ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಲರಿ ಕ್ಲಿಂಟನ್ ಗೆ ಮುನ್ನಡೆ

ಚುನಾವಣಾ ಪೂರ್ವ ಸಮೀಕ್ಷೆ
Last Updated 1 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಅವರು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಶೇಕಡ 2ರಷ್ಟು ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು  ರಾಷ್ಟ್ರೀಯ ಸಮೀಕ್ಷೆಯೊಂದು ಹೇಳಿದೆ.

ಈ ಕುರಿತು ‘ಫಾಕ್ಸ್‌ ನ್ಯೂಸ್‌’ ಸುದ್ದಿಸಂಸ್ಥೆ ರಾಷ್ಟ್ರೀಯ ಮತದಾನದ ವಿವರಗಳನ್ನು ಪ್ರಕಟಿಸಿದೆ. ಕ್ಲಿಂಟನ್‌ ಅವರು ಶೇಕಡ 41ರಷ್ಟು ಹಾಗೂ ಟ್ರಂಪ್‌ ಶೇಕಡ 39ರಷ್ಟು ಮತ ಪಡೆದಿದ್ದಾರೆ ಎಂದು ತಿಳಿಸಿದೆ.

ಲಿಬರೇಷನ್‌ ಪಕ್ಷದ ಗೆರಿ ಜಾನ್ಸನ್‌ ಅವರು ಶೇಕಡ 9ರಷ್ಟು ಮತಗಳನ್ನು ಪಡೆದಿದ್ದು, ಗ್ರೀನ್‌ ಪಕ್ಷದ ಅಭ್ಯರ್ಥಿ ಜಿಲ್‌ ಸ್ಟೈನ್‌ ಅವರು ಶೇಕಡ 4ರಷ್ಟು ಮತ ಪಡೆದಿದ್ದಾರೆ.  ಶ್ವೇತಭವನದ ಹಾದಿ ತುಂಬ ಕಠಿಣವಾಗಿದ್ದು, ಹಿಲರಿ ಹಾಗೂ ಕ್ಲಿಂಟನ್‌ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ವಿವಾದಗಳ ನಡುವೆಯೂ ಟ್ರಂಪ್‌ ಅವರು,  ಮತಗಳನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದು,  ಹಿಲರಿ ಅವರಿಗಿಂತ ಸ್ವಲ್ಪ ಹಿಂದೆ ಇದ್ದಾರೆ.

ಹಿಲರಿ ಟೀಕೆ: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ವಿದೇಶಾಂಗ ನೀತಿಯ ಮೊದಲ ಪರೀಕ್ಷೆಯಲ್ಲಿಯೇ ವಿಫಲರಾಗಿದ್ದಾರೆ ಎಂದು ಹಿಲರಿ ಕ್ಲಿಂಟನ್‌ ವ್ಯಂಗವಾಡಿದ್ದಾರೆ.

ಮೆಕ್ಸಿಕೊ ಅಧ್ಯಕ್ಷರನ್ನು ಭೇಟಿ ಮಾಡಿ ಬಂದಿರುವ ಟ್ರಂಪ್‌ ಅವರ ಮೊದಲ ವಿದೇಶ ಪ್ರವಾಸ ಫಲಪ್ರದವಾಗಿಲ್ಲ ಎಂದಿರುವ ಹಿಲರಿ, ವಿದೇಶಾಂಗ ವ್ಯವಹಾರಗಳನ್ನು ನಿಭಾಯಿಸುವುದು ಸುಲಭವಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಒಬಾಮ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಹಿಲರಿಗೆ ಹೋಲಿಸಿದರೆ, ಟ್ರಂಪ್‌ಗೆ ಯಾವುದೇ ಅನುಭವ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೆಕ್ಸಿಕೊ ಮತ್ತು ಅಮೆರಿಕದ ಗಡಿಯುದ್ದಕ್ಕೂ ತಡೆಗೋಡೆ ನಿರ್ಮಿಸಲಾಗುವುದು ಎಂದು ಟ್ರಂಪ್‌ ನೀಡಿರುವ ಹೇಳಿಕೆಯನ್ನು ಹಿಲರಿ ಟೀಕಿಸಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT