ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಮನ ತತ್ವಾದರ್ಶದಿಂದ ಸಮಾಜದ ಪರಿವರ್ತನೆ’

Last Updated 20 ಜನವರಿ 2014, 8:09 IST
ಅಕ್ಷರ ಗಾತ್ರ

ಮೂಡಲಗಿ: ‘ಮಹಾಯೋಗಿ ವೇಮನ ಅವರ ತತ್ವ, ಆದರ್ಶಗಳನ್ನು ಅಳವಡಿಸಿ ಕೊಳ್ಳುವುದರ ಮೂಲಕ ಸಮಾಜವನ್ನು ಪರಿವರ್ತನೆ ಮಾಡುವುದು ಅವಶ್ಯವಿದೆ’ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ಯ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.

ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಸೇವಾ ಸಮಿತಿ ಇವರ ಆಶ್ರಯದಲ್ಲಿ ಭಾನುವಾರ ಆಚರಿಸಿದ 602ನೇ ಮಹಾಯೋಗಿ ವೇಮನ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಲ್ಕು ಸಾವಿರಕ್ಕೂ ಅಧಿಕ ವಚನಗಳನ್ನು ರಚಿಸಿರುವ ಮಹಾನ್‌ ಸಂತ ವೇಮನ ಅವರನ್ನು ಕೇವಲ ಜಯಂತಿ, ಪೂಜೆಯಂತ ಗೌರವಗಳಿಗೆ ಮಾತ್ರ ಸೀಮಿತಗೊಳಿಸಿದೆ ಅವರ ಸಂದೇಶಗಳನ್ನು ಪಾಲಿಸಬೇಕಾಗಿದೆ. ಬುದ್ಧ, ಬಸವಣ್ಣ, ಪೈಗಂಬ ರರು, ಅಕ್ಕಮಹಾದೇವಿ ಸೇರಿದಂತೆ ಈ ನಾಡಿನ ಅನೇಕ ದಾಸರು, ಶರಣರು, ಸಂತರ ಸಂದೇಶಗಳನ್ನು ಅನುಸರಿಸದೆ ಮೌಢ್ಯದತ್ತ ಸಾಗುತ್ತಿರುವುದು ವಿಷಾದದ ಸಂಗತಿ ಎಂದರು.

ರಡ್ಡಿ ಸಮಾಜದ ಜನರು ತಮ್ಮತ ನವನ್ನು ಉಳಿಸಿಕೊಂಡು, ಸ್ವಾಭಿಮಾನಿಗಳಾಗಿ ಸಮಾಜ ವನ್ನು ಬೆಳೆಸುವುದರೊಂದಿಗೆ ಬೇರೆ ಸಮಾಜ ಗಳೊಂದಿಗೆ ಪ್ರೀತಿ, ಸೌಹಾರ್ದತೆಯನ್ನು ಬೆಳೆಸಿ ಕೊಳ್ಳಬೇಕು ಎಂದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ ‘ವೇಮನ, ಬಸವಣ್ಣ, ಕನಕದಾಸರಂತ ಅನೇಕ ದಾರ್ಶನಿಕರು ಜನರ ಕಲ್ಯಾಣಕ್ಕಾಗಿ ಭೂಮಿಯ ಮೇಲೆ ಅವತರಿಸಿ ಅನೇಕ ಸಂದೇಶಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಸಂದೇಶಗಳನ್ನು ಅನುಸರಿಸುವುದರ ಮೂಲಕ ಅವರನ್ನು ಸದಾ ಸ್ಮರಿಸುವುದು ಅವಶ್ಯವಿದೆ. ಜಾತಿ, ಧರ್ಮ ಎನ್ನದೆ ಎಲ್ಲರೂ ಒಂದಾಗಿ ಸಮಾಜವನ್ನು ಬೆಳೆಸಬೇಕು ಎಂದರು.

ಮೂಡಲಗಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪಕ್ಕೆ ಪುರಸಭೆಯಿಂದ 22 ಗುಂಟೆ ನಿವೇಶನ ನೀಡುವುದಾಗಿ ತಿಳಿಸಿದ ಅವರು ರಡ್ಡಿ ಸಮಾಜದ ಜನರು ಸೇರಿ ಒಂದು ವರ್ಷದ ಒಳಗಾಗಿ ಕಲ್ಯಾಣ ಮಂಟಪ ನಿರ್ಮಿಸಲು ಮುಂದಾಗಬೇಕು ಎಂದರು.

ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ರಾಜು ಕಾಗೆ, ಎನ್.ಎಚ್. ಕೋನರಡ್ಡಿ, ಬಿ.ಆರ್. ಯಾವಗಲ ಅವರು ಮಾತನಾಡಿದರು. ಕೆ.ಬಿ. ತಳಗೇರಿ ವೇಮನ ಅವರ ಕುರಿತು ಉಪನ್ಯಾಸ ನೀಡಿದರು.

ಎಂ.ಟಿ. ಹೊಸೂರ ಅವರು ಅಧ್ಯಕ್ಷತೆ ವಹಿಸಿದ್ದರು. ಸಾನಿಧ್ಯವಹಿಸಿದ್ದ ಶ್ರೀಪಾದಬೋಧ ಸ್ವಾಮಿಗಳು, ವೇಮನಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. ವಿ.ಬಿ. ನಾಗನೂರ, ಮಾಜಿ ಶಾಸಕ ಆರ್.ವಿ. ಪಾಟೀಲ, ಪುರಸಭೆ ಅಧ್ಯಕ್ಷ ರಾಮಣ್ಣಾ ಹಂದಿಗುಂದ, ಜಿ.ಪಂ. ಸದಸ್ಯ ರಮೇಶ ಉಟಗಿ, ಕೆ.ಬಿ. ನಾಯ್ಕ, ಶಿವನಗೌಡ ಪಾಟೀಲ, ಲಕ್ಷ್ಮಣ ದೇವರು, ರಾಮಣ್ಣಾ ಮಹಾರಡ್ಡಿ, ಮಲಗೌಡ ಪಾಟೀಲ ಅತಿಥಿಯಾಗಿ ವೇದಿಕೆಯಲ್ಲಿದ್ದರು.

ತಮ್ಮಣ್ಣಾ ಪಾರ್ಶಿ, ಬಿ.ಬಿ. ಹಂದಿಗುಂದ, ಡಿ.ಬಿ. ಪಾಟೀಲ, ಆರ್.ಪಿ. ಬಡಗಣ್ಣವರ, ಎಸ್.ಆರ್. ಸೋನವಾಲಕರ, ಈಶ್ವರಪ್ಪ ಸತರಡ್ಡಿ, ಬಾಬು ಸೋನವಾಲಕರ, ಬಿ.ವಿ. ಗುಲ ಗಾಜಂಬಗಿ, ಎ.ವಿ. ಹೊಸಕೋಟಿ, ಪ್ರಕಾಶ ಸೋನ ವಾಲಕರ, ವಿಜಯಕುಮಾರ ಸೋನವಾಲಕರ, ಸಂತೋಷ ಸೋನವಾಲಕರ ಮತ್ತಿತರು ಉಪಸ್ಥಿತ ರಿದ್ದರು.  ಎಂ.ಎಚ್. ಸೋನವಾಲಕರ ಸ್ವಾಗತಿಸಿ ದರು, ಪ್ರೊ. ಸಂಗಮೇಶ ಗುಜಗೊಂಡ, ಪ್ರೊ. ಎ.ಪಿ. ರಡ್ಡಿ ನಿರೂಪಿಸಿದರು, ಪುಲಿಕೇಶಿ ಸೋನವಾಲಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT