ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುರುಗಳಿಂದ ಸಮಾಜ ತಿದ್ದುವ ಕಾರ್ಯ ’

Last Updated 30 ಜೂನ್ 2016, 11:20 IST
ಅಕ್ಷರ ಗಾತ್ರ

ಶಿರ್ವ: ಸಮಾಜವನ್ನು ತಿದ್ದಿ ಸರಿ ದಾರಿಗೆ ತರುವ ಕೆಲಸವು ಗುರುಗಳಿಂದ ಆಗು ತ್ತದೆ.  ಗುರುಗಳ ಅನುಗ್ರಹ ಪ್ರಾಪ್ತಿಗಾಗಿ ಸಮಾಜದ ಎಲ್ಲರೂ ಸಂಘಟಿತರಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂ ಡು ಗುರು ಅನುಗ್ರಹ ಮಂತ್ರಾಕ್ಷತೆ ಪಡೆ ಯಬೇಕು ಎಂದು ಅವಿಭಜಿತ ದ.ಕ. ವಿಶ್ವ ಕರ್ಮ ಒಕ್ಕೂಟದ ಗೌರವ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಹೇಳಿದರು.

ಈಚೆಗೆ ಕಾಪು  ಕಾಳಿಕಾಂಬಾ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ತೆಂಕಾರು ಮಾಗಣೆ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವ ಸ್ಥಾನದಲ್ಲಿ ಜುಲೈ 6ರಂದು ನಡೆಯ ಲಿರುವ ಗುರುಗಳ ಅನುಗ್ರಹ ಮಂತ್ರಾಕ್ಷತೆ ಕಾರ್ಯಕ್ರಮದ ಸಮಾ ಲೋಚನಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಳಹಸ್ತಿ ಸ್ವಾಮೀಜಿ, ಶಿವಸು ಜ್ಞಾನಂದತೀರ್ಥ ಸ್ವಾಮೀಜಿ, ಶಿವಾ ತ್ಮಾನಂದ ಸರಸ್ವತಿ ಸ್ವಾಮೀಜಿ ಸಹಿತ 10 ಮಂದಿ ಸ್ವಾಮೀಜಿ ಅವರನ್ನು ಜುಲೈ 6 ರಂದು ಬೆಳಿಗ್ಗೆ 8.30ಕ್ಕೆ ಕಟಪಾಡಿಯಿಂದ ಭವ್ಯ ಮೆರವಣಿಗೆ ಮೂಲಕ ಕಟಪಾಡಿ ಶ್ರೀ ದೇವಳಕ್ಕೆ ಕರೆ ತರಲಾಗುವುದು.  12 ರಿಂದ 15 ಸಾವಿರ ವಿಶ್ವಕರ್ಮ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಮೊಕ್ತೇಸರ ಪಡುಕುತ್ಯಾರು ಸದಾಶಿವ ಎ. ಆಚಾರ್ಯ ಮಾತನಾಡಿ, ಕಟಪಾಡಿ ವೃಂದಾವನಸ್ಥ ನಾಗಧರ್ಮೇಂದ್ರ ಸ್ವಾಮೀಜಿ ಕ್ಷೇತ್ರ ಹೊಂದಿರುವ ಕಟಪಾಡಿ ದೇವಳದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಮಾಜದ ಜನರು ಅನುಗ್ರಹ ಮಂತ್ರಾಕ್ಷತೆ ಪಡೆ ಯಬೇಕು ಎಂಬ ಮಹದಾಸೆಯಿಂದ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಆನೆಗುಂದಿ ಮೂಲಮಠ ಪೀಠದಿಂದ ಹೆಚ್ಚಿನ ಗುರುಗಳು ಬರಲಿದ್ದಾರೆ. 10 ಜನ ಗುರುಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಾ ಜದವರು ಪಾಲ್ಗೊಳ್ಳಬೇಕು ಎಂದರು.

ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಚಾರದ ಬ್ಯಾನರನ್ನು ಬಿಡುಗಡೆಗೊಳಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಸರೋಜಾ ಆಚಾರ್ಯ, ಸಂದೀಪ್ ಕೆ. ಪುರೋಹಿತ್, ಕಾಪು ಕ್ಷೇತ್ರ ವಿಶ್ವಬ್ರಾಹ್ಮಣ ಯುವ ಸಂಘಟನೆ ಕಾಪು ಹರೀಶ್ ಆಚಾರ್ಯ, ಪ್ರಕಾಶ್ ಆಚಾ ರ್ಯ ಇನ್ನಂಜೆ, ವಿಜಯ ಆಚಾರ್ಯ ಪಡುಬಿದ್ರಿ, ಬಿಳಿಯಾರು ಸುಧಾಕರ ಆಚಾರ್ಯ, ದಿನೇಶ್ ಆಚಾರ್ಯ ಕಾಪು, ಕಟಪಾಡಿ ದೇವಳದ ಆಡಳಿತ ಸಮಿತಿಯ ಅನಂತಯ್ಯ ಆಚಾರ್ಯ ಕಳತ್ತೂರು, ಬಾರ್ಕೂರು ದೇವಸ್ಥಾನದ ಮಾಜಿ ಮೊಕ್ತೇಸರ  ಸಾಲಿಗ್ರಾಮ ಜಯರಾಮ ಆಚಾರ್ಯ ಇದ್ದರು.  ಕಾಪು ಕಾಳಿಕಾಂಬಾ ದೇವಸ್ಥಾನದ 2ನೇ ಮೊಕ್ತೇಸರ ದಿಂಡಿಬೆಟ್ಟು ಗಂಗಾಧರ ಆಚಾರ್ಯ ಸ್ವಾಗತಿಸಿದರು. ಕಾಪು ನಾಗಲಿಂಗ ಸ್ವಾಮಿ ಯುವಕ ಸೇವಾದಳದ ಅಧ್ಯಕ್ಷ ಸುಧೀಶ್ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT