ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಆಗರ ಮೋಕ್ಷಧಾಮ

ನಿರ್ವಹಣೆ ಕೊರತೆ– ಶವ ಸುಡಲು ಕಟ್ಟಿಗೆಗೂ ಬರ
Last Updated 19 ಡಿಸೆಂಬರ್ 2016, 8:29 IST
ಅಕ್ಷರ ಗಾತ್ರ
ಅಜ್ಜಂಪುರ: ಜನಪ್ರತಿನಿಧಿಗಳ-ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಪ್ರೋತ್ಸಾಹ ನೀಡು ವಲ್ಲಿ ದಾನಿಗಳ ನಿರಾಸಕ್ತಿ, ನಿರ್ವಹಣೆ ಕೊರತೆಯಿಂದ ಪಟ್ಟಣದ ಚಿತಾಗಾರ  ಅವ್ಯವಸ್ಥೆ ಆಗರವಾಗಿದೆ.
 
ಬೀರೂರು ರಸ್ತೆಯಲ್ಲಿರುವ ಪಟ್ಟ ಣದ ಚಿತಾಗಾರದ ಗೇಟ್ ಮುಂಭಾಗ ಡಾಬವೊಂದರ ಅನುಪಯುಕ್ತ ತ್ಯಾಜ್ಯ-ಕೊಳಚೆ ನೀರು ಹಿರಿಯುತ್ತಿದೆ.  ಮೋಕ್ಷಧಾಮದ ಸುತ್ತಲೂ ಅಳವಡಿಸಿದ್ದ ಕಲ್ಲುಕಂಬ-ತಂತಿ ಹಾಳಾಗಿದೆ. ಹಲವು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಗಿಡ-ಮರಗಳು, ನೀರಿನ ಕೊರತೆಯಿಂದ ಒಣಗುತ್ತಿವೆ. ನೀರಿಗಾಗಿ ಕೊರೆಯಿಸಿದ ಕೊಳವೆ ಬಾವಿಗೆ ಅಳವಡಿಸಿರುವ ಮೋಟಾರು ಹಾಗೂ ನೀರಿನ ತೊಟ್ಟಿ ಅಳಿವಿನಂಚಿಗೆ ಜಾರುತ್ತಿವೆ. ಶವ-ದಹನದ ಬಳಿಕ ದೇವರ ದರ್ಶನಕ್ಕಾಗಿ ಕಟ್ಟಿಸಿದ್ದ ದೇವಾಲಯವೂ ಶಿಥಿಲವಾ ಗಿದೆ. ಇನ್ನು ಇಲ್ಲಿಗೆ ಬರುವವರಿಗಾಗಿ ನಿರ್ಮಾಣಗೊಂಡಿದ್ದ ಸಾಮೂಹಿಕ ಶೌಚಾಲಯಗಳು ದುರ್ನಾತ ಬೀರುತ್ತಾ, ಅನುಪಯುಕ್ತವಾಗಿ ನಿಂತಿವೆ. 
 
ಶವ ದಹನಕ್ಕಾಗಿ 1999 ರಲ್ಲಿ ಜೆ.ಸಿ ಕ್ಲಬ್, ಸಾರ್ವಜನಿಕರ ಹಾಗೂ  ಧರ್ಮ ಸ್ಥಳ ಧರ್ಮಾಧಿಕಾರಿಗಳ ನೆರವಿ ನೊಂದಿಗೆ ಶವ ದಹನದ ಚೇಂಬರ್ ಅಳವಡಿಸಿತ್ತು. ಬಳಿಕ 2010 ರಲ್ಲಿ ಮೋಕ್ಷಧಾಮ ನಿರ್ವಹಣೆ ಮೋಕ್ಷಧಾಮ ಸಮಿತಿ ವಹಿಸಿಕೊಂಡಿತ್ತು. ಆಗ ಮೋಕ್ಷಧಾಮ ಸುತ್ತ ಕಲ್ಲುಕಂಬ ಅಳವಡಿಕೆ, ಗಿಡ ನೆಡುವಿಕೆ, ಕೊಳವೆ ಬಾವಿ ನಿರ್ಮಾಣ, ಶೌಚಾಲಯ ನಿರ್ಮಾ ಣ ಸೇರಿದಂತೆ ಹಲವು ಕಾಮಗಾರಿಗಳು ನಡೆದವು. ಶವ ದಹನಕ್ಕೆ ಬರುವವರಿಗೆ ಕಟ್ಟಿಗೆಯನ್ನು ನೀಡಲಾಗುತ್ತಿತ್ತು ಎನ್ನು ತ್ತಾರೆ ಮೋಕ್ಷಧಾಮ ಸಮಿತಿ ಪ್ರಹ್ಲಾದ್.
 
ಪ್ರಸ್ತುತ, ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದರೂ ಶವ ದಹನಕ್ಕೆ ಕಟ್ಟಿಗೆ ನೀಡುತ್ತಿಲ್ಲ. ಹಣ ನೀಡುತ್ತೇವೆ ಎಂದರೂ, ಯಾರೊಬ್ಬರೂ ಮೋಕ್ಷ ಧಾಮ ಸ್ವಚ್ಚತೆಗೆ ಮುಂದೆ ಬರುವುದಿಲ್ಲ. ಹೀಗಾಗಿ ಸ್ವಚ್ಛತೆ ಕಾಪಾಡುವುದೇ ಸವಾ ಲಾಗಿದೆ. ಈವರೆಗೆ 283 ಶವಗಳನ್ನು ದಹಿಸಲಾಗಿದೆ. ಪ್ರತಿ ಶವ ದಹನಕ್ಕಾಗಿ ₹500 ಸಂಗ್ರಹಿಸಲಾಗಿದೆ. ಇದರ ಒಟ್ಟು ಮೊತ್ತ ₹ 75 ಸಾವಿರ ಬ್ಯಾಂಕ್‌ ಇಡ ಲಾಗಿದೆ. ಮೋಕ್ಷಧಾಮದ ಅಭಿವೃದ್ದಿಗೆ ಇದನ್ನು ಕಾಯ್ದಿರಿಸಲಾಗಿದೆ ಎನ್ನುತ್ತಾರೆ ಮೋಕ್ಷಧಾಮ ಸಮಿತಿಯವರು.
 
ಮೋಕ್ಷಧಾಮ ಯಾರಿಗೂ ಬೇಡ ವಾದ ಪಾಪದ ಕೂಸು. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿ-ಅಧಿಕಾರಿ-ಸಾರ್ವ ಜನಿಕರಿಗೆ ನಿಜವಾದ ಕಾಳಜಿ ಇಲ್ಲವಾ ಗಿದೆ. ಮೋಕ್ಷಧಾಮದ ಅವನತಿಗೆ ಕಾರಣ, ಅಭಿವೃದ್ಧಿಗೆ ಸಲಹೆ-ಸೂಚನೆ, ಮಾರ್ಗದರ್ಶನ ನೀಡುವರು ಹೆಚ್ಚಾಗಿ ದ್ದಾರೆ. ಆದರೆ, ಮೋಕ್ಷಧಾಮದ ಉಳಿವು ಮತ್ತು ಅಭಿವೃದ್ಧಿಗೆ ಕೈ ಜೋಡಿ ಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂಬ ಆರೋಪ ಇದೆ.
 
ತುರ್ತಾಗಿ ಮೋಕ್ಷಧಾಮದ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಮೋಕ್ಷಧಾಮದ ಒಳಗೆ ಸ್ವಚ್ಚತೆ ಕಾಪಾಡ ಬೇಕು ಎಂಬುದು ಜನರ ಒತ್ತಾಯ.
ಇಲ್ಲಿರುವ ದೇವಾಲಯದ ಜೀರ್ಣೋದ್ದಾರ ಮಾಡಬೇಕು. ತಂಗು ದಾಣ ಮತ್ತು ಶೌಚಾಲಯವನ್ನು ಸುಸ್ಥಿತಿ ಯಲ್ಲಿಡಬೇಕು. ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಗ್ರಾಮಸ್ಥರು.
 
ಅಧಿಕಾರ ಇದ್ದವರು, ಬದುಕಿರುವ ವರಿಗಾಗಿ ನಿವೇಶನ, ಆಶ್ರಯ ಮನೆ, ಕಟ್ಟಡ, ಸ್ಮಾರಕ ನಿರ್ಮಾಣ ಮಾಡಿದರೆ ಸಾಲದು. ಸತ್ತವರಿಗೆ ಸದ್ಗತಿ ದೊರಕಿ ಸಿಕೊಡುವ ಇಂತಹ ಮೋಕ್ಷಧಾಮಗಳ ಅಭಿವೃದ್ಧಿ ಮತ್ತು ಸೂಕ್ತ ನಿರ್ವಹಣೆ ಕಡೆಗೂ ಹೆಚ್ಚಿನ ಆದ್ಯತೆ ಮತ್ತು ಕಾಳಜಿ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
 
***
ಮೋಕ್ಷಧಾಮಕ್ಕೆ ಬರುವ ಹೆಣಗಳನ್ನು ಸುಡುವುದಕ್ಕೆ ಕಟ್ಟಿಗೆ ಕೂಡಾ ಸಿಗುತ್ತಿಲ್ಲ. ಹಣ ನೀಡುತ್ತೇವೆ ಕಟ್ಟಿಗೆ ಕೊಡಿ ಎಂದರು ಅರಣ್ಯ ಇಲಾಖೆ ಕಟ್ಟಿಗೆ ನೀಡುತ್ತಿಲ್ಲ.
-ಪ್ರಹ್ಲಾದ್
ಮೋಕ್ಷಧಾಮ ಸಮಿತಿ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT