ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಲೋಕಸಭೆ, 33 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಇಂದು

Last Updated 12 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ವಿವಿಧ ಹತ್ತು ರಾಜ್ಯಗಳ 3 ಲೋಕಸಭಾ ಕ್ಷೇತ್ರಗಳಿಗೆ ಹಾಗೂ 33 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಉಪಚುನಾವಣೆ ನಡೆಯಲಿದ್ದು ವೇದಿಕೆ ಸಿದ್ಧವಾಗಿದೆ.

ಕಳೆದ ಮೇ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಈ ಉಪ ಚುನಾವಣೆ ದೊಡ್ಡ ಪರೀಕ್ಷೆ ಎನಿಸಿದೆ.
ವಡೋದರ (ಗುಜರಾತ್), ಮೈನ್ಪುರಿ (ಉತ್ತರ ಪ್ರದೇಶ) ಹಾಗೂ ಮೆದಕ್ (ತೆಲಂಗಾಣ)ಗಳಲ್ಲಿ ಉಪ ಚುನಾವಣೆ ನಡೆಯಲಿದೆ.

33 ವಿಧಾನಸಭಾ ಕ್ಷೇತ್ರಗಳ ಪೈಕಿ 11 ಉತ್ತರ ಪ್ರದೇಶದಲ್ಲಿ, 9 ಗುಜರಾತ್, 4 ರಾಜಸ್ತಾನ, ಎರಡು ಪಶ್ಚಿಮ ಬಂಗಾಳದಲ್ಲಿ, ಐದು ಈಶಾನ್ಯ ರಾಜ್ಯಗಳಲ್ಲಿ ಹಾಗೂ ತಲಾ ಒಂದು ಕಡೆ ಛತ್ತೀಸ್ ಗಢ ಮತ್ತು ಆಂಧ್ರ ಪ್ರದೇಶದಲ್ಲಿವೆ.ಈ ಎಲ್ಲ ಕ್ಷೇತ್ರಗಳ ಮತಗಳ ಎಣಿಕೆ ಸೆ. 16ರಂದು ನಡೆಯಲಿದೆ. ಮೈನ್ಪುರಿ ಕ್ಷೇತ್ರದಲ್ಲಿ ಎಸ್‌ಪಿ ವರಿಷ್ಠ ಮುಲಾಯಂ  ರಾಜೀ ನಾಮೆಯಿಂದ ಕ್ಷೇತ್ರ ತೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT