ಇಂಡಿ: ‘ತಾಲ್ಲೂಕಿನಾದ್ಯಂತ ರೈತರು ಹಾಗೂ ಸಾರ್ವಜನಿಕರು ನೀರಿಲ್ಲದ ಕೊಳವೆ ಬಾವಿಗಳನ್ನು ಮುಚ್ಚಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಈ ಬಗ್ಗೆ ಡಂಗರು ಹೊಡೆದು ನೀರಿಲ್ಲದ ಕೊಳವೇ ಬಾವಿಗಳನ್ನು ಮುಚ್ಚಿಸಬೇಕು. ಒಂದು ವೇಳೆ ಮುಚ್ಚದೆ ಇದ್ದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ನೇರ ಹೊಣೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಅವರು ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಾಲ್ಲೂಕುಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಮ್ಮ ತಾಲ್ಲೂಕಿನಲ್ಲಿ ಕೊಳವೆ ಬಾವಿಗಳ ಪ್ರಕರಣಗಳು ಮರುಕಳಿಸಬಾರದು. ಬೊರವೆಲ್ ಕೊರೆಸುವವರು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಲ್ಲಿ ಎನ್ಒಸಿ ತೆಗೆದುಕೊಳ್ಳಬೇಕು. ಒಂದು ವೇಳೆ ತೆಗೆದುಕೊಳ್ಳದಿದ್ದರೆ ಅಂತವರ ವಿರುದ್ದ ಎಫ್ಐಆರ್ ದಾಖಲಿಸಿ’ ಎಂದರು.

‘ತಾಲ್ಲೂಕಿನ 47 ಗ್ರಾಮಗಳಿಗೆ 178 ಟ್ಯಾಂಕರ್ಗಳ ಮೂಲಕ 446 ಟ್ರೀಪ್ ನೀರನ್ನು ಪೂರೈಸಲಾಗುತ್ತಿದೆ. ಈಗಾಗಲೇ ತಾಲ್ಲೂಕಿನಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಎಲ್ಲಾ ಕೆರೆಗಳಲ್ಲಿ ಸುಮಾರು 20 ದಿನಗಳಾಗುವಷ್ಟು ನೀರನ್ನು ಶೇಖರಣೆ ಮಾಡಲಾಗಿದ್ದು, ಹಂಜಗಿ ಕೆರೆಯಲ್ಲಿ ಶೇ 30, ಲೋಣಿ ಕೆರೆಯಲ್ಲಿ ಶೇ 20, ಸಂಗೋಗಿ ಕೆರೆಯಲ್ಲಿ ಶೇ 25, ಅರ್ಜನಾಳ ಕೆರೆಯಲ್ಲಿ ಶೇ 30 ರಷ್ಟು ನೀರಿದೆ. ಹೀಗಾಗಿ ಮುಂದಿನ ಒಂದು ತಿಂಗಳು ಕುಡಿಯುವ ನೀರಿನ ತೊಂದರೆಯಾಗುವುದಿಲ್ಲ’ ಎಂದರು.

‘ರೈತರು ನೀರನ್ನು ಕುಡಿಯಲಿಕ್ಕೆ ಮಾತ್ರ ಬಳಸಬೇಕು. ಕೃಷಿಗೆ ಉಪಯೋಗಿಸಬಾರದು. ಒಂದು ವೇಳೆ ರೈತರು ಅಕ್ರಮವಾಗಿ ಕಾಲುವೆಗಳು ಅಗೆದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ನೀಲಗಂಗಾ, ಹೆಸ್ಕಾಂ ಎಇಇ ಎಸ್.ಆರ್. ಮೆಂಡೆಗಾರ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ, ಪಿಡಬ್ಲ್ಯೂಡಿ ದಯಾನಂದ ಮಠ, ಸಿದ್ದರಾಮ ಮುಜಗೊಂಡ, ಬಿ.ಎಚ್. ಕನ್ನೂರ, ಪಿಡಿಒಗಳಾದ ಉಮೇಶ ಹೂಗಾರ, ಬಸವರಾಜ ಬಬಲಾದ, ಜಬ್ಬಾರ ಹಳ್ಳಿ, ಎಚ್.ಎಸ್. ಗುನ್ನಾಪುರ, ವೀಣಾ ಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.