ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಿಮೋಟ್‌ನಿಂದ ದೇಶ ಆಳಲಾಗದು' - ಮೋದಿ

Last Updated 19 ಏಪ್ರಿಲ್ 2014, 13:11 IST
ಅಕ್ಷರ ಗಾತ್ರ

ಕಾಕೊಜಾನ್, ಅಸ್ಸಾಂ (ಪಿಟಿಐ): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ‘ರಿಮೋಟ್‌  ಕಂಟ್ರೋಲ್‌’ನಿಂದ ದೇಶದ ಆಡಳಿತ ನಡೆಸಲಸಾಧ್ಯ ಎಂದು ಕುಟುಕಿದರು.

ಅಸ್ಸಾಂನ ಬಂಗಾಯಿಗಾಂವನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನೀವು ದೇಶವನ್ನು ರಕ್ಷಿಸ ಬಯಸುವಿರಾದರೇ ಮೊದಲು ತಾಯಿ–ಮಗನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ’ ಎಂದು ಕರೆ ನೀಡಿದರು. ಅಲ್ಲದೇ, ‘ತಾಯಿ–ಮಗನಿಂದ ರಿಮೋಟ್‌ ಕಂಟ್ರೋಲ್‌ ಮೂಲಕ ದೇಶದ ಆಡಳಿತ ನಡೆಸಲಾಗದು’ ಎಂದು ಜರೆದರು.

ಲೋಕಸಭೆಯ 543 ಸ್ಥಾನಗಳ ಪೈಕಿ ಚುನಾವಣೆ ಮುಗಿದಿರುವ 232 ಕ್ಷೇತ್ರಗಳಲ್ಲಿ ಮತದಾರರು ಈಗಾಗಲೇ ಯುಪಿಎ ಸರ್ಕಾರದ ವಿರುದ್ಧ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

‘ಕೇಂದ್ರದಲ್ಲಿ ಒಂದು ಸುಭದ್ರ ಹಾಗೂ ಸ್ಥಿರ ಸರ್ಕಾರವನ್ನು ರಚಿಸಲು ಬಿಜೆಪಿ 300 ಸ್ಥಾನ ಗೆಲ್ಲುವುದನ್ನು ಖಚಿತಪಡಿಸುವುದು ಮತದಾರರ ಜವಾಬ್ದಾರಿ’ ಎಂದರು.

‘ನಿಮ್ಮ ಹಕ್ಕು ಚಲಾಯಿಸುವ ಬಗ್ಗೆ ಒಂದು ತಪ್ಪು ನಿರ್ಧಾರ ಕೈಗೊಂಡರೇ, ನೀವು ಮುಂದಿನ ಐದು ವರ್ಷಗಳನ್ನು ನಷ್ಟ ಮಾಡಿಕೊಳ್ಳುತ್ತೀರಿ. ಅದು ನಿಮ್ಮ ಭವಿಷ್ಯದ ನಾಳೆಗಳ ಮೇಲೆ ಪರಿಣಾಮ ಬಿರುತ್ತದೆ. ನನಗೊಂದು ಅವಕಾಶ ನೀಡಿ. ನಾನು ನಿಮ್ಮ ಜೀವನ ಬದಲಾಯಿಸುವೆ’ ಎನ್ನುವ ಮೂಲಕ ಯುವ ಮತದಾರರನ್ನು ಸೆಳೆಯುವ ಯತ್ನ ಮಾಡಿದರು.

ಪ್ರಧಾನಿ ಮನಮೋಹನ್‌ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಅವರು ಪುಸ್ತಕದಲ್ಲಿ ಮಾಡಲಾದ ಆರೋಪಗಳನ್ನು ಪ್ರಸ್ತಾಪಿಸಿ ಸೋನಿಯಾ ಹಾಗೂ ರಾಹುಲ್‌ ವಿರುದ್ಧವೂ ಗುಡುಗಿದ ಮೋದಿ, ‘ನಿಜವಾದ ಪ್ರಧಾನಿ ಯಾರಾಗಿದ್ದರು ಎಂಬುದು ಸ್ಪಷ್ಟಗೊಂಡಿದೆ (ಪುಸ್ತಕದಲ್ಲಿ). ಸಿಂಗ್‌ ಅವರು ಏನು ಹೇಳಿದರೂ ಲೆಕ್ಕಕ್ಕಿಲ್ಲ.  ಇದಕ್ಕಾಗಿ ತಾಯಿ ಮತ್ತು ಮಗ ಇಬ್ಬರು ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT