ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ: ಆರೋಪ

Published 16 ಫೆಬ್ರುವರಿ 2024, 16:24 IST
Last Updated 16 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಗದಗ: ನಗರದ ಗಂಗಾಪುರ ಪೇಟೆಯಲ್ಲಿರುವ ಅಂಗನವಾಡಿ ಸಂಖ್ಯೆ 178ರಲ್ಲಿ ಮಕ್ಕಳಿಗೆ ನೀಡಿದ ಮೊಟ್ಟೆಗಳು ಕೊಳೆತಿದ್ದು, ಪೋಷಕರು ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ಮಕ್ಕಳಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.

‘ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ನೀಡಿದ್ದು ಆತಂಕ ಮೂಡಿಸಿದೆ. ಅಂಗನವಾಡಿ ಸಿಬ್ಬಂದಿ ಮೊಟ್ಟೆಗಳನ್ನು ಪರೀಕ್ಷಿಸಿ, ನಂತರ ಮಕ್ಕಳಿಗೆ ನೀಡಬೇಕು. ಕೆಟ್ಟಿರುವ ಪದಾರ್ಥಗಳನ್ನು ತಿಂದು ಮಕ್ಕಳ ಆರೋಗ್ಯ ಹದಗೆಟ್ಟರೆ ಯಾರು ಹೊಣೆ?’ ಎಂದು ಪೋಷಕಿ ಲಲಿತಾ ಪವಾಡೆಪ್ಪನವರ ಪ್ರಶ್ನಿಸಿದರು.

‘ಕೆಟ್ಟಿರುವ ಮೊಟ್ಟೆಯನ್ನು ವಿತರಿಸಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಗಂಗಾಪುರ ಪೇಟೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಲ್ಲಿನ ಸಿಬ್ಬಂದಿ ಹೊಸ ಮೊಟ್ಟೆಗಳನ್ನು ಉಳಿಸಿ, ಹಳೆಯವನ್ನು ಬೇಯಿಸಿ ಮಕ್ಕಳಿಗೆ ನೀಡಿದ್ದಾರೆ. ಇದರಿಂದ ಈ ಪ್ರಮಾದ ಆಗಿದೆ. ಅಂಗನವಾಡಿ ಶಿಕ್ಷಕಿಯನ್ನು ಅಮಾನತು ಮಾಡಿ, ಅಲ್ಲಿಗೆ ಬೇರೆಯವರನ್ನು ನಿಯೋಜಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪರುಶುರಾಮ ಶೆಟ್ಟಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT