ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಸಂಕುಲ ಪೂರ್ಣ ನಿರ್ನಾಮದ ಭೀತಿ...

Last Updated 27 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ಜಗತ್ತಿನಲ್ಲಿರುವ ವನ್ಯಜೀವಿಗಳ ಪ್ರಮಾಣ 2020ರ ಹೊತ್ತಿಗೆ ಮೂರನೇ ಎರಡರಷ್ಟು ಕಡಿಮೆ ಆಗಲಿದೆ ಎಂಬ ಆತಂಕಕಾರಿ ಅಂಶವನ್ನು ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌ (ಡಬ್ಲ್ಯುಡಬ್ಲ್ಯುಎಫ್‌) ಎಂಬ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ನವೀಕರಿಸಬಹುದಾದ ಸಂಪನ್ಮೂಲ ತಯಾರಿ ಮತ್ತು ಇಂಗಾಲದ ಡೈಆಕ್ಸೈಡ್‌ನಂತಹ ತ್ಯಾಜ್ಯಗಳನ್ನು ಹೀರಿಕೊಳ್ಳುವ ಸಾಮರ್ಥ್ಯದಲ್ಲಿ ಭಾರತಕ್ಕೆ ಐದನೇ ಸ್ಥಾನ ನೀಡಲಾಗಿದೆ.

ಭಾರತದಲ್ಲಿ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಪ್ರಮಾಣ ಕಡಿಮೆಯೇ ಇದೆ. ಆದರೆ ಹೆಚ್ಚುತ್ತಲೇ ಇರುವ ಜನಸಂಖ್ಯೆ ಮತ್ತು ಸಂಪತ್ತಿನ ಹೆಚ್ಚಳ ಮಾಲಿನ್ಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಜನಸಂಖ್ಯೆ ಮತ್ತು ಶ್ರೀಮಂತಿಕೆ ಎರಡೂ ಹೆಚ್ಚಾದಾಗ ಮಾಲಿನ್ಯವನ್ನು ನಿಯಂತ್ರಣದಲ್ಲಿ ಇರಿಸುವುದು ದೊಡ್ಡ ಸವಾಲು ಎಂದು ವರದಿಯಲ್ಲಿ ಹೇಳಲಾಗಿದೆ.

ಕಾಡಲಿರುವ ಆಹಾರದ ಕೊರತೆ
* ಆಹಾರದ ಬೇಡಿಕೆ ಪ್ರಮಾಣ 2020ರ ಹೊತ್ತಿಗೆ 30–50% ಏರಿಕೆ
* 2080–2100 ಹೊತ್ತಿಗೆ ಜಾಗತಿಕ ತಾಪಮಾನದಿಂದಾಗಿ ಭಾರತದಲ್ಲಿ ಆಹಾರ ಉತ್ಪಾದನೆ 10–40% ಕಡಿಮೆಯಾಗಲಿದೆ.

ಅಪಾಯದ ಕರೆಗಂಟೆ
* ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರದ ಬೇಡಿಕೆ ಈಡೇರಿಸಲು ವನ್ಯಜೀವಿ ಆವಾಸಸ್ಥಾನ ನಾಶ ವನ್ಯಜೀವಿ ನಾಶವಾಗಲು ಮುಖ್ಯ ಕಾರಣ
* ಮನುಷ್ಯ ಹಸ್ತಕ್ಷೇಪ ಇಲ್ಲದ ಸ್ಥಳವೇ ಇಲ್ಲದಂತಾಗಲಿದೆ
* ವನ್ಯಜೀವಿಗಳ ಸಾಮೂಹಿಕ ನಿರ್ಮೂಲನದ ಭೀತಿ ಹತ್ತಿರದಲ್ಲೇ ಇದೆ


ಆಹಾರ ಉತ್ಪಾದನೆ ಮತ್ತು ಇಂಗಾಳದ ಡೈಆಕ್ಸೈಡ್‌ ಹೀರಿಕೊಳ್ಳುವ ಜಗತ್ತಿನ ಸಾಮರ್ಥ್ಯದ ಅರ್ಧದಷ್ಟನ್ನು ಹೊಂದಿರುವ ದೇಶಗಳು: ಬ್ರೆಜಿಲ್‌, ಚೀನಾ, ಅಮೆರಿಕ, ರಷ್ಯಾ, ಭಾರತ

ಆಹಾರ ಉತ್ಪಾದನೆ ಕಾಡು ನಾಶದ ಮುಖ್ಯ ಕಾರಣ
* ಭೂಮಿಯ ಮೂರನೇ ಒಂದು ಭಾಗದಲ್ಲಿ ಕೃಷಿ  ಚಟುವಟಿಕೆ ಇದೆ
* 70%ದಷ್ಟು ನೀರು ಬೇಸಾಯಕ್ಕಾಗಿ ಬಳಕೆ


* 21.3% ಭಾರತದಲ್ಲಿ ಅರಣ್ಯ ಮತ್ತು ಮರಗಳ ಪ್ರಮಾಣ (ಒಟ್ಟು ಭೂಪ್ರದೇಶದಲ್ಲಿ)

* ಅತ್ಯಂತ ಕಡಿಮೆ ತಲಾ ಅರಣ್ಯ ಪ್ರದೇಶ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು

* 33% ಅರಣ್ಯ ಬೆಳೆಸುವ ಗುರಿಯನ್ನು ಭಾರತ ಹೊಂದಿದೆ (ಒಟ್ಟು ಭೂಪ್ರದೇಶದಲ್ಲಿ)

 * 70% ಮೇಲ್ಮೈ ನೀರು ಕಲುಷಿತ ಅತಿ ಹೆಚ್ಚು ಜಲಸಂಪನ್ಮೂಲ ಹೊಂದಿರುವ ಹತ್ತು ದೇಶಗಳಲ್ಲಿ ಭಾರತವೂ ಒಂದು 

* 60% ಅಂತರ್ಜಲ ಒಂದು ದಶಕದೊಳಗೆ ಕಲುಷಿತವಾಗುವ ಭೀತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT