ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಕ್ಷೇತ್ರಕ್ಕೆ ನಾಗೇಗೌಡರ ಸೇವೆ ಅಪಾರ’

Last Updated 19 ಏಪ್ರಿಲ್ 2014, 20:06 IST
ಅಕ್ಷರ ಗಾತ್ರ

ರಾಮನಗರ:  ‘ನಾಗೇಗೌಡ ಅವರು ಕನ್ನಡ ನಾಡು ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿ­ದ್ದಾರೆ’ ಎಂದು ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ತಿಳಿಸಿದರು.

ಜಾನಪದ ಲೋಕದಲ್ಲಿ ಅಕ್ಷರ ಧಾಮ ಟ್ರಸ್ಟ್, ಮಾಯ್ಕಾರ ರಂಗ­ತಂಡ, ಕರ್ನಾಟಕ ಜಾನಪದ ಪರಿ­ಷತ್ತಿನ ಸಹಯೋಗದಲ್ಲಿ ಶನಿವಾರ ನಡೆದ ಮಕ್ಕಳ ಶಿಬಿರದಲ್ಲಿ ‘ನಾಡೋಜ ಎಚ್.ಎಲ್.ನಾಗೇಗೌಡ ಹಾಗೂ ಅವರ ಸಾಧನೆ’ ಕುರಿತು ಅವರು ಮಾತ­ನಾಡಿದರು. ‘ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದರು’ ಎಂದರು.

ಶಿಬಿರದ ನಿರ್ದೇಶಕ ನರೇಶ್‌್ ಮಯ್ಯ ನಾಗೇಗೌಡ ಮಾತನಾಡಿ, ‘ನಾಗೇಗೌಡ ಅವರು ನಿರ್ಮಿಸಿರುವ ಜಾನಪದ ಲೋಕ ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಇದು ರೂಪುಗೊಂಡಿದೆ’ ಎಂದರು. ಶಿಬಿರದ ನಿರ್ದೇಶಕ ಶಿವಣ್ಣ ಕನಕಪುರ, ರಂಗನಿರ್ದೇಶಕ ಎಂ.ಸಿ.­ನಾಗ­ರಾಜು, ಸಂಪನ್ಮೂಲ ವ್ಯಕ್ತಿಗಳಾದ ನೀನಾಸಂ ರತ್ನಾ, ಮಂಜುಳಾ, ಗಾಯಕರಾದ ಸರ್ವೋತ್ತಮ್, ಬ್ಯಾಡರಹಳ್ಳಿ ಶಿವಕುಮಾರ್ ಇದ್ದರು.

‘ಕಲೆಗೆ ಪ್ರೋತ್ಸಾಹ ಅಗತ್ಯ’
ಕನಕಪುರ:  ‘ಪ್ರತಿಯೊಬ್ಬ ವ್ಯಕ್ತಿಯ­ಲ್ಲಿಯೂ ಕಲೆ ಇರುತ್ತದೆ. ಅದನ್ನು ಗುರು­ತಿಸಿ ಪ್ರೋತ್ಸಾಹಿಸುವ ಕೆಲಸ­ವಾಗ­ಬೇಕು’ ಎಂದು ನೀನಾಸಂ ರಂಗ ನಿರ್ದೇ­ಶಕ ಎಂ.ಸಿ.ನಾಗರಾಜು ತಿಳಿಸಿದರು.

ಪಟ್ಟಣದ ಕೋಟೆ ಶ್ರೀರಾಮ ಮಂದಿರ­ದಲ್ಲಿ ವಿನಾಯಕ ನೃತ್ಯ ಶಾಲೆಯ ವತಿಯಿಂದ ಆಯೋಜಿಸಿದ್ದ ಒಂಬತ್ತನೇ ವಾರ್ಷಿ ಕೋತ್ಸವ ಸಮಾ­ರಂಭದಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT