ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕ್ಕಾಂಬುಧಿ ಗ್ರಾ.ಪಂ.ಕಟ್ಟಡ ಶಿಥಿಲ

ಕಿರಿದಾದ, ಶಿಥಿಲವಾದ ಪಂಚಾಯಿತಿ ಕಟ್ಟಡ ತೆರವಿಗೆ ಆಗ್ರಹ
Last Updated 20 ಡಿಸೆಂಬರ್ 2016, 14:45 IST
ಅಕ್ಷರ ಗಾತ್ರ
ಅಜ್ಜಂಪುರ: ಶಿಥಿಲಾವಸ್ಥೆಯಲ್ಲಿ ಇರುವ ಹಾಗೂ ಸೂಕ್ತ ಕೊಠಡಿ ವ್ಯವಸ್ಥೆಯೂ ಇಲ್ಲದ ಕಿರಿದಾಗಿರುವ ಗ್ರಾಮ ಪಂಚಾ ಯಿತಿ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಲು, ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ನೆರವು ನೀಡಬೇಕು ಎಂದು ಬುಕ್ಕಾಂ ಬುಧಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.
 
1988 ರಲ್ಲಿ ಮಂಡಲ ಪಂಚಾಯಿತಿ ಇದ್ದಾಗ ಪಂಚಾಯಿತಿ ಕಟ್ಟಡ ನಿರ್ಮಾಣ ಗೊಂಡಿತ್ತು. ಅಂದಿನ ಪರಿಸ್ಥಿತಿಗೆ ಅನು ಗುಣವಾಗಿ ರೂಪುಗೊಂಡಿರುವ ಪಂಚಾ ಯಿತಿ ಕಟ್ಟಡ ಕೇವಲ ಸಭಾಂಗಣ ಮತ್ತು ದಾಸ್ತಾನು ಕೊಠಡಿಯನ್ನು ಹೊಂದಿತ್ತು. ಈಗಲೂ ಇರುವ ಅಷ್ಟೇ ಕಿರಿದಾದ ಸ್ಥಳದಲ್ಲಿ ಸಭಾಂಗಣ ಹಾಗೂ ದಾಖಲೆ ಗಳ ದಾಸ್ತಾನು ಜತೆಗೆ ಕಂಪ್ಯೂಟರ್ ಇರಿಸಲಾಗಿದೆ.
 
ಗ್ರಾಮ ಪಂಚಾಯಿತಿ, ಬುಕ್ಕಾಂ ಬುಧಿ, ಢಣಾಯಕಪುರ, ಚಿಕ್ಕಾನ ವಂಗಲ, ನಾಗಬೋವನಹಳ್ಳಿ, ಹರಿಯನ ಹಳ್ಳಿ, ಕಣಬಗಟ್ಟೆ, ಕೆಂಚಾ ಪುರ, ಮಾಕನಹಳ್ಳಿ ಸೇರಿದಂತೆ ಒಟ್ಟು 8 ಗ್ರಾಮ ಗಳನ್ನು ಒಳಗೊಂಡಿದ್ದು, 17 ಸದಸ್ಯರನ್ನು ಹೊಂದಿದೆ. ಗ್ರಾಮ ವೊಂದರಲ್ಲಿಯೇ 4,653ಕ್ಕೂ ಅಧಿಕ ಜನಸಂಖ್ಯೆ ಇದೆ. ಇನ್ನು ಇಡೀ ಪಂಚಾ ಯಿತಿಗೆ ಒಳಪಡುವ ಜನ ಸಾಮಾನ್ಯರು ವಿವಿಧ ಕೆಲಸ ಕಾರ್ಯಗಳಿಗಾಗಿ ಪಂಚಾಯಿತಿಗೆ ದಿನನಿತ್ಯ ಭೇಟಿ ನೀಡುವವರಿಗೆ ಕಿರಿದಾದ ಕಟ್ಟಡದಲ್ಲಿ ಸ್ದಳಾವಕಾಶದ ಕೊರತೆಯಿದೆ.
 
ಮಳೆಗಾಲದಲ್ಲಿ ಸೋರುವ, ಸಭೆ-ಸಮಾರಂಭಕ್ಕೆ, ವಿವಿಧ ಕಾರ್ಯಗಳಿಗಾಗಿ ಪಂಚಾಯಿತಿ ಬರುವ ಜನಸಾಮಾನ್ಯರಿಗೆ, ಮಾಹೇವಾರು ಸರ್ವ ಸದಸ್ಯರ ಸಭೆ ನಡೆಸಲೂ ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ ಹಾಗೂ ಶಿಥಿಲ ಗೊಂಡಿರುವ ಪಂಚಾಯಿತಿ ಕಟ್ಟಡವನ್ನು ತೆರವುಗೊಳಿಸಬೇಕು. ಹಾಗೂ   ವಿಶಾಲ ಸಭಾಂಗಣ, ಅಧ್ಯಕ್ಷ, ಪಿಡಿಒ, ಕಾರ್ಯ ದರ್ಶಿ, ಕಂಪ್ಯೂಟರ್, ದಾಖಲೆ ಇರಿಸಲು ದಾಸ್ತಾನು ಕೊಠಡಿ, ಶೌಚಾಲಯ ಸೇರಿದಂತೆ ಹಲವು ಪ್ರತ್ಯೇಕ ಕೊಠಡಿ ಗಳನ್ನು ಒಳಗೊಂಡ ವ್ಯವಸ್ಥಿತ ಪಂಚಾ ಯಿತಿ ಕಟ್ಟಡವನ್ನು ನಿರ್ಮಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಬುಕ್ಕಾಂಬುಧಿ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಮಹೇಶ್ವರಪ್ಪ ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.
 
**
ಕಟ್ಟಡದಲ್ಲಿ ಕೆಲಸ ಕಷ್ಟ 
ಪ್ರಸ್ತುತ ಕಟ್ಟಡದ ಮೇಲ್ಚಾವಣಿ ಹಾಳಾಗಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಮಳೆ ಹನಿಯಿಂದಾಗಿ ಸಭೆ ನಡೆಸಲೂ, ಕಚೇರಿಯಲ್ಲಿ ಅಧಿಕಾರಿಗಳು ಕರ್ತವ್ಯ ನಡೆಸಲೂ ಕಷ್ಟವಾಗುತ್ತಿದೆ. ಇನ್ನು ದಾಸ್ತಾನು ಕೊಠಡಿಯಲ್ಲಿ ಇರಿಸಿ ರುವ ಹಿಂದಿನ ಅಮೂಲ್ಯ ದಾಖಲೆಗಳು ನಾಶ ಆಗುವ ಸಂಭವವೂ ಇದೆ.  ವಿದ್ಯುತ್ ಉಪಕರಣಗಳಿಗೂ ಹಾನಿ ಯಾಗುವ ಅಪಾಯವೂ ಇದೆ. ಇನ್ನು ಮಳೆಗಾಲದಲ್ಲಿ ಒರತೆ ನೀರು, ಕಟ್ಟಡದ ಗೋಡೆಯೊಳಗಿಂದ ಹೊರಬರುತ್ತಿದ್ದು, ಇಡೀ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT