ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂಕೋರ್ಟ್‌ ಮಾರ್ಗಸೂಚಿ ಕಡ್ಡಾಯ ಪಾಲಿಸಿ’

Last Updated 22 ಜುಲೈ 2014, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲಾ ಮಕ್ಕಳ ಸುರ­ಕ್ಷತೆಯ ದೃಷ್ಟಿಯಿಂದ ಸುಪ್ರೀಂ­ಕೋರ್ಟ್‌ ನೀಡಿರುವ ಮಾರ್ಗಸೂಚಿಗಳನ್ನು  ಶಾಲಾ ವಾಹನ ಚಾಲಕರು ಕಡ್ಡಾಯ­ವಾಗಿ ಪಾಲಿಸಬೇಕು’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಎಂ.ಎನ್‌.­ಬಾಬು ರಾಜೇಂದ್ರ ಪ್ರಸಾದ್‌ ಹೇಳಿದರು.

ರಾಷ್ಟ್ರೀಯ ರಸ್ತೆ ಸುರಕ್ಷತೆ ಸಂಘ­ಟನೆಯು ನಗರ ಸಂಚಾರ ಪೊಲೀಸರ ಸಹ­ಯೋಗದಲ್ಲಿ ಶಾಲಾ ವಾಹನ ಚಾಲಕ­ರಿಗಾಗಿ ಮಂಗಳವಾರ ಆಯೋಜಿ­ಸಿದ್ದ ಸುರಕ್ಷತಾ ಚಾಲನೆ ಕುರಿತ ಕಾರ್ಯಾ­ಗಾರದಲ್ಲಿ ಅವರು ಮಾತನಾಡಿದರು.

‘ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ರೂಪಿಸಲಾಗಿರುವ ಮಾರ್ಗ­­ಸೂಚಿ­ಗಳನ್ನು ಚಾಲಕರು ಕಡ್ಡಾ­ಯ­ವಾಗಿ ಪಾಲಿಸಿದರೆ ಅಪಘಾತ­ಗಳನ್ನು ತಡೆಯಬಹುದು. ಈ ಬಗ್ಗೆ ಚಾಲಕರಲ್ಲಿ ಜಾಗೃತಿ  ಹೆಚ್ಚಾಗಬೇಕು’ ಎಂದರು.

‘40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವಾಹನ ಚಾಲನೆ ಮಾಡಬಾರದು. ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾ­ರದು. ವಾಹನದ ಕಿಟಕಿಗೆ ಗ್ರಿಲ್‌ ಅಳ­ವಡಿಸಿ­ರಬೇಕು’ ಎಂದು ಹೇಳಿದರು.

‘ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ­ದ­ವರು ಹಗಲಿನಲ್ಲಿ ವಾಹನ ಚಲಾ­ಯಿಸ­­ಬಾ­­ರದು. ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕ­ಳನ್ನು ವಾಹನದಲ್ಲಿ ತುಂಬಬಾ­ರದು. ಮಕ್ಕಳು ನಾಳೆಯ ನಮ್ಮ ಭವಿಷ್ಯ. ಅವ­ರನ್ನು ಎಲ್ಲ ರೀತಿಯ ಅಪಾಯದಿಂದ ಕಾಪಾಡ­ಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.

ರಾಷ್ಟ್ರೀಯ ರಸ್ತೆ ಸುರಕ್ಷತೆ ಸಂಘ­ಟನೆಯ ಅಧ್ಯಕ್ಷ ಎಸ್‌.ಸತ್ಯಪಾಲ, ‘ನಗರ­ದಲ್ಲಿ 11,000 ಕಿ.ಮೀ. ರಸ್ತೆ­ಗಳಿವೆ. 380 ಸಿಗ್ನಲ್‌ಗಳಿವೆ. ನಗರದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಹೆಚ್ಚಾ­ಗಿದೆ. 8,000 ಬಿಎಂಟಿಸಿ ಬಸ್‌­ಗಳಿವೆ. ಆದರೆ, ಇವುಗಳನ್ನು ನಿಯಂ­ತ್ರಿಸಲು 3,000 ಸಂಚಾರ ಪೊಲೀಸರಿದ್ದಾರೆ’ ಎಂದರು.

‘ಶಾಲಾ ವಾಹನ ಚಾಲಕರಿಗೆ ಅರಿವು ಮೂಡಿಸುವ ಮೂರನೇ ಕಾರ್ಯಕ್ರಮವಾಗಿದೆ. ನಗರದ ಹೆಚ್ಚಿನ ಶಾಲೆಗಳ ವಾಹನ ಚಾಲಕರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT