ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಂತ್ರೀಕೃತ ಭತ್ತ ಕೃಷಿಗೆ ಒತ್ತು

ಯುವಕರನ್ನು ಸೆಳೆಯಲು ಕೃಷಿ ಇಲಾಖೆಯ ಪ್ರಯತ್ನ
Last Updated 6 ಜನವರಿ 2015, 9:01 IST
ಅಕ್ಷರ ಗಾತ್ರ

ಮಂಗಳೂರು: ಯುವ ಜನತೆ ಕೃಷಿ ಕ್ಷೇತ್ರದಿಂದ ವಿಮುಖರಾಗು ತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೃಷಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯತ್ತ ಯುವ ಮನಸ್ಸನ್ನು ಸೆಳೆಯುತ್ತಿದೆ. ಕೇವಲ ಮಾಹಿತಿ ನೀಡಿದರೆ ಸಾಲದು; ಜತೆಗೆ ಪ್ರಾತ್ಯಕ್ಷಿಕೆಯೂ ಅಗತ್ಯ ಎಂಬ ನಿಟ್ಟಿನಲ್ಲಿ ಭತ್ತದ ಬೇಸಾಯದ ಪ್ರಾತ್ಯಕ್ಷಿಕೆಗೆ ಒತ್ತು ನೀಡುತ್ತಿದೆ.

ಆಹಾರ ಬೆಳೆಯಾದ ಭತ್ತದ ಆದಾಯ, ಇಳುವರಿಯನ್ನು ಅಡಿಕೆ ಮೊದಲಾದ ವಾಣಿಜ್ಯ ಬೆಳೆಗಳ ಆದಾಯಕ್ಕೆ ಹೋಲಿಕೆ ಮಾಡಬಾರದು. ಬೇಸಾಯಕ್ಕೆ ಕೂಲಿ ಕಾರ್ಮಿಕರ ಕೊರತೆ ಇದೆ. ಅಲ್ಲದೆ ಆಳುಗಳ ಕೂಲಿಯೂ ಅಧಿಕವಾಗಿದೆ. ಈ ಕಾರಣ ದಿಂದಾಗಿ ಹಲವಾರು ರೈತರು ಹೊಲಗಳನ್ನು ಹಡೀಲು ಬಿಟ್ಟಿ ದ್ದಾರೆ. ಉತ್ಪಾದನಾ ವೆಚ್ಚವೂ ಅಧಿಕವಾಗಿರುವುದರಿಂದ ಕೃಷಿ ಯಿಂದ ದೂರ ಸರಿಯುವವರೇ ಹೆಚ್ಚು. ಯುವಕರಲ್ಲೇ ಭತ್ತದ ಬೇಸಾಯಕ್ಕೆ ಯಂತ್ರ ಬಳಸಿ ಬೇಸಾಯ ಮಾಡಲು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಪರಿಣಾಮಕಾರಿ ಆಗುವ ನಿರೀಕ್ಷೆ ಇದೆ.

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಸುರತ್ಕಲ್‌ ಸಮೀಪ ನಡೆಸಿದ ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ ಬಳಿಕ ಯಂತ್ರದ ಬಗ್ಗೆ ಹಲವರು ವಿಚಾರಿಸಿದ್ದಾರೆ ಎಂದು ಕೃಷಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಜಂಟಿ ನಿರ್ದೇಶಕ ಕೆಂಪೇ ಗೌಡ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಭತ್ತದ ಬೇಸಾಯದಲ್ಲಿ ಯಾಂತ್ರಿಕತೆ ಅಳವಡಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ಈ ಪ್ರಾತ್ಯಕ್ಷಿಕೆಯಲ್ಲಿ ತಿಳಿಸಲಾಗುತ್ತದೆ. 1 ಎಕರೆ ಹೊಲದಲ್ಲಿ ಭತ್ತದ ಬೇಸಾಯ ಮಾಡಲು ಕನಿಷ್ಠ 35 ಕೂಲಿಯಾಳುಗಳ ಅಗತ್ಯ ಇದೆ. ಅದೇ ಹೊಲದಲ್ಲಿ ಯಂತ್ರಗಳ ಮೂಲಕ ಬೇಸಾಯ ಮಾಡಲು ಕನಿಷ್ಠ 6 ಮಂದಿ ಸಾಕಾಗುತ್ತದೆ. ಜತೆಗೆ ಸಮಯವೂ ಉಳಿತಾಯ ವಾಗುತ್ತದೆ. ಸುಮಾರು 300 ಎಕರೆ ಗದ್ದೆಯಲ್ಲಿ ಭತ್ತದ ಹೈಬ್ರಿಡ್ ತಳಿಯಾದ ‘ಗಂಗಾ ಕಾವೇರಿ’ಯನ್ನು ಯಾಂತ್ರಿಕ ಕೃಷಿ ಮೂಲಕ ನಾಟಿ ಮಾಡಲಾಗಿದೆ.

3 ವರ್ಷಗಳಿಂದ ಹಡೀಲು ಬಿಟ್ಟಿರುವ ಗದ್ದೆಗಳೂ ಯಾಂತ್ರಿಕತೆಯ ಆಕರ್ಷಣೆಯಿಂದ ಭತ್ತದ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಕಡಿಮೆ ಹಿಡುವಳಿ ಹೊಂದಿ ರುವ ರೈತರಿಗೆ ಯಂತ್ರ ಖರೀದಿಗೆ ತೊಡಕಾಗುತ್ತದೆ ಎಂದಾದರೆ ಗುಂಪಿನ ಮೂಲಕ ಯಂತ್ರ ಖರೀದಿಸಬಹುದು. ಇಲಾಖೆಯೂ ಸಹಾಯಧನ ನೀಡುತ್ತಿದ್ದು, ಯುವಕರಿಗೆ ಸ್ವ ಉದ್ಯೋಗ ವಾಗಿಯೂ ಬಳಕೆಯಾಗುತ್ತದೆ. ಭತ್ತದ ಬೇಸಾಯ ಮಾಡು ವಂತೆ ಪ್ರೇರೇಪಿಸುವುದೇ ಈ ಪ್ರಾತ್ಯಕ್ಷಿಕೆಯ ಉದ್ದೇಶ ಎಂದು ಅವರು ವಿವರಿಸಿದರು.

ಪರಿಣಾಮಕಾರಿ ಅನುಷ್ಠಾನದಿಂದ ಸಫಲತೆ: ಇಲಾಖೆಯ ಮುತುವರ್ಜಿ ಪ್ರಶಂಸನೀಯವಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಯುವಕರು ಯಂತ್ರ ಖರೀದಿಸಿ ಇತರರನ್ನು ಕೆಲಸ ಮಾಡಿಸುವ ಬದಲು ಅವರೇ ಗದ್ದೆಗಿಳಿದು, ಯಂತ್ರದ ಸಂಪೂರ್ಣ ವಿವರಗಳನ್ನು ಅರಿತು ಕೊಂಡು ಕೆಲಸ ಮಾಡಬೇಕು. ಯಾಂತ್ರಿಕ ಕೃಷಿಯತ್ತ ಯುವಕ ರನ್ನು ಪ್ರೇರೇಪಿಸಲು ಸಾಧ್ಯವಾಗುತ್ತದೆ ಎಂಬುದನ್ನು ನಡದಲ್ಲಿ ಮಾಡಿ ತೋರಿಸಿದ್ದೇವೆ. ನಮ್ಮ ಪ್ರಯತ್ನದ ಫಲವಾಗಿ ಕೆಲವು ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೆಳ್ತಂಗಡಿಯ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ತಿಳಿಸಿದರು.

ಯಂತ್ರವನ್ನು ಕೇವಲ ಉದ್ಯಮದ ದೃಷ್ಟಿಯಲ್ಲಿ ಅಳವಡಿಸಿ ಕೊಳ್ಳದೆ ಸ್ವಂತ ಉಪಯೋಗ ಮಾಡಲು ಅವಕಾಶ ಇರುವವರು ಮಾಡಿದರೆ ಉತ್ತಮ. ಇಲ್ಲದೆ ಇದ್ದರೆ ಯಂತ್ರದ ಬಳಕೆ ಪರಿ ಣಾಮಕಾರಿಯಾಗಿ ಆಗಲಾರದು. ಯಂತ್ರದ ಉಪಯೋಗವನ್ನು ಪರಿಣಾಮಕಾರಿಯಾಗಿ ಮಾಡಿಕೊಂಡು ಸಫಲತೆ ಕಾಣಬಹುದು ಎಂದು ಅವರು ಹೇಳಿದರು.

ಅಕಾಲಿಕ ಮಳೆಯಿಂದಾಗಿ ಭತ್ತದ ಪೈರಿಗೆ ನುಸಿ ಬಾಧೆ ಕಂಡು ಬಂದಿದೆ. ಇದನ್ನು ಔಷಧಿ ಸಿಂಪಡಣೆಯಿಂದ ನಿಯಂತ್ರಿಸ ಬಹುದು. ಇಲ್ಲದೆ ಇದ್ದರೆ ಇಳುವರಿಗೆ ತೊಂದರೆ ಆಗುತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಔಷಧಿ ಪಡೆದುಕೊಂಡು ಔಷಧಿ ಸಿಂಪಡಿಸಿ ನುಸಿ ಬಾಧೆಯನ್ನು ನಿಯಂತ್ರಿಸಿಕೊಳ್ಳಬಹುದು ಎಂದು ಕೆಂಪೇಗೌಡ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT