ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸತನಕ್ಕೆ ಹೃದಯ ತುಡಿಯಬೇಕು’

ಹೊಸ ಪಾತ್ರದ ಬಗ್ಗೆ ರಮೇಶ್‌ ಅರವಿಂದ್‌ ಮನದ ಮಾತು
Last Updated 16 ಜನವರಿ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ‘ ರಸಪ್ರಶ್ನೆಯ ಗ್ರ್ಯಾಂಡ್‌ ಫೈನಲ್‌ನ ಮೆರುಗು ಹೆಚ್ಚಿಸಿದ್ದು ನಟ ರಮೇಶ್‌ ಅರವಿಂದ್‌. ಸುಮಾರು ಎರಡು ಗಂಟೆ ಕಾಲ ತಮ್ಮ ಪಾತ್ರವನ್ನು ಬದಲಾಯಿಸಿಕೊಂಡಿದ್ದ ಅವರು ‘ಕ್ವಿಜ್‌ ಮಾಸ್ಟರ್‌’ ಆಗಿ ಗಮನ ಸೆಳೆದರು.

ಲವಲವಿಕೆಯಿಂದ ಓಡಾ­ಡುತ್ತಾ, ವಿದ್ಯಾರ್ಥಿ­ಗಳೊಂ­ದಿಗೆ ಆಪ್ತವಾಗಿ ಮಾತನಾಡುತ್ತಾ, ಬೆನ್ನುತಟ್ಟುತ್ತಾ ಅವರಲ್ಲಿನ ಕುತೂಹಲವನ್ನು ಹೆಚ್ಚಿಸಿದರು. ಕೊನೆ­ಯಲ್ಲಿ ‘ಅಮೆರಿಕಾ ಅಮೆರಿಕಾ’ ಸಿನಿಮಾದ ಡೈಲಾಗ್‌ ಹೇಳಿ ಜೋರು ಚಪ್ಪಾಳೆ ಗಿಟ್ಟಿಸಿಕೊಂಡರು.

ಕಾರ್ಯಕ್ರಮದ ಬಳಿಕ ನೀಡಿದ ಸಂದರ್ಶನದಲ್ಲಿ ಹೊಸ ಪಾತ್ರದ ಬಗ್ಗೆ ರಮೇಶ್‌ ತಮ್ಮ ಅನುಭವ ಹಂಚಿಕೊಂಡರು.
* ಹೊಸ ಪಾತ್ರದ ಅನುಭವ ಹೇಗಿತ್ತು?
ಹೊಸತನಕ್ಕೆ ಹೃದಯ ತುಡಿಯ­ಬೇಕು. ಹೊಸ ವಿಷಯಗಳನ್ನು ಪ್ರಯತ್ನಿಸಬೇಕು. ಆಗ ಜೀವನ ಸೃಜನಾತ್ಮಕವಾಗಿರುತ್ತದೆ. ಚಟುವಟಿ­ಕೆಯಿಂದ ಕೂಡಿರುತ್ತದೆ.  ಪ್ರಜಾವಾಣಿ ಪತ್ರಿಕೆಯು ನನಗೊಂದು ಅದ್ಭುತ ವೇದಿಕೆ ಕಲ್ಪಿಸಿಕೊಟ್ಟಿತು. ತುಂಬಾ ಖುಷಿಯಿಂದ ಕಾರ್ಯಕ್ರಮ ನಡೆಸಿಕೊಟ್ಟೆ. ವಿದ್ಯಾರ್ಥಿ­ಗಳು ಹಾಗೂ ಪ್ರೇಕ್ಷಕರೊಂದಿಗೆ ವಿಭಿನ್ನ ರೀತಿಯಲ್ಲಿ ಸಂವಾದ ನಡೆಸಲು ಅವಕಾಶ ಲಭಿಸಿತು.

* ಕ್ವಿಜ್‌ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಮೊದಲ ಬಾರಿಯೇ?
ನಾನು ಮೊದಲ ಬಾರಿ ಬಣ್ಣ ಹಚ್ಚಿದ್ದು ಒಂದು ಕ್ವಿಜ್‌ ಕಾರ್ಯ­ಕ್ರಮದಲ್ಲಿ. ಆ ಸಂದರ್ಭದಲ್ಲಿ ನಾನು ಸ್ಕೋರರ್‌ ಆಗಿ ಕಾರ್ಯನಿರ್ವಹಿಸಿದ್ದೆ. ಒಂದೆರಡು ಬಾರಿ ನನ್ನ ಮುಖವನ್ನು ತೆರೆಯ ಮೇಲೆ ತೋರಿಸಲಾಗಿತ್ತು. ಟಿ.ವಿಯಲ್ಲೂ ಕ್ವಿಜ್‌ ಕಾರ್ಯಕ್ರಮ ನಡೆಸಿಕೊಡಬೇಕು ಎಂಬ ಆಸೆ ಇದೆ.

* ಒತ್ತಡದ ಅನುಭವವಾಯಿತೇ?
ಖಂಡಿತ ಇಲ್ಲ. ಸಿನಿಮಾ ಕ್ಷೇತ್ರವು ಒತ್ತಡವನ್ನು ತೊಡೆದು ಹಾಕಿದೆ. ‘ಚೆನ್ನಾಗಿ ನಡೆಸಿಕೊಟ್ಟಿದ್ದೀರಿ. ಪೂರ್ಣಾವಧಿ ಇದೇ ಕಾರ್ಯದಲ್ಲಿ ತೊಡಗಿ’ ಎಂದು ಎಲ್ಲರೂ ಹೇಳುತ್ತಿ­ರುವುದು ನೋಡಿದರೆ ತುಂಬಾ ಖುಷಿಯಾಗುತ್ತದೆ.

* ವಿದ್ಯಾರ್ಥಿಗಳೊಂದಿಗಿನ ಸಂವಾದ ಹೇಗಿತ್ತು?
8, 9 ಹಾಗೂ 10ನೇ ತರಗತಿ ಮಕ್ಕಳು ಕಷ್ಟಕರ ಪ್ರಶ್ನೆಗೆ ನಿಖರ ಉತ್ತರ ನೀಡಿದ್ದು ಅಚ್ಚರಿ ಉಂಟು ಮಾಡಿತು. ಅವರ ಜ್ಞಾನದ ಮಟ್ಟ ಅದ್ಭುತ. ಇವರ ಮೇಲೆ ಆಶಾವಾದ ಇಟ್ಟುಕೊಳ್ಳಬಹುದು. ನಾನು ಕೂಡ ಹೊಸ ವಿಷಯ ಕಲಿತೆ.

* ಕ್ವಿಜ್‌ ನಡೆಸಿಕೊಡಲು ಸಿದ್ಧತೆ ಹೇಗಿತ್ತು?
ಒಂದು ದಿನ ಸಿದ್ಧತೆಗಾಗಿ ಮೀಸ­ಲಿಟ್ಟಿದ್ದೆ. ಪ್ರಶ್ನೆಗಳು ಹಾಗೂ ಅವುಗಳ ಉತ್ತರಗಳ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಿದ್ದೆ. ಕ್ವಿಜ್‌ ಮಾಸ್ಟರ್‌ಗಳ ಸಲಹೆ ಪಡೆದಿದ್ದೆ.

* ಕಾರ್ಯಕ್ರಮದ ಬಗ್ಗೆ ನಿಮ್ಮ ಅನಿಸಿಕೆ?
ಇದೊಂದು ಅದ್ಭುತ ಕಾರ್ಯಕ್ರಮ. ಮಕ್ಕಳಿಗೆ ಇಂಥ ಕಾರ್ಯಕ್ರಮ ಅವಶ್ಯ ಕೂಡ. ಅದಕ್ಕಾಗಿ ಪತ್ರಿಕೆಯನ್ನು ಅಭಿನಂದಿಸುತ್ತೇನೆ. ಮಕ್ಕಳ ಬುದ್ಧಿಶಕ್ತಿಯನ್ನು ಒರೆಗೆ ಹಚ್ಚುವ ಪ್ರಯತ್ನವಿದು.

ಮರಿಮಲ್ಲಪ್ಪ ಶಾಲೆ ಚಾಂಪಿಯನ್‌

ಚಾಂಪಿಯನ್ನರ ಬಲ, ಸೋತವರ ಛಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT