ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀರಾಮ ಸೇನೆಗೆ ನಿಷೇಧವಿಲ್ಲ’

Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ಮನೋಹರ್‌ ಪರಿಕ್ಕರ್‌ ಸರ್ಕಾರ ಗೋವಾದಲ್ಲಿ ಪ್ರಮೋದ್‌ ಮುತಾಲಿಕ್‌ ನೇತೃತ್ವದ ಶ್ರೀರಾಮ ಸೇನೆ ಚಟುವಟಿಕೆಗಳಿಗೆ ನಿಷೇಧ ಹೇರುವ ಸಾಧ್ಯತೆ ಇಲ್ಲ ಎಂದು ಗೋವಾ ಬಿಜೆಪಿ ಹೇಳಿದೆ. ಯಾವುದೇ ವ್ಯಕ್ತಿ ಕಾನೂನು  ಚೌಕಟ್ಟಿನಲ್ಲಿ ಎಲ್ಲಿಯಾ­ದರೂ ಚಟುವಟಿಕೆ­ಗಳನ್ನು ನಡೆಸಲು ಸಂವಿಧಾನ ಅವಕಾಶ ನೀಡಿದೆ  ಎಂದು ಹೇಳಿದೆ.

‘ಶ್ರೀರಾಮ ಸೇನೆ ಗೋವಾದಲ್ಲಿ ಚಟುವಟಿಕೆ ನಡೆಸುವುದನ್ನು ತಡೆ­ಯುವುದಿಲ್ಲ. ಕಾನೂನು ಬಾಹಿರ ಚಟುವಟಿಕೆ ನಡೆಸದ ಹೊರತು ನಿಷೇಧ ಸಾಧ್ಯವಿಲ್ಲ’ ಎಂದು ಬಿಜೆಪಿ ಗೋವಾ ವಕ್ತಾರ ವಿಲ್ಫ್ರೆಡ್‌ ಮೆಸ್ಕೋಟಾ ಹೇಳಿದ್ದಾರೆ.

ಪಬ್‌, ಡ್ರಗ್‌ ಮತ್ತು ಸೆಕ್ಸ್ ಸಂಸ್ಕೃತಿ ವಿರುದ್ಧ ಹೋರಾಡಲು ಗೋವಾದಲ್ಲಿ ಶ್ರೀರಾಮಸೇನೆ ಸಂಘಟನೆಯನ್ನು ಆರಂಭಿಸ­ಲಾ­ಗುವುದು ಎಂದು ಮುತಾಲಿಕ್‌ ಘೋಷಿಸಿದ ನಂತರ ಬಿಜೆಪಿ ಈ ಹೇಳಿಕೆ ನೀಡಿದೆ. ಮಂಗಳೂರಿನಲ್ಲಿ ನಡೆದ ಪಬ್‌ ದಾಳಿ ರೀತಿಯಲ್ಲಿ ಚಟುವಟಿಕೆ ನಡೆಸದೆ ಇದು ಶಾಂತಿಯುತ­ವಾಗಿರಲಿದೆ ಎಂದೂ  ಮುತಾಲಿಕ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT