ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಬಿಸಿಲಿಗೆ ಹೊಸ ತಂತ್ರಗಾರಿಕೆ ಕಂಡುಕೊಂಡ ರೈತರು

Published 28 ಏಪ್ರಿಲ್ 2024, 16:02 IST
Last Updated 28 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಮುಳಬಾಗಿಲು: ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗಿ ರೈತರು ತಮ್ಮ ಬೆಳೆಗಳಿಗೆ ಡ್ರಿಪ್ ಅಥವಾ ಕಾಲುವೆ ಮೂಲಕ ನೀರು ಹರಿಸಿದರೂ ಸಸಿಗಳು ತಂಪಾಗದೆ ಸುಳಿಗಳೇ ಒಣಗಿ ಹೋಗುತ್ತಿವೆ. ಇದರಿಂದ ತಾಲ್ಲೂಕಿನ ಗಡಿ ಭಾಗದ ರೈತರು ಎತ್ತರದ ಸ್ಪ್ರಿಂಕ್ಲರ್‌ ಮೂಲಕ ಬೆಳೆ ಸುಳಿಗೆ ನೀರು ಹರಿಸುವ ಮೂಲಕ ಕಾಪಾಡಿಕೊಳ್ಳುವ ತಂತ್ರಗಾರಿಕೆ ಕಂಡುಕೊಂಡಿದ್ದಾರೆ.

ತಾಲ್ಲೂಕಿನ ಟಿ.ಕುರುಬರಹಳ್ಳಿ ಬಳಿ ಮೋಹನ ಶೆಟ್ಟಿ ತಮ್ಮ 2.5 ಎಕರೆ ಪ್ರದೇಶದಲ್ಲಿ 250 ಮಾವಿನ ಗಿಡಗಳನ್ನು ನಾಟಿ ಮಾಡಿದ್ದು ನೀರಿನ ಸಮಸ್ಯೆ ಇರುವ ಕಾರಣದಿಂದ ಟ್ಯಾಂಕರ್ ಮೂಲಕ ನೀರು ಮಾವಿನ ಗಿಡಗಳ ಬುಡಕ್ಕೆ ಹರಿಸುತ್ತಿದ್ದರು. ಆದರೆ, ಎಷ್ಟೇ ನೀರು ಹರಿಸಿದರೂ ಮಾವಿನ ಗಿಡಗಳ ಸುಳಿ (ರೆಂಬೆ ಹಾಗೂ ಚಿಗುರು) ಒಣಗುತ್ತಲೇ ಇದ್ದ ಕಾರಣದಿಂದ ತೋಟದಲ್ಲಿ ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಿ ನೀರು ಹಾಯಿಸುತ್ತಿದ್ದಾರೆ.

ಸುಮಾರು ಒಂದು ತಿಂಗಳಿನಿಂದ ನೂತನ ಪ್ರಯೋಗಕ್ಕೆ ಮುಂದಾಗಿರುವ ಕಾರಣದಿಂದ ಮಾವಿನ ಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಸುತ್ತಮುತ್ತಲಿನ ಮಾವಿನ ತೋಪುಗಳವರು ಇದೇ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ಮಳೆಯಿಲ್ಲದೆ ಹಾಗೂ ಭೀಕರ ಬರಗಾಲದಿಂದ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ.

ಮಾವಿನ ಗಿಡಗಳ ಸಾಲುಗಳ ಮದ್ಯದಲ್ಲಿ ಮರದ ಕಡ್ಡಿಗಳ ಸಹಾಯದಿಂದ ಎತ್ತರಕ್ಕೆ ಕಟ್ಟಿರುವ ಸ್ಪ್ರಿಂಕ್ಲರುಗಳು.
ಮಾವಿನ ಗಿಡಗಳ ಸಾಲುಗಳ ಮದ್ಯದಲ್ಲಿ ಮರದ ಕಡ್ಡಿಗಳ ಸಹಾಯದಿಂದ ಎತ್ತರಕ್ಕೆ ಕಟ್ಟಿರುವ ಸ್ಪ್ರಿಂಕ್ಲರುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT