ಗುಡಗಾಂವ್, ಹರಿಯಾಣ (ಪಿಟಿಐ): ರಿಯೊ ಪ್ಯಾರಾಲಿಂಪಿಕ್ಸ್ ಪದಕವಿಜೇತ ಕ್ರೀಡಾ ಪಟು ದೀಪಾ ಮಲಿಕ್ ಅವರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ₹ 4 ಕೋಟಿ ಪುರಸ್ಕಾರ ನೀಡಿದರು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಯಾಣದ ದೀಪಾ ಅವರಿಗೆ ನಗದು ಬಹುಮಾನದ ಚೆಕ್ ನೀಡಿ ಸನ್ಮಾನಿಸಲಾಯಿತು.

ಪ್ರಧಾನಿ ಮೋದಿ ಅವರು ಗಾಲಿ ಕುರ್ಚಿಯಲ್ಲಿ ಬಂದ ದೀಪಾ ಮಲಿಕ್ ಅವರ ಚೆಕ್ ನೀಡಲು ಎತ್ತರದ ವೇದಿಕೆ ಯಿಂದ ಕೆಳಗೆ ಇಳಿದು ಬಂದರು. ಅವರೊಂದಿಗೆ ಹರಿಯಾಣ ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜ್ಯಪಾಲ ಕಪ್ತಾನ್ ಸಿಂಗ್ ಸೋಳಂಕಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ‘ಹರಿಯಾಣದ ವನಿತೆಯರು ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆಯನ್ನು ಒಲಿಂಪಿಕ್ಸ್‌ನಲ್ಲಿ ಮಾಡಿ ದ್ದಾರೆ. ಇದು ಎಲ್ಲರಿಗೂ ಮಾದರಿ ಯಾಗಬೇಕು. ಹರಿಯಾಣದ ಜನರು ಹೆಣ್ಣುಮಕ್ಕಳ ರಕ್ಷಣೆ ಮತ್ತು ಪೋಷಣೆಗೆ ಮುಂದಾಗಬೇಕು’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ದೀಪಾ, ‘ಅಂಗವೈಕಲ್ಯವನ್ನು ಮೀರಿ ನಿಂತ ಸಂತೃಪ್ತಿ ನನಗೆ ಇದೆ. ಈ ಸಮಸ್ಯೆಯು ಆರಂಭವಾದಾಗಲೇ ನಾನು ಜೀವನವನ್ನು ಹೆಚ್ಚು ಪ್ರೀತಿಸಿದೆ. ಅದನ್ನು ಸಾರ್ಥಕಗೊಳಿಸುವತ್ತ ಶ್ರಮಪಟ್ಟೆ. ನನ್ನ ಕುಟುಂಬ ನನಗೆ ಉತ್ತಮ ಬೆಂಬಲ ನೀಡಿತು. ಅದರಿಂದ ನಾನು ಹಲವು ಸಾಧನೆ ಮಾಡಲು ಸಾಧ್ಯವಾಯಿತು. ರಿಯೊ ಪ್ಯಾರಾಲಿಂಪಿಕ್ಸ್ ಪದಕ ನನಗೆ ಅತ್ಯಂತ ವಿಶೇಷವಾದದ್ದು’ ಎಂದರು.

ಹರಿಯಾಣದ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರ ನಡೆ ದಿದ್ದ ಪ್ಯಾರಾಲಿಂಪಿಕ್ಸ್‌ನ ಗಾಲಿ ಕುರ್ಚಿ ವಿಭಾಗದ ಶಾಟ್‌ಪಟ್‌ನಲ್ಲಿ 46 ವರ್ಷದ ದೀಪಾ ಬೆಳ್ಳಿ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.