ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ವರ್ಷಕ್ಕಿಂತ ಹಳೇ ಡೀಸೆಲ್‌ ವಾಹನ ಗುಜರಿಗೆ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೆಹಲಿಯಲ್ಲಿರುವ 15 ವರ್ಷಕ್ಕಿಂತ ಹಳೆಯ ಡೀಸೆಲ್ ಎಂಜಿನ್ ವಾಹನಗಳ ನೋಂದಣಿ ರದ್ದುಪಡಿಸಬೇಕು, ಅವು ದೆಹಲಿಯಿಂದ ಹೊರಗೆ ನೋಂದಣಿ ಯಾಗದಂತೆ ತಡೆಯಲು ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡಬಾರದು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿದೆ.
‘15 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಎಂಜಿನ್ ವಾಹನಗಳು ಬಿಎಸ್‌–1 ಮತ್ತು ಬಿಎಸ್‌–2 ನಿಯಮಗಳಿಗೆ ಅನುಗುಣವಾಗಿರುತ್ತವೆ. ಅವುಗಳಿಂದ ಹೆಚ್ಚಿನ ಮಾಲಿನ್ಯ ಆಗುವುದರಿಂದ ಅವನ್ನು ಗುಜರಿಗೆ ಹಾಕಬೇಕು.

ಒಂದಿನಿತು ಲೋಪವೂ ಇಲ್ಲದಂತೆ ಈ ಕೆಲಸ ನಡೆಯಬೇಕು. ಮೊದಲು ಹಳೆಯ ವಾಹನಗಳನ್ನು ಗುರುತಿಸಿ ಅವುಗಳ ನೋಂದಣಿ ರದ್ದು ಮಾಡಬೇಕು’  ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಎಲ್ಲಿ ನೋಂದಣಿ?: ‘10ರಿಂದ 15 ವರ್ಷದೊಳಗಿನ ಡೀಸೆಲ್‌ ಎಂಜಿನ್ ವಾಹನಗಳ ನೋಂದಣಿ ರದ್ದುಪಡಿಸಬೇಕು ಹಾಗೂ ಅವನ್ನು ದೆಹಲಿಯಿಂದ ಹೊರಗೆ ನೋಂದಣಿ ಮಾಡಿಸಲು ಎನ್‌ಒಸಿ ನೀಡಬಹುದು’ ಎಂದು ಎನ್‌ಜಿಟಿ ಹೇಳಿದೆ.

‘ಆದರೆ ಬೇರೆ ರಾಜ್ಯಗಳ ಯಾವ ನಗರಗಳಲ್ಲಿ ನೋಂದಣಿ ಮಾಡಿಸಬೇಕು ಎಂಬುದನ್ನು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು. ವಾಹನಗಳ ಸಂಖ್ಯೆ ಕಡಿಮೆ ಇರುವ ನಗರಗಳನ್ನು ರಾಜ್ಯಗಳು ಆಯ್ಕೆ ಮಾಡಿಕೊಳ್ಳಬಹುದು. ಅಂತಹ ನಗರಗಳಲ್ಲಿ ನೋಂದಣಿ ಮಾಡಿಸಲಷ್ಟೇ ದೆಹಲಿ ಸಾರಿಗೆ ಇಲಾಖೆ ಎನ್‌ಒಸಿ ನೀಡಲಿದೆ’ ಎಂದು ಎನ್‌ಜಿಟಿ ಸ್ಪಷ್ಟಪಡಿಸಿದೆ.

ಗುಜರಿಗೆ ಹಾಕಿದರೆ ಪರಿಹಾರ ?

ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ರೂಪಿಸುವ ಬಗ್ಗೆ ಬೃಹತ್ ಕೈಗಾರಿಕಾ ಸಚಿವಾಲಯ ಚರ್ಚೆ ನಡೆಸಬೇಕು. ಹಾಗೂ ವಾಹನಗಳನ್ನು ಗುಜರಿಗೆ ಹಾಕುವ ಮಾಲೀಕರಿಗೆ ದೊರೆಯುವ ಪರಿಹಾರದ ಬಗ್ಗೆಯೂ ಚರ್ಚೆ ನಡೆಸಬೇಕು ಎಂದು ಎಂದು ಎನ್‌ಜಿಟಿ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT