ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುಗಪುರುಷ ಡಾ.ರಾಜ್‌’

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿನಿಮಾ ರಂಗದಲ್ಲಿ ಕನಕದಾಸ, ಕೃಷ್ಣದೇವರಾಯ, ಪುರಂದ­ರ­ದಾಸರ ಪಾತ್ರ ಮಾಡುವ ಮೂಲಕ  ಡಾ. ರಾಜ್‌ಕುಮಾರ್ ಅವರು  ಸಾಂಸ್ಕೃ­ತಿಕ ರಂಗದಲ್ಲಿ ಹೊಸ ಚೈತನ್ಯ ಮೂಡಿ­ಸಿ­ದ್ದರು’ ಎಂದು ಸಾಹಿತಿ ಡಾ.ಚಂದ್ರ­ಶೇಖರ ಕಂಬಾರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ ಸಭಾಂಗಣ­ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ   ಕಾರ್ಯಕ್ರಮದಲ್ಲಿ ‘ಡಾ.ರಾಜ್‌­ಕುಮಾರ್  ಸಮಗ್ರ  ಚರಿತ್ರೆಯ  ಪುಸ್ತ­ಕದ ಪರಿಚಯದ ಬಗ್ಗೆ  ದಿಗ್ಗಜರ ಅಭಿ­ಪ್ರಾ­ಯ­ಗಳ ಕೈಪಿಡಿ’ ಯನ್ನು ಬಿಡು­ಗಡೆ­ಗೊಳಿಸಿ ಅವರು  ಮಾತನಾಡಿದರು.

‘ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾದುದು. ಅದೇ ರೀತಿ ಚಿತ್ರರಂಗಕ್ಕೆ ಡಾ.ರಾಜ್‌ ಕೊಡುಗೆ ಮಹ­ತ್ತರವಾದುದು.
ಅವರ  ಪ್ರತಿ ಚಿತ್ರ­ಗ­ಳಲ್ಲೂ ಸಾಮಾಜಿಕ ಕಳಕಳಿ ಕಾಣ­ಬಹುದು. ಅವರು ಕನ್ನಡ ಚಿತ್ರರಂಗದ  ಯುಗಪುರುಷ’ ಎಂದು ಅವರು ಬಣ್ಣಿಸಿದರು.

ರಾಜ್‌ ಅವರ ಸಮಗ್ರ ಚರಿತ್ರೆ  ಎರಡು ಸಂಪುಟಗಳಲ್ಲಿ ಬರ­ಲಿದ್ದು,  ಡಿಸೆಂ­ಬರ್‌­­ನಲ್ಲಿ ಕೃತಿ ಬಿಡು­ಗಡೆ­ಯಾ­ಗ­ಲಿದೆ. ಈ ಸಂಪುಟಗಳಲ್ಲಿ 2,140 ಪುಟ­­­ಗಳು ಹಾಗೂ 8,310 ಚಿತ್ರಗಳು ಇರ­ಲಿವೆ ಎಂದು ಸಮಾರಂಭದಲ್ಲಿ ತಿಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT