ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಭಾರತಕ್ಕೆ ಕುವೆಂಪು ಪ್ರೇರಣೆ’

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೆಂಗೇರಿ: ‘ಪ್ರಪಂಚದ ಸಾಹಿತ್ಯವನ್ನು ಅಧ್ಯಯನ ಮಾಡಿದ ಮಹಾ ಮೇಧಾವಿ ಕುವೆಂಪು. ಜಾತಿ ಮೌಢ್ಯ ವಿನಾಶ ಪ್ರವರ್ತಕರಾಗಿದ್ದ ಕುವೆಂಪು ಅವರ ಸಾಹಿತ್ಯಗಳು ಅಮೂಲ್ಯ. ದಾರ್ಶ­ನಿಕ ದೂರದರ್ಶಿಗಳಾಗಿದ್ದ ಕುವೆಂಪು­­ರವರ ವೈಚಾರಿಕತೆಗಳೇ ಇಂದಿನ ಪ್ರಧಾನಿ­ಯ­ವರ ಸ್ವಚ್ಛ ಭಾರತಕ್ಕೆ ಪ್ರೇರಣೆ’ ಎಂದು ಕವಿ ಡಾ. ಸಿದ್ದಲಿಂಗಯ್ಯ  ಹೇಳಿದರು.

ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರ ಮತ್ತು ರಾಜ­ರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಅಧ್ಯ­ಯನ ಕೇಂದ್ರದಲ್ಲಿ ಶನಿವಾರ ಆಯೋಜಿ­ಸಿದ್ದ ‘ಕುವೆಂಪು: ಶೂದ್ರ ಮಹಾ ಪ್ರತಿಭೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಲೇಖಕ ಪ್ರೊ. ಕೆ.ಎಸ್. ಭಗವಾನ್, ‘ಕುವೆಂಪು ಅಖಂಡ ಪ್ರತಿಭಾವಂತ­ರಾಗಿ­ದ್ದರು. ಇಂಗ್ಲಿಷ್ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಕುವೆಂಪು ಬಂದದ್ದು, ಇಂಗ್ಲಿಷ್ ಮೂಲಕ ಪ್ರಪಂಚದ ಸಾಹಿತ್ಯ ಓದಿದ್ದ ಅವರು ನಾಟಕದಲ್ಲಿ ಸರಳ ರಗಳೆಯನ್ನು ರಚಿಸಿದ ಮೊದಲಿಗರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT