ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಗೌರವ ಪ್ರಶಸ್ತಿಗೆ ಡಾ. ಕೃಷ್ಣಮೂರ್ತಿ ಹನೂರು, ಡಾ. ಎಚ್.ಎಸ್. ಶಿವಪ್ರಕಾಶ್ ಸೇರಿ ಐವರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.

ಡಾ. ಎಲ್. ಹನುಮಂತಯ್ಯ, ನೇಮಿಚಂದ್ರ ಮತ್ತು ಡಾ.ಎಚ್. ನಾಗವೇಣಿ ಅವರಿಗೂ ಗೌರವ ಪ್ರಶಸ್ತಿ ಸಂದಿದೆ.

ಪ್ರಶಸ್ತಿಯು ₹ 50 ಸಾವಿರ ನಗದು ಮತ್ತು ಫಲಕ ಒಳಗೊಂಡಿದ್ದು, ಅಕ್ಟೋಬರ್ ಅಂತ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದೂ ಅವರು ತಿಳಿಸಿದರು.

2014ರಲ್ಲಿ ಪ್ರಕಟವಾದ ವಿವಿಧ ಪ್ರಕಾರದ 17 ಕೃತಿಗಳನ್ನು ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕೃತಿಗಳ ಲೇಖಕರಿಗೆ ತಲಾ ₹ 25 ಸಾವಿರ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು. ಕೆಲವು ಸಾಹಿತ್ಯ ಪ್ರಕಾರಗಳಿಗೆ ದಾನಿಗಳು ಸ್ಥಾಪಿಸಿರುವ 6 ದತ್ತಿ ನಿಧಿ ಬಹುಮಾನಕ್ಕೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಚದುರಂಗ ದತ್ತಿನಿಧಿ ಬಹುಮಾನಕ್ಕೆ ₹ 15 ಸಾವಿರ ಮತ್ತು ಉಳಿದ 5 ದತ್ತಿನಿಧಿ ಬಹುಮಾನಕ್ಕೆ ತಲಾ ₹ 5 ಸಾವಿರ ನೀಡಲಾಗುವುದು ಎಂದು ವಿವರಿಸಿದರು.

ಮುಖ್ಯಾಂಶಗಳು
* ಐವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ

* ಫಲಕ ಹಾಗೂ ₹ 50 ಸಾವಿರ ನಗದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.