ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಯತ್ನ, ಪೊಲೀಸರ ಮೇಲೆ ಹಲ್ಲೆ: 6 ವರ್ಷ ಜೈಲು

Last Updated 7 ಫೆಬ್ರುವರಿ 2022, 15:14 IST
ಅಕ್ಷರ ಗಾತ್ರ

ಕಲಬುರಗಿ: ಕೊಲೆ ಪ್ರಯತ್ನ, ಪೊಲೀಸರ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡೆತಡೆ ಮಾಡಿದ ಅಪರಾಧಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಆರು ವರ್ಷ ಜೈಲು ಶಿಕ್ಷೆ ಹಾಗೂ ₹ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಇಲ್ಲಿನ ಶಿವಾಜಿ ನಗರದ ನಿವಾಸಿ, ಖಾಸಗಿ ವಾಹನ ಚಾಲಕನಾಗಿದ್ದನಾಗೇಶ ಅಲಿಯಾಸ್‌ ನಾಗರಾಜ ಕಲ್ಯಾಣಪ್ಪ ಪೂಜಾರಿ (25) ಶಿಕ್ಷೆಗೆ ಒಳಪಟ್ಟವ.

2018ರ ಸೆ. 16ರಂದು ಕಲಬುರಗಿ ತಾಲ್ಲೂಕಿನ ಕೆರೆಬೋಸಗಾದ ಹೊಲದಲ್ಲಿನ ಪಾಳುಬಿದ್ದ ಮನೆಯಲ್ಲಿ ಅಡಗಿದ್ದ. ಈತನನ್ನು ಬಂಧಿಸಲು ಪೊಲೀಸರು ಹೋದಾಗ, ಅವರ ಮೇಲೆ ತಲವಾರಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ತಪ್ಪಿಸಿಕೊಂಡು ಓಡುವಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದರು. ಆದರೂ ಕೇಳದೆ ತಪ್ಪಿಸಿಕೊಳ್ಳುವಾಗ ಆತನ ಎಡಗಾಲಿಗೆ ಒಂದು ಗುಂಡು ಹೊಡೆದರು. ಕೆಲ ಸಮಯದಲ್ಲೇ ಮೇಲೆದ್ದ ನಾಗೇಶನು ಪೊಲೀಸರ ಮೇಲೆಯೇ ಮತ್ತೆ ಹಲ್ಲೆಗೆ ಮುಂದಾದ. ಆಗ ತನಿಖಾಧಿಕಾರಿ ಮತ್ತೊಂದು ಗುಂಡನ್ನು ಆತನ ಎಡಗಾಲಿಗೆ ಹಾರಿಸಿ, ನಂತರ ಬಂಧಿಸಿದರು.

ಪ್ರಕರಣದ ವಿಚಾರಣೆ ನಡೆಸಿದ1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್‌ ಅವರು, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.ಸರ್ಕಾರದ ಪರವಾಗಿ ಎಸ್‌.ಆರ್‌. ನರಸಿಂಹಲು ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT