ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಅರಣ್ಯದಲ್ಲಿನ ಪ್ರಾಣಿ, ಪಕ್ಷಿಗಳಿಗಾಗಿ ನೀರು

Published 4 ಮೇ 2024, 15:49 IST
Last Updated 4 ಮೇ 2024, 15:49 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಅರಣ್ಯ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವಂತೆ ಇಲಾಖೆ ಸಿಬ್ಬಂದಿ ಟ್ಯಾಂಕರ್‌ ಮೂಲಕ ಅರಣ್ಯದಲ್ಲಿ ಇಟ್ಟಿರುವ ತೊಟ್ಟಿಗಳಿಗೆ ನೀರು ತುಂಬಿಸಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ.

ಮಂಡಿಬೆಲೆ, ಕೋರಮಂಗಲ, ನಾರಾಯಣಪುರ, ಕಣಿತಹಳ್ಳಿ ಅರಣ್ಯ ಪ್ರದೇಶದಲ್ಲಿನ ಪ್ರಾಣಿಗಳು ಬಿಸಿಲಿನ ತಾಪಮಾನ ತಾಳಲಾರದೆ ನೀರಿಗಾಗಿ ಹಳ್ಳಿಗಳತ್ತ ಬರುತ್ತಿವೆ. ಅರಣ್ಯ ಪ್ರದೇಶದೊಳಗೆ ಸಿಮೆಂಟ್ ತೊಟ್ಟಿಗಳನ್ನು ಇಟ್ಟು ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ತೊಟ್ಟಿ ಇಟ್ಟು ನೀರು ತುಂಬಿಸಲಾಗುತ್ತಿದೆ.

ಬೆಂಕಿ ಹಚ್ಚದಂತೆ ಮನವಿ: ಕೆಲ ಕಿಡಿಗೇಡಿಗಳು ಮಧ್ಯಾಹ್ನ ಸಮಯದಲ್ಲಿ ಅರಣ್ಯದ ಕಡೆಗೆ ಬಂದು ಮೊಬೈಲ್ ರಿಲ್ಸ್ ಮಾಡಿಕೊಂಡು ಬೆಂಕಿ ಹಚ್ಚುತ್ತಿರುವ ಕಾರಣ ಬೆಂಕಿ ಹೊತ್ತುಕೊಂಡು ಅಪಾರ ಪ್ರಮಾಣದ ಗಿಡ, ಮರಗಳು ಸುಟ್ಟುಹೋಗುತ್ತಿವೆ. ಇದರ ಜತೆ ಪ್ರಾಣಿ, ಪಕ್ಷಿಗಳಿಗೂ ಹಾನಿ ಆಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಬಾರದು ಎಂದು ಸಾರ್ವಜನಿಕರಿಗೆ ಅರಣ್ಯ ಇಲಾಖೆ ಅಧಿಕಾರಿ ರೆಹಮಾನ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT