ಓಸ್ಲೊ : ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಕೊಲಂಬಿಯಾದಲ್ಲಿನ ಐದು ದಶಕಗಳ ಆಂತರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಸ್ಯಾಂಟೋಸ್ ಅವರ ಶ್ರಮವನ್ನು ಪರಿಗಣಿಸಿ ಅವರನ್ನು ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಕಳೆದ 52 ವರ್ಷಗಳಿಂದ ಸರ್ಕಾರ ಮತ್ತು ಬಂಡುಕೋರರ ನಡುವೆ ನಡೆಯುತ್ತಿದ್ದ ಸಶಸ್ತ್ರ ಸಂಘರ್ಷದ ವಿರುದ್ಧ 2016ರ ಆಗಸ್ಟ್‌ನಲ್ಲಷ್ಟೇ ಕದನ ವಿರಾಮ ಘೋಷಣೆ ಆಗಿದೆ. ಕದನ ವಿರಾಮ ಘೋಷಣೆ ಆಗುವಲ್ಲಿ ಸ್ಯಾಂಟೋಸ್ ಅವರ ಪಾತ್ರ ಹೆಚ್ಚಿದೆ.

ಆದರೆ, ಆಕ್ಟೋಬರ್ 2ರಂದು ನಡೆದ ಜನಮತಗಣನೆಯಲ್ಲಿ ಕೊಲಂಬಿಯಾ ಪ್ರಜೆಗಳು ಕದನ ವಿರಾಮದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕದನ ವಿರಾಮ ಕೊನೆಗೊಳ್ಳಲಿದೆ.

ಆದರೆ, ಶಾಂತಿ ನೆಲೆಸುವಲ್ಲಿ ಸ್ಯಾಂಟೋಸ್ ಅವರ ಪ್ರಯತ್ನವನ್ನು ಪ್ರಸಂಶಿಸಿದರೆ, ಇತರರೂ ಅವರಿಂದ ಪ್ರೇರಿತರಾಗಬಹುದು. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.