ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಕಾಂ ನಿರ್ಲಕ್ಷ್ಯ: ನೆಲಕ್ಕೆ ತಾಗುತ್ತಿವೆ ವಿದ್ಯುತ್‌ ತಂತಿ

ಅವಗಢ ಸಂಭವಿಸುವ ಆತಂಕ, ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರ ಆಗ್ರಹ
Last Updated 6 ಮಾರ್ಚ್ 2017, 9:34 IST
ಅಕ್ಷರ ಗಾತ್ರ
ಅಜ್ಜಂಪುರ: ಪಟ್ಟಣದ ಬೀರೂರು ರಸ್ತೆಯ ಸಿದ್ದರಾಮೇಶ್ವರ ಸಮುದಾಯ ಭವನದ ಆಸುಪಾಸಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ತಂತಿಗಳು  ನೆಲಕ್ಕೆ ತಾಗುವಂತೆ ಜೋತು ಬಿದ್ದಿದ್ದು, ಅನಾಹುತ ಸಂಭವಿಸುವ ಅಪಾಯವಿದೆ. 
 
ಸಿದ್ಧರಾಮೇಶ್ವರ ಸಮುದಾಯ ಭವನ ಭಾಗದಲ್ಲಿ 25ಕ್ಕೂ ಅಧಿಕ ಮನೆಗಳು ಪೂರ್ಣಗೊಂಡು, ವಿದ್ಯುತ್ ಸಂಪರ್ಕ ಪಡೆದುಕೊಂಡಿವೆ. ಇನ್ನು ಹತ್ತಾರು ಕಟ್ಟಡಗಳು ನಿರ್ಮಾಣ ಹಂತ ದಲ್ಲಿದ್ದು, ಕಾಮಗಾರಿಗೆ ಅಗತ್ಯ ನೀರು ಪಡೆಯಲು ಕೊಳವೆಗೆ ಅಳವಡಿಸಲು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಂಡಿವೆ.
 
ಈ ಹೊಸ ಬಡಾವಣೆಯಲ್ಲಿ ರಸ್ತೆ, ಚರಂಡಿ ಇಲ್ಲ. ವಿದ್ಯುತ್ ಕಂಬಗಳು ಕಡಿಮೆ ಸಂಖ್ಯೆಯಲ್ಲಿ ಇವೆ. ಹೊಸದಾಗಿ ಮನೆ ನಿರ್ಮಾಣ ಮಾಡಿಕೊಂಡಿರುವ ಕೆಲವರು, ವಿದ್ಯುತ್ ಸಂಪರ್ಕಕಕ್ಕೆ ದೂರ ದಲ್ಲಿರೋ ಹಳೆ ವಿದ್ಯುತ್ ಕಂಬ ಗಳನ್ನು ಆಶ್ರಯಿಸಿದ್ದಾರೆ. ಹೀಗೆ ಸಂಪರ್ಕ ಪಡೆ ಯುವಾಗ ಅಲ್ಲಲ್ಲಿ ಮರದ ತುಂಡುಗಳ ನ್ನು ನೆಲಕ್ಕೆ ಹೂತು, ಅವುಗಳ ತುದಿ ಭಾಗಕ್ಕೆ ವಿದ್ಯುತ್ ತಂತಿ ಬಿಗಿದು, ಮನೆ ಯವರೆಗೆ ವೈರ್ ಕೊಂಡೊಯ್ದಿದ್ದಾರೆ.
 
ಪ್ರಸ್ತುತ ಇರೋ ವಿದ್ಯುತ್ ಕಂಬಗಳ ಪೈಕಿ ಕೆಲವು ಬಾಗಿವೆ. ಇನ್ನು ಜನ ಸಾಮಾನ್ಯರು ಅಲ್ಲಲ್ಲಿ ಬಳಸಿರುವ ಮರದ ತುಂಡುಗಳು ಬಿಸಿಲಿಗೆ ಒಣಗಿ, ಮಳೆಗೆ ನೆನೆದು ಹಾಳಾಗುವ ಹಂತ ತಲುಪಿವೆ. ಕನಿಷ್ಠ 25ಕ್ಕೂ ಅಧಿಕ ಮನೆಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗಳು ಕೈಗೆಟುಕುವಷ್ಟು ಕೆಳಮಟ್ಟ ದಲ್ಲಿವೆ. ಇನ್ನು ಹಲವು ಮನೆಗಳು ಸಂಪರ್ಕ ಪಡೆದಿರುವ ಶ್ರೀನಿವಾಸ್ ಗುಪ್ತ ಅವರ ಮನೆಯ ಬಳಿಯ ವಿದ್ಯುತ್ ಕಂಬದಿಂದ  ಹೊರಟಿರುವ ವಿದ್ಯುತ್ ತಂತಿಗಳು ನೆಲ ಮುಟ್ಟಿವೆ.
 
ಈ ಭಾಗದಲ್ಲಿ ಸಮುದಾಯ ಭವನ ಇರುವುದರಿಂದ ಶುಭ ಕಾರ್ಯಕ್ರಮ ಗಳಿಗೆ ಬಹುತೇಕರು ವಾಹನಗಳಲ್ಲಿ ಬರು ತ್ತಾರೆ. ವಾಹನ ಪಾರ್ಕಿಂಗ್ ಮಾಡುವ ವೇಳೆ ಮತ್ತು ವಾಹನವನ್ನು ತಿರುಗಿಸಿ ಕೊಳ್ಳುವಾಗ ವಿದ್ಯುತ್ ತಂತಿ ಅಳವ ಡಿಸಿರುವ ಮರದ ತುಂಡುಗಳಿಗೆ ತಾಗಿ, ವೈರ್ ತುಂಡಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. 
 
ಇಡೀ ಭಾಗದಲ್ಲಿ ಹತ್ತಾರು ಮನೆಗಳು ನಿರ್ಮಾಣ ಹಂತದಲ್ಲಿವೆ.  ಮನೆಗೆ ಆರ್‌ ಸಿಸಿಗೆ ಕಬ್ಬಿಣ ಕಟ್ಟವ ವೇಳೆ, ಕಬ್ಬಿಣ ವಿ ದ್ಯುತ್ ತಂತಿಗೆ ತಾಗಿದರೆ ಕಾರ್ಮಿಕರಿಗೆ ವಿ ದ್ಯುತ್ ಅಘಾತ ಆಗುವ ಸಾಧ್ಯತೆ ಹೆಚ್ಚಿದೆ.
 
ಅಗತ್ಯ ಪ್ರಮಾಣದ ಕಂಬ ಅಳವ ಡಿಸದ, ವಿದ್ಯುತ್ ವೈರ್ ಸಂಪರ್ಕಕ್ಕೆ, ತಂತಿ ನೆಲಕ್ಕೆ ತಾಗುವಂತಿ ರುವ ಮರದ ತುಂಡುಗಳನ್ನೇ ಬಳಸಿ ದ್ದರೂ, ಸ್ಥಳ ಪರಿಶೀಲಿಸದೇ ಸಂಪರ್ಕಕ್ಕೆ ಅನುಮತಿ ನೀಡಿದ ಹಾಗೂ ಸಂಪರ್ಕ ಕಲ್ಪಿಸಿದ ಮೆಸ್ಕಾಂ ವಿರುದ್ದ ಸಾರ್ವಜನಿ ಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
 
ಕೂಡಲೇ ಮೆಸ್ಕಾಂನವರು ಈ ಭಾಗದ ಮನೆಗಳಿಗೆ ಅಗತ್ಯ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಹಾಗೂ ಅವುಗಳಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಆ ಮೂಲಕ ಆಗಬಹು ದಾದ ಅಪಾಯ ಮತ್ತು ಅನಾಹುತ ಗಳಿಂದ ಜನಸಾಮಾನ್ಯರನ್ನು ರಕ್ಷಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
 
  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT