ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತುತ್ತಿದೆ ಒರತೆ: ಕೆಲವೆಡೆ ನೀರಿನ ಕೊರತೆ

Last Updated 16 ಮಾರ್ಚ್ 2015, 6:34 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಗ್ರಾಮದಲ್ಲಿ 2011ರಿಂದ ನೀರಿನ ಸಮಸ್ಯೆ ಆರಂಭ ವಾಗಿದೆ. ಎಲ್ಲ ಕಡೆ ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲ ಬತ್ತಿ ಹೋಗಿದೆ. ಜನವರಿ ವೇಳೆಗೆ ಕೆರೆ, ಬಾವಿಗಳಲ್ಲಿ ನೀರು ಕಡಿಮೆಯಾಗಿ ಜೀವ ಜಲಕ್ಕಾಗಿ ಪರಿತಪಿಸುತ್ತಿದ್ದೇವೆ...’
ಇದು ಮಂಗಳೂರು ತಾಲ್ಲೂಕಿನ ಕುಪ್ಪೆಪದವು ಗ್ರಾಮ ಪಂಚಾಯಿತಿಯ ಕಿಲೆಂಜಾರು ಪ್ರದೇಶದ ಜನರ ಅಳಲು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ನದಿಗಳು ಇದ್ದರೂ ಜಿಲ್ಲೆಯ ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ತೀವ್ರ ವಾಗಿದೆ. ಸಮಸ್ಯೆಯಿಂದ ತೊಂದರೆ ಗೀಡಾದ ಜನ ನೀರಿನ ವ್ಯವಸ್ಥೆ ಸರಿ ಪಡಿಸಲು ಆಗ್ರಹಿಸಿ ಹೋರಾಟ ನಡೆಸಿ ದ್ದಾರೆ. ಕೆಲವರು ಮಾನವ ಹಕ್ಕು ಆಯೋಗದವರೆಗೂ ಅಹವಾಲನ್ನು ಕೊಂಡೊ ಯ್ದಿದ್ದಾರೆ. ಇನ್ನು ಕೆಲವರು ಆ ಪ್ರದೇಶವನ್ನೇ ತೊರೆದಿದ್ದಾರೆ,

‘ಇರುವ ಕೊಳವೆ ಬಾವಿಗಳನ್ನು ಗ್ರಾಮ ಪಂಚಾಯಿತಿಯವರು ಸಮರ್ಪಕ ವಾಗಿ ನಿರ್ವಹಿಸುತ್ತಿಲ್ಲ. ಇದರಿಂದಾಗಿ ನೀರು ಪೂರೈಕೆಯೂ ಸರಿಯಾಗಿ ಆಗು ತ್ತಿಲ್ಲ. ಪರಿಣಾಮವಾಗಿ ಸರಕು ಸಾಗಣೆ ವಾಹನದಲ್ಲಿ ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಕಿಲೆಂಜಾರು ಚರ್ಚ್‌ ಕ್ರಾಸ್‌ ನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದು, ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನವೂ ಬಂದಿದೆ’ ಎನ್ನುತ್ತಾರೆ ಕಿಲೆಂಜಾರಿನ ಸಾಮಾಜಿಕ ಕಾರ್ಯಕರ್ತ ಶೇಖ್‌ ಅಬ್ದುಲ್ಲ.

*‘ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಗಳಿಂದ ಮಾಹಿತಿ ಬಂದ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದುವರೆಗೆ ಗಂಭೀರ ಸಮಸ್ಯೆ ವರದಿಯಾಗಿಲ್ಲ’.
ಪಿ.ಐ.ಶ್ರೀವಿದ್ಯಾ, ದಕ್ಷಿಣ ಕನ್ನಡ ಜಿ. ಪಂ ಸಿಇಒ

ಬಂಟ್ವಾಳ ತಾಲ್ಲೂಕಿನ ವೀರಕಂಬ ಸುತ್ತಮುತ್ತಲ ಪ್ರದೇಶಗಳಲ್ಲೂ ಕುಡಿ ಯುವ ನೀರಿನ ಸಮಸ್ಯೆ ಎದುರಾಗಿದೆ. ಪುತ್ತೂರು ತಾಲ್ಲೂಕಿನ ಬಪ್ಪಳಿಗೆಯಂತಹ ಕಡೆ ನೀರಿನ ಕೊರತೆ ಆರಂಭವಾಗಿದೆ. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಪೂರ್ಣಗೊಂಡಿಲ್ಲ.

‘ಬಂಟ್ವಾಳ ತಾಲ್ಲೂಕಿನಲ್ಲಿ ಹೆಚ್ಚಾಗಿ ಬಾಳೆಪುಣಿ, ನರಿಂಗಾನ, ಫಜೀರು, ಕುರ್ನಾಡು ಪ್ರದೇಶಗಳಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ಪಂಚಾಯಿತಿಗಳಲ್ಲಿ ನೀರಿನ ಕೊರತೆ ಕುರಿತು ದೂರುಗಳು ಬರಲು ಆರಂಭವಾಗಿದ್ದು, ಇನ್ನೂ 10 ದಿನಗಳ ಬಳಿಕ ಸಮಸ್ಯೆಯ ತೀವ್ರತೆ ಹೆಚ್ಚಾಗ ಬಹುದು’ ಎನ್ನುತ್ತಾರೆ ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹ ಣಾಧಿಕಾರಿ ಸಿಪ್ರಿಯನ್ ಮಿರಾಂಡ.

‘ಕಳೆದ ಬಾರಿ ಕರೋಪಾಡಿಯಲ್ಲಿ ಸಮಸ್ಯೆ ಉಂಟಾದಾಗ ಟ್ಯಾಂಕರ್‌ ಮೂಲಕ ನೀರು ಪೂರೈಸಿದ್ದೆವು. ಕುಡಿ ಯುವ ನೀರಿನ ಸಮಸ್ಯೆ ನಿವಾರಿಸಲು  ಕೊಳವೆ ಬಾವಿಗಳನ್ನು ಹೆಚ್ಚು ಅವಲಂಬಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕೊಳವೆ ಬಾವಿಗಳ ನೀರು, ಕೊರೆದ ಒಂದು ತಿಂಗಳಲ್ಲೇ ಬತ್ತಿಹೋಗಿದೆ. ಮೀಟರ್‌ಗಳನ್ನು ಅಳವಡಿಸಿರುವು ದರಿಂದ ನೀರಿನ ಮಿತ ಬಳಕೆಯ ಅರಿವು ಮೂಡಿದೆ’ ಎನ್ನುತ್ತಾರೆ ಮಿರಾಂಡ.

‘ಜಿಲ್ಲೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಆರಂಭವಾಗಿರುವುದು ಕೆಲವೆಡೆ ಮಾತ್ರ.  ಮಾರ್ಚ್‌ ಅಂತ್ಯದ ವೇಳೆಗೆ ಸಮಸ್ಯೆ ಬಿಗಡಾಯಿಸಬಹುದು. ಇದಕ್ಕಾಗಿ ಕ್ರಮ ಕೈಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ನೀರು ಸರಬರಾಜು ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT