ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಕೃತಕ ಬುದ್ಧಿಮತ್ತೆಯಿಂದ ಮನುಕುಲಕ್ಕೆ ಕುತ್ತು: ಹಾಕಿಂಗ್

Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಲಂಡನ್: ಕೃತಕ ಬುದ್ಧಿಮತ್ತೆಯ ಸಾಧನಗಳಿಗೆ ಮತ್ತಷ್ಟು ಬಲ ತುಂಬುವುದರಿಂದ ಮನುಕುಲದ ಮೇಲೆ ಅತಿ ಕೆಟ್ಟ ಪರಿಣಾಮವಾಗಲಿದೆ ಎಂದು ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಆತಂಕ ವ್ಯಕ್ತಪಡಿಸಿದರು. ಹೀಗೆ ಮಾಡುವುದರಿಂದ ಮಾನವರು ತಮ್ಮ ನಾಶಕ್ಕೆ ತಾವೇ ಕಾರಣರಾಗಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೇಂಬ್ರಿಜ್‌ ವಿಶ್ವವಿದ್ಯಾಲಯ ಆರಂಭಿಸಿರುವ ಲೆವೆರ್‌ಹಲ್ಮ್ ಸೆಂಟರ್ ಫಾರ್ ದಿ ಫ್ಯೂಚರ್ ಆಫ್ ಇಂಟೆಲಿಜೆನ್ಸ್ (ಎಲ್‌ಸಿಎಫ್‌ಐ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಸಂಶೋಧನೆಯ ಸಕಾರಾತ್ಮಕ ಅಂಶಗಳನ್ನೂ ಉಲ್ಲೇಖಿಸಿದರು.
ಜತೆಗೆ, ಬುದ್ಧಿಮತ್ತೆಯ ಭವಿಷ್ಯದ ಕುರಿತಾದ ಸಂಶೋಧನೆಗಾಗಿ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿರುವುದನ್ನು ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT