ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43 ದೇಶಗಳಿಗೆ ಇ–ವೀಸಾ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೆರಿಕ, ಜರ್ಮನಿ ಹಾಗೂ ಇಸ್ರೇಲ್‌ ಸೇರಿದಂತೆ ೪೩ ದೇಶಗಳಿಗೆ ಕೇಂದ್ರ ಸರ್ಕಾರವು ಅಂತರ್ಜಾಲ ವೀಸಾ (ಇ–ವೀಸಾ) ಸೌಲಭ್ಯ ಆರಂಭಿಸಿದೆ.

ಇ– ವೀಸಾ ಸೌಲಭ್ಯಕ್ಕೆ ಗುರುವಾರ ಇಲ್ಲಿ ಚಾಲನೆ ನೀಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌, ‘ದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಬಯಸಿದ್ದೇವೆ. ಒಟ್ಟಾರೆ ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಪ್ರವಾಸೋದ್ಯಮದ ಕೊಡುಗೆ ಸುಮಾರು ಶೇ ೭ರಷ್ಟು ಇದೆ. ಈ ಪ್ರಮಾಣವನ್ನು ದ್ವಿಗುಣಗೊಳಿಸುವುದು ನಮ್ಮ ಉದ್ದೇಶ’ ಎಂದರು.

ರಷ್ಯಾ, ಉಕ್ರೇನ್‌, ಬ್ರೆಜಿಲ್‌, ಸಂಯುಕ್ತ  ಅರಬ್‌ ಒಕ್ಕೂಟ, ಜೋರ್ಡಾನ್‌, ಕೀನ್ಯಾ, ಫಿಜಿ, ಫಿನ್‌ಲ್ಯಾಂಡ್‌, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಸಿಂಗಪುರ, ಮಾರಿ­ಷಸ್‌, ಮೆಕ್ಸಿಕೊ, ನಾರ್ವೆ, ಓಮನ್‌,  ಫಿಲಿಪ್ಪೀನ್ಸ್‌್ ಮತ್ತಿತರ ದೇಶಗಳಿಗೆ ಮೊದಲ ಹಂತದಲ್ಲಿ ಈ ಸೌಲಭ್ಯ ಸಿಗಲಿದೆ.

ಅಪಾಯಕಾರಿ ದೇಶಗಳನ್ನು ಬಿಟ್ಟು ಉಳಿದ ಎಲ್ಲ ದೇಶಗಳಿಗೂ ಹಂತ ಹಂತವಾಗಿ ಇ– ವೀಸಾ ಸೌಲಭ್ಯ ವಿಸ್ತರಿಸಲಿದ್ದೇವೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು. ಇ–ವೀಸಾಗೆ ೩೦ ದಿನಗಳವರೆಗೆ ಮಾನ್ಯತೆ ಇರುತ್ತದೆ. ಪ್ರವಾಸಿಗರು ವರ್ಷದಲ್ಲಿ ಎರಡು ಬಾರಿ ಈ ಸೌಲಭ್ಯ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT