ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಗರಿಕತೆಯೊಂದಿಗೆ ಸಂಸ್ಕೃತ ಬೆಸೆದಿದೆ’

Last Updated 10 ಏಪ್ರಿಲ್ 2014, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಸ್ಕೃತವು ನಾಗರಿಕತೆ ಯೊಂದಿಗೆ ಬೆಸೆದುಕೊಂಡಿದ್ದು, ಇದ­ರತ್ತ ಯುವಜನತೆಯನ್ನು ಸೆಳೆಯ­ಬೇಕಿದೆ’ ಎಂದು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲ­ಯವು ನಗರದಲ್ಲಿ ಗುರುವಾರ ಆಯೋ­ಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡು ಸಂಸ್ಕೃತವನ್ನು ಉಳಿಸುವ ತುರ್ತು ಅಗತ್ಯ ಎದ್ದು ಕಾಣುತ್ತಿದೆ. ಹೀಗಾಗಿ ಭರದಿಂದ ಸಂಸ್ಕೃತ ಉಳಿಸುವ ಕೆಲಸ ಮಾಡಬೇಕು’ ಎಂದರು.

‘ಕೇವಲ ಹಣ ಗಳಿಕೆಯ ಮಾರ್ಗ­ವಾಗಿ ಶಿಕ್ಷಣವನ್ನು ಪಡೆಯಲಾಗುತ್ತಿದೆ. ವಿವೇಚನೆ ಹಾಗೂ ಮಾನವೀಯತೆ ಯನ್ನು ತಿಳಿದು ಕೊಳ್ಳುವತ್ತ   ಶಿಕ್ಷಣವನ್ನು ರೂಪಿಸಬೇಕಿದ್ದು, ಇದಕ್ಕೆ ಸಂಸ್ಕೃತ ಭಾಷೆಯ ಅಗತ್ಯವಿದೆ’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕ ಟೇಶ್,  ‘ವಿಶ್ವವಿದ್ಯಾಲಯದಲ್ಲಿ ₨ 8 ಕೋಟಿ ಸಂರಕ್ಷಣಾ ನಿಧಿ ಇದ್ದು, ಅದನ್ನು ವಿಶ್ವವಿದ್ಯಾಲಯದ ಕಾರ್ಯ ಚಟುವಟಿ­ಕೆಯಲ್ಲಿ ಮಿತವಾಗಿ ಬಳಸಲಾ­ಗುವುದು’ ಎಂದು ಹೇಳಿದರು.
‘ವಿ.ವಿಯು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನಾ ಕಾರ್ಯಗಳನ್ನು  ಹಮ್ಮಿಕೊಳ್ಳಲು ಯೋಜಿಸಿದ್ದು, ಇದಕ್ಕೆ ಸರ್ಕಾರದ ನೆರವು ದೊರೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT