ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

600 ಕೋಟಿ ಮೌಲ್ಯದ ಮಾದಕ ವಸ್ತು ವಶ

ಕಳ್ಳಸಾಗಣೆ: ನೌಕಾಪಡೆ ವಶಕ್ಕೆ ಪಾಕ್ ಬೋಟ್
Last Updated 21 ಏಪ್ರಿಲ್ 2015, 15:44 IST
ಅಕ್ಷರ ಗಾತ್ರ

ಅಹಮದಾಬಾದ್(ಪಿಟಿಐ): ಸುಮಾರು 600 ಕೋಟಿ ಮೌಲ್ಯದ ಮಾದಕದ್ರವ್ಯವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಪಾಕಿಸ್ತಾನದ ಬೋಟೊಂದನ್ನು ಗುಜರಾತ್ ಕರಾವಳಿ ತೀರದ ಅಂತರ ರಾಷ್ಟ್ರೀಯ ಜಲ ಗಡಿಯಲ್ಲಿ ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಸೋಮವಾರ ವಶಕ್ಕೆ ಪಡೆದಿವೆ.

ಬೋಟ್ ನಲ್ಲಿದ್ದ ಮಾದಕದ್ರವ್ಯ ಒಳಗೊಂಡ 232 ಪ್ಯಾಕೆಟ್ ಗಳು ಮತ್ತು ಪಾಕಿಸ್ತಾನ ಮೂಲದ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಪಿಎಸ್ ತಂತ್ರಜ್ಞಾನದ ನೆರವು ಬಳಿಸಿಕೊಂಡು ಕರಾವಳಿ ಕಾವಲು ಪಡೆ 'ಸಂಗ್ರಾಮ್' ಮತ್ತು ನೌಕಾಪಡೆಯ 'ಕಂಡೋಲ್' ಹಡಗುಗಳ ಮೂಲಕ  ಬೆನ್ನಟ್ಟಿ ಮಾದಕ ವಸ್ತು ಸಾಗಿಸುತ್ತಿದ್ದ ಬೋಟನ್ನು ವಶಕ್ಕೆ ಪಡೆಯಿತು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT