ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿ: 61 ಕೆಡೆಟ್‌ ಸಾವು

ಪಾಕ್‌ ಪೊಲೀಸ್‌ ತರಬೇತಿ ಕೇಂದ್ರ ಗುರಿ
Last Updated 25 ಅಕ್ಟೋಬರ್ 2016, 19:43 IST
ಅಕ್ಷರ ಗಾತ್ರ

ಕ್ವೆಟ್ಟಾ (ಪಿಟಿಐ): ಇಲ್ಲಿನ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು,  61 ಜನರ ಹತ್ಯೆ ಮಾಡಿದ್ದಾರೆ.

ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ 125ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ.

ಮೃತರಲ್ಲಿ 60 ಮಂದಿ ಪೊಲೀಸ್‌ ತರಬೇತಿ ಅಭ್ಯರ್ಥಿಗಳು ಮತ್ತು ಒಬ್ಬ ಸೇನಾಪಡೆ ಸಿಬ್ಬಂದಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈಚೆಗೆ  ಪಾಕಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭಯೋತ್ಪಾದಕ ಕೃತ್ಯ ಇದಾಗಿದೆ.

15ರಿಂದ 25 ವಯೋಮಾನದ ಸುಮಾರು 700 ಅಭ್ಯರ್ಥಿಗಳು ಪೊಲೀಸ್‌ ತರಬೇತಿ ಕೇಂದ್ರದಲ್ಲಿ  ವಾಸವಿದ್ದರು.  ಸೋಮವಾರ ತಡರಾತ್ರಿ ದಾಳಿ ನಡೆಸಿದ ಮೂವರು ಶಸ್ತ್ರಸಜ್ಜಿತ ಉಗ್ರರು ಮೊದಲಿಗೆ ಕಾವಲು ಪೊಲೀಸ್‌ ಹತ್ಯೆ ಮಾಡಿ ಬಳಿಕ ಕೇಂದ್ರದೊಳಗೆ ನುಗ್ಗಿದ್ದಾರೆ. ದಾಳಿಯಿಂದ ಭೀತಿಗೊಂಡ ಹಲವರು ಮೇಲ್ಚಾವಣಿಯಿಂದ ಹಾರಿ ಪಾರಾಗಲು ಯತ್ನಿಸಿದ್ದಾರೆ. ಉಗ್ರರು ರಷ್ಯಾ ನಿರ್ಮಿತ ಕಲಾಶ್ನಿಕೋವ್‌ ಬಂದೂಕುಗಳನ್ನು ಹೊಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಉಗ್ರರು ಐದು ಪ್ರತ್ಯೇಕ ಸ್ಥಳಗಳಿಂದ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದು ವ್ಯವಸ್ಥಿತವಾಗಿ ನಡೆಸಿದ ದಾಳಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT