ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಭೂ ದಾಖಲೆ ಸೃಷ್ಟಿಸಿ ಮಾರಾಟ: ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ

Published 3 ಆಗಸ್ಟ್ 2023, 15:39 IST
Last Updated 3 ಆಗಸ್ಟ್ 2023, 15:39 IST
ಅಕ್ಷರ ಗಾತ್ರ

ಹುಣಸೂರು: ‘ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಆರೋಪಿಗಳಾದ ರಾಜು ಮತ್ತು ಕುಂಜಮ್ಮ ಎಂಬುವವರಿಗೆ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಿ ಬುಧವಾರ ಆದೇಶಿಸಿದೆ’ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಅರ್ಚನ ಪ್ರಸಾದ್ ತಿಳಿಸಿದ್ದಾರೆ.

ಪ್ರಕರಣದ ವಿವರ: ಹುಣಸೂರು ತಾಲ್ಲೂಕಿನ ಬಿ.ಆರ್.ಕಾವಲ್ ಗ್ರಾಮದ ಸರ್ವೆ ನಂ.40ರಲ್ಲಿನ 4 ಎಕರೆ ಕೃಷಿ ಭೂಮಿಯನ್ನು ಮಾಲೀಕ ಡೋಮಾನಿಕ್ ಎಂಬುವವರು 1994ರಲ್ಲಿ ಸರ್ಕಾರದಿಂದ ಸಾಗುವಳಿ ಪಡೆದು ವ್ಯವಸಾಯ ನಡೆಸಿದ್ದರು. ಈ ಮಧ್ಯೆ ಕೆಲವು ಕಾರಣದಿಂದಾಗಿ ಇವರು ಬಾಲನಾಗಮ್ಮ ಎಂಬುವವರಿಗೆ ಮಾರಾಟ ಮಾಡಿದ್ದು, ಕೃಷಿ ಭೂಮಿ ನೋಡಿಕೊಳ್ಳಲು ಬಾಲನಾಗಮ್ಮ ರಾಜು ಮತ್ತು ಕುಂಜಮ್ಮ ಎಂಬುವವರನ್ನು ಕಾವಲುಗಾರರನ್ನಾಗಿ ನೇಮಿಸಿದ್ದರು.

ಈ ಮಧ್ಯೆ ರಾಜು ತನ್ನ ಹೆಸರನ್ನು ಡೋಮಾನಿಕ್ ಬಿನ್ ಸಬಾಸ್ಟಿನ್ ಎಂದು ಬದಲಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿಕೊಂಡು 2010ರಲ್ಲಿ ಈ ಭೂಮಿಯನ್ನು ಕೆಂಪಮ್ಮ ಎಂಬುವವರಿಗೆ ಮಾರಾಟ ಮಾಡಿ ನೋಂದಣಿ ಮಾಡಿಸಿದ್ದರು.

ವಿಷಯ ತಿಳಿದ ಭೂ ಮಾಲೀಕರಾದ ಬಾಲನಾಗಮ್ಮ, ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ವರದಿಯನ್ನು ಸರ್ಕಲ್ ಇನ್ ಸ್ಪೆಕ್ಟರ್ ದೇವೇಂದ್ರ ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶಿರಿನ್ ಜಾವಿದ್ ಅನ್ಸಾರಿ, ಆರೋಪಿಗಳಾದ ರಾಜು ಮತ್ತು ಕುಂಜಮ್ಮ ಅವರಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT