ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಕೋನಹಳ್ಳಿ: ಹೆಚ್ಚುತ್ತಿರುವ ದನ ಕಳ್ಳತನ

Last Updated 30 ಅಕ್ಟೋಬರ್ 2017, 6:00 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಮಾಕೋನ ಹಳ್ಳಿ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ದನಗಳನ್ನು ಕಳ್ಳತನ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂವರು ಆರೋಪಿಗಳಿರುವ ಐಷಾರಾಮಿ ಕಾರೊಂದು ನಡುರಾತ್ರಿ ಮಾಕೋನಹಳ್ಳಿ ಗ್ರಾಮದ ಸಹಕಾರ ಸಂಘದ ಬಳಿ ಬಂದು ನಿಲ್ಲುತ್ತದೆ. ಕಾರಿ ನಿಂದ ಇಳಿದ ಇಬ್ಬರು ಆರೋಪಿಗಳು ಕಾರಿನ ಬಾಗಿಲನ್ನು ತೆರೆದು ರಸ್ತೆ ಬದಿಯಲ್ಲಿ ಮಲಗಿದ್ದ ದನವೊಂದಕ್ಕೆ ಹಗ್ಗವನ್ನು ಕಟ್ಟಿ ಕಾರಿಗೆ ತುಂಬುತ್ತಾರೆ.

ಬಳಿಕ ಇಬ್ಬರು ರಸ್ತೆಯಲ್ಲಿ ನಡೆದು ಸಾಗಿ ಕೆಲ ಹೊತ್ತಿನ ಬಳಿಕ ಎರಡು ದನಗಳೊಂದಿಗೆ ಬಂದು ಅವುಗಳನ್ನು ಸಹ ಐಷಾರಾಮಿ ಕಾರಿಗೆ ತುಂಬುವ ದೃಶ್ಯ ಸೆರೆಯಾಗಿ ವೈರಲ್‌ ಆಗಿದ್ದು, ಅನೇಕ ಸಂಘಟನೆಗಳು ದನಗಳ್ಳರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುವ ಗುಂಪುಗಳು ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದು, ಬಸ್‌ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ಮಲಗುವ ಬೀಡಾಡಿ ದನಗಳು ಮಾತ್ರವಲ್ಲದೇ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ರಾತ್ರೋರಾತ್ರಿ ಹಗ್ಗವನ್ನು ತುಂಡರಿಸಿ ಕದ್ದೊಯ್ಯುವ ಕೃತ್ಯಗಳು ನಡೆಯುತ್ತಿವೆ.

ಎರಡು ವರ್ಷಗಳಲ್ಲಿ ಪಟ್ಟದೂರು, ಬಡವನದಿಣ್ಣೆ, ತರುವೆ, ಮಾಕೋನಹಳ್ಳಿ ಗ್ರಾಮಗಳಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ನೂರಾರು ದನಗಳನ್ನು ರಾತ್ರೋರಾತ್ರಿ ಹಗ್ಗವನ್ನು ತುಂಡರಿಸಿ ಕದ್ದೊಯ್ದಿರುವ ಘಟನೆಗಳು ನಡೆದಿದ್ದು, ಕೆಲವು ಪ್ರಕರಣಗಳು ಪೊಲೀಸ್‌ಠಾಣೆಯಲ್ಲೂ ದಾಖಲಾಗಿವೆ.

ಬಹುತೇಕ ದನಕಳ್ಳತನ ಪ್ರಕರಣ ಗಳಲ್ಲಿ ಪೊಲೀಸರಿಗೆ ಅನು ಮಾನ ಬಾರದಿರಲಿ ಎಂಬ ಕಾರಣಕ್ಕಾಗಿ ಐಷಾ ರಾಮಿ ಕಾರುಗಳನ್ನು ಬಳಸಿ, ಕಾರಿನ ಹಿಂಬದಿಯ ಆಸನಗಳನ್ನು ತೆರೆದಿರಿಸಿ ಆ ಜಾಗದಲ್ಲಿ ದನಗಳನ್ನು ತುಂಬಿ ಕದ್ದೊಯ್ಯುವ ಕೃತ್ಯಗಳು ನಡೆಯುತ್ತವೆ ಎಂಬ ಆರೋಪವಿದ್ದು, ಕಳೆದ ಒಂದು ವರ್ಷದಲ್ಲಿ ಚಾರ್ಮಾಡಿಘಾಟಿಯಲ್ಲಿ ಟೆಂಪೊ ಟ್ರಾವೆಲರ್‌ ಒಂದು ಉರುಳಿಬಿದ್ದು, ಅದರೊಳಗಿದ್ದ ದನಗಳು ಸಾವನ್ನಪ್ಪಿರುವುದು ಹಾಗೂ ಆರು ತಿಂಗಳ ಹಿಂದೆ ಮೂಡಿಗೆರೆ ಬಸ್‌ ನಿಲ್ದಾಣದಲ್ಲಿ ರಾಜಾರೋಷವಾಗಿ ದನ ತುಂಬಲು ಯತ್ನಿಸಿ, ಆಟೊ ಚಾಲ ಕರನ್ನು ಬೆದರಿಸಿದ್ದ ಘಟನೆಗಳು ಈ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಕಳ್ಳತನ ಪ್ರಕರಣಗಳು ತಾಲ್ಲೂಕಿನ ಸ್ವಸ್ಥ್ಯವನ್ನು ಕೆಡಿಸಿದ್ದು, ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು, ರಸ್ತೆ ಬದಿಯ ದನಗಳು ಖಾಲಿಯಾಗುತ್ತಿದ್ದಂತೆ ಬೇರೆ ಕಸುಬುಗಳನ್ನು ಹರಸುವ ಅಪಾಯ ವಿರುವುದರಿಂದ ತಕ್ಷಣವೇ ದನಕಳ್ಳತನ ಪ್ರಕರಣಗಳನ್ನು ಭೇದಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.
ತಾಲ್ಲೂಕಿನಿಂದ ಕರಾವಳಿ ಭಾಗ ಹಾಗೂ ಬೇಲೂರು ಪ್ರದೇಶಗಳಿಗೆ ದನಗಳನ್ನು ಸಾಗಿಸಲಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಬಹು ತೇಕ ಪ್ರಕರಣಗಳು ಹೊರಗಿನಿಂದ ಬಂದವರ ಕೃತ್ಯವೇ ಆಗಿದ್ದರೂ, ಸ್ಥಳೀಯ ವಾಗಿ ಕೂಡ ಇವರಿಗೆ ನೆರವಾಗುವ ಜನರಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಇಸ್ಪಿಟ್‌ ದಂಧೆ, ಬೆಟ್ಟಿಂಗ್ ಹಾವಳಿ ಯಂತಹ ಸಮಾಜ ಬಾಹಿರ ಕೃತ್ಯ ಗಳಲ್ಲಿ ತೊಡಗಿರುವವರು ಸುಲ ಭವಾಗಿ ಹಣಗಳಿಸಲು ಹೊರಗಿನ ದನಕಳ್ಳರೊಂದಿಗೆ ಸಂಬಂಧ ಬೆಳೆಸಿ ತಮ್ಮೂರಿನ ಕೊಟ್ಟಿಗೆಗಳಲ್ಲಿ ಕಟ್ಟಿಹಾಕಿದ್ದ ದನಗಳನ್ನು ಬಿಚ್ಚಿ ತುಂಬಿಸಿಕೊಟ್ಟು ಹಣ ಪಡೆದುಕೊಳ್ಳುವ ಕೃತ್ಯಗಳು ನಡೆಯುತ್ತಿರಬಹುದು ಎಂದು ಜನರು ಶಂಕಿಸಿದ್ದು, ದನಕಳ್ಳರ ಕೃತ್ಯಕ್ಕೆ ಬಲಿಯಾಗಿ ದನ ಕಳೆದುಕೊಂಡ ರೈತಾಪಿ ವರ್ಗದ ಸಂಕಷ್ಟ ಕೇಳದಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT