ಕಲಬುರಗಿ: ರಾಜ್ಯದಲ್ಲಿ ಒಟ್ಟು 5.09 ಲಕ್ಷ ಸರ್ಕಾರಿ ನೌಕರರಿದ್ದು, 2.41 ಲಕ್ಷ ನೌಕರರು ಹಳೆ ಪಿಂಚಣಿ (ಒಪಿಎಸ್) ಹಾಗೂ 2.68 ಲಕ್ಷ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್ಪಿಎಸ್) ಒಳಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಸುನಿಲ್ ವಲ್ಯಾಪುರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎನ್ಪಿಎಸ್ ಯೋಜನೆಯಡಿ ನಿವೃತ್ತಿ ಹೊಂದಿ ಎಸ್ಎಸ್ಡಿಎಲ್– ಸಿಆರ್ಎದಿಂದ ಪ್ರಾನ್ (ಪಿಂಚಣಿ ಕಾಯಂ ಖಾತೆ ಸಂಖ್ಯೆ) ಖಾತೆಯಲ್ಲಿ ಇತ್ಯರ್ಥವಾದ ನೌಕರರು 1,686 ಇದ್ದಾರೆ. ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತದಲ್ಲಿ ಶೇ 60ರಷ್ಟು ಅನುಪಾತದಲ್ಲಿ ನೌಕರರಿಗೆ ಇತ್ಯರ್ಥಪಡಿಸಿ, ಶೇ 40ರಷ್ಟು ಮೊತ್ತ ಸಂಬಂಧಿಸಿದ ನಿವೃತ್ತರ ಎಎಸ್ಪಿಯಲ್ಲಿ ಹೂಡಿಕೆ ಮಾಡಿ, ಮಾಸಿಕ ಪಿಂಚಣಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.

7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ವೇತನ ಪರಿಷ್ಕರಣೆ ಕುರಿತು ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳೊಂದಿಗೆ ಆಯೋಗ ಸಮಾಲೋಚನೆ ನಡೆಸುತ್ತಿದ್ದು, ಆಯೋಗದ ಕಾಲಾವಧಿಯನ್ನು ಮಾರ್ಚ್ 15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.