ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ಕ್ಕೆ ತೇಜಪಾಲ್‌ ಜಾಮೀನು ಅರ್ಜಿ ವಿಚಾರಣೆ

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಿಳಾ ಸಹೋ­ದ್ಯೋಗಿ ಮೇಲಿನ ಅತ್ಯಾಚಾರ ಪ್ರಕರ­ಣ­­ದಲ್ಲಿ ಜಾಮೀನು ನೀಡು­ವಂತೆ ಕೋರಿ ತೆಹೆಲ್ಕಾ ಮಾಜಿ ಸಂಪಾದಕ ತರುಣ್‌ ತೇಜಪಾಲ್‌ ಅವರು ಸಲ್ಲಿಸಿದ್ದ ಮನವಿ­ಯನ್ನು ಸುಪ್ರೀಂಕೋರ್ಟ್‌ ಜೂನ್‌ 27­ರಂದು ವಿಚಾರಣೆಗೆ
ಕೈಗೆತ್ತಿ­ಕೊಳ್ಳ­ಲಿದೆ.

ಮೊದಲು ಈ ಜಾಮೀನು ಅರ್ಜಿ ವಿಚಾ­ರಣೆ­ಯನ್ನು ಜುಲೈ 7ಕ್ಕೆ ನಿಗದಿಪಡಿಸಲಾಗಿತ್ತು. ಜಾಮೀನು ಅರ್ಜಿ ವಿಚಾರಣೆ­ಯನ್ನು ತ್ವರಿತ­ವಾಗಿ ವಿಚಾ­ರಣೆಗೆ ಒಳ­ಪಡಿಸ­ಬೇಕು ಎಂದು  ತೇಜ­ಪಾಲ್‌ ಪರ ಹಿರಿಯ ವಕೀಲ ಸಲ್ಮಾನ್‌ ಖುರ್ಷಿದ್‌ ನ್ಯಾಯಾ­ಲಯ­ವ­ನ್ನು ಕೋರಿ­­ಕೊಂ­ಡರು. ಇದನ್ನು ಪರಿಗಣಿ­ಸಿದ  ನ್ಯಾಯ­ಮೂರ್ತಿ­­ಗ­ಳಾದ ವಿಕ್ರಮ­ಜಿತ್‌ ಸೇನ್‌ ಹಾಗೂ ಎಸ್‌.­­ಕೆ.­ಸಿಂಗ್‌್ ಅವರಿದ್ದ ಪೀಠವು ವಿಚಾ­ರಣೆ­ಯನ್ನು ಜೂನ್‌­ 27ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT