ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಕುಟುಂಬಗಳ ದಿಕ್ಕು ಯಾವ ಕಡೆಗೆ?

ಪತ್ರಭೂಮಿಕಾ
Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಹೆತ್ತವರಿಂದ ದೂರ ಮಾಡಲು ಪ್ರಯತ್ನಿಸುವ ಪತ್ನಿಗೆ ಹಿಂದೂ ಪುತ್ರ ವಿಚ್ಛೇದನೆ ನೀಡಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ವಿವಾಹ ವಿಚ್ಛೇದನೆಯ ಬಗ್ಗೆ ಇತ್ತೀಚೆಗೆ ತೀರ್ಪೊಂದರಲ್ಲಿ ಹೇಳಿದೆ.
 
 ನ್ಯಾಯಾಲಯದ ಈ ತೀರ್ಪು ಸಮಾಜಕ್ಕೆ  ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ಏಕೆಂದರೆ ಈಗ ಗಂಡ ಹೆಂಡತಿಯಿಂದ ಕೂಡಿರುವ ಅವರ ಕುಟುಂಬಗಳು ವಿಘಟನೆಗೊಳ್ಳಲು ನಾಂದಿಯಾಗುತ್ತದೆ.
 
ಹೆತ್ತವರನ್ನು ನೋಡಿಕೊಳ್ಳುವುದು ಕೇವಲ ಹಿಂದೂಧರ್ಮದ ವ್ಯಕ್ತಿಗಳಿಗೆ ಮಾತ್ರ ಸೀಮಿತವೇ? ಹೆತ್ತರವನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಅಲ್ಲವೇ? ಎಂಬುದನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
 
ವೃದ್ಧಾಪ್ಯದಲ್ಲಿರುವ ತಂದೆ–ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ, (ಎಂದರೆ ಕುಟುಂಬದ ಗಂಡ–ಹೆಂಡತಿಯರ) ಕರ್ತವ್ಯ. ಅದೇ ರೀತಿ ಗಂಡುಮಕ್ಕಳಿಲ್ಲದಿರುವ ಹೆತ್ತವರನ್ನು ನೋಡಿಕೊಳ್ಳುವುದು ಮಗಳ ಮತ್ತು ಅಳಿಯನ ಕರ್ತವ್ಯಗಳಾಗಬೇಕು.
 
ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲನ್ನು ಕಡ್ಡಾಯವಾಗಿ ಕೊಡುವಂತಾದರೆ ಆಗ ಹೆಣ್ಣುಮಕ್ಕಳು ಕೂಡ ಹೆತ್ತವರನ್ನು ನೋಡಿಕೊಳ್ಳಲು ಮುಂದಾಗಬಹುದು. ಸಮಾಜದಲ್ಲಿ ಪ್ರತಿಯೊಂದು ಸಮಸ್ಯೆಯನ್ನೂ ನ್ಯಾಯಾಲಯದ ತೀರ್ಪು, ಕಾಯಿದೆ, ಶಾಸನಗಳ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ.  
 
ಎಲ್ಲ ಮಕ್ಕಳು ‘ಹೆತ್ತವರನ್ನು ನೋಡಿಕೊಳ್ಳವುದು ನಮ್ಮ ಕರ್ತವ್ಯ, ಜವಾಬ್ದಾರಿ’ ಎಂದೂ ಅರಿಯಬೇಕು. ನಮ್ಮ ಹೆತ್ತವರನ್ನು ನಾವೇ ನೋಡಿಕೊಳ್ಳದಿದ್ದರೆ, ಬೇರೆ ಯಾರು ನೋಡಿಕೊಂಡಾರು? ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು.
 
ಇತ್ತೀಚಿನ ದಿನಗಳಲ್ಲಿ ಶ್ರೀಮಂತ ಕುಟುಂಬಗಳ ಹೆತ್ತವರು ವೃದ್ಧಾಶ್ರಮಗಳಿಗೆ ದಾಖಲಾಗುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ನೋಡಿದರೆ ಭಾರತೀಯ ಕುಟುಂಬಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ತಿಳಿಯುತ್ತಿದೆ.
– ಹಾಲಪ್ಪ ಎಚ್, ಮೂಡಲಹುಂಡಿ ವರಕೋಡು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT