ನು ಗಮನ ದಲ್ಲಿಟ್ಟುಕೊಂಡು   ಹಿಂದಿ ಭಾಷೆಯ ಆ್ಯಪ್‌ಗಳನ್ನೂ ನೀಡಲಾಗಿದೆ. ಭವಿಷ್ಯದಲ್ಲಿ ಇನ್ನೂ ಹಲವು ಸ್ಥಳೀಯ ಭಾಷೆಗಳಲ್ಲಿ ಆ್ಯಪ್‌ಗಳನ್ನು ನೀಡುವ ಉದ್ದೇಶವಿದೆ.

ಸುರಕ್ಷತಾ ವ್ಯವಸ್ಥೆ
ಸುರಕ್ಷತೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದೇವೆ. ಪರೀಕ್ಷೆ ವೇಳೆ ಒಂದೊಮ್ಮೆ ಆ್ಯಪ್‌ನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಅದನ್ನು ಸರಿಪಡಿಸಿ ನೀಡುವಂತೆ ಅಭಿವೃದ್ಧಿ ಪಡಿಸುವವರಿಗೆ ಸೂಚಿಸಲಾಗುತ್ತದೆ.

ಆ್ಯಪ್‌ ಬಳಕೆ ಹೆಚ್ಚಳ
ಭಾರತದಲ್ಲಿ ಆ್ಯಪ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. 2016ರ ಜನವರಿ–ಜೂನ್‌ ಅವಧಿಯಲ್ಲಿ ಆ್ಯಪ್‌ ಡೌನ್‌ಲೋಡ್‌ ಪ್ರಮಾಣ ಶೇ 16ರಷ್ಟು ಹೆಚ್ಚಾಗಿದೆ.
9ಆ್ಯಪ್ಸ್‌ ಬಿಡುಗಡೆ ಮಾಡಿರುವ 9ಆ್ಯಪ್ಸ್‌ ಟ್ರೆಂಡ್ಸ್‌ ವರದಿಯಲ್ಲಿ ಇದನ್ನು ತಿಳಿಸಿದೆ. ಜನವರಿಯಿಂದ ಜೂನ್‌ವರೆಗೆ ಅಧ್ಯಯನ ನಡೆಸಲಾಗಿತ್ತು.

ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಗ್ರಾಹಕರು ಇತರರು ಬರೆದ ವಿಮರ್ಶೆಯ ಜೊತೆಗೆ ಆ ಆಪ್‌ನ ಸ್ಕ್ರೀನ್‌ಶಾಟ್‌ಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಸ್ಕ್ರೀನ್‌ಶಾಟ್ ನೋಡಿ ಆಪ್ ಆಯ್ಕೆ ಮಾಡಿ ಬಳಿಕ ವಿಮರ್ಶೆಗಳನ್ನು ನೋಡುವವರೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT