ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿಮೀರಿದ ವಾಯುಮಾಲಿನ್ಯ: ದೆಹಲಿಯಲ್ಲಿ ಇನ್ನೂ 3 ದಿನ ಶಾಲೆಗಳಿಗೆ ರಜೆ

Last Updated 6 ನವೆಂಬರ್ 2016, 8:54 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಮಿತಿಮೀರಿದ್ದು ಮುಂದಿನ ಮೂರು ದಿನಗಳ ಕಾಲ ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ವಾಯುಮಾಲಿನ್ಯ ಪ್ರಮಾಣ ತಗ್ಗಿಸುವ ಕ್ರಮಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾನುವಾರ ತುರ್ತು ಸಭೆ ನಡೆಸಿದರು.

ವಾಯುಮಾಲಿನ್ಯ ಮಟ್ಟ ತಗ್ಗಿಸಲು ತೆಗೆದುಕೊಂಡ ಕ್ರಮಗಳು:

* ದೆಹಲಿಯಲ್ಲಿ ಮುಂದಿನ 5 ದಿನಗಳ ಕಾಲ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಕೆಡವುವ ಕಾರ್ಯಗಳ ನಿಷೇಧ

* ಮುಂದಿನ 10 ದಿನಗಳ ಕಾಲ ಡೀಸೆಲ್‌ ಜನರೇಟರ್‌ ಸ್ಥಗಿತ

* ನವೆಂಬರ್‌ 10ರಿಂದ ದೆಹಲಿಯ ರಸ್ತೆಗಳ ವ್ಯಾಕ್ಯೂಮ್‌ ಕ್ಲೀನಿಂಗ್‌

* ದೆಹಲಿಯ ರಸ್ತೆಗಳಲ್ಲಿ ದೂಳು ಏಳದಂತೆ ಸೋಮವಾರದಿಂದ ನೀರು ಎರೆಚುವುದು

* ಅಗತ್ಯಬಿದ್ದರೆ ಸಮ- ಬೆಸ ಸಂಚಾರ ವ್ಯವಸ್ಥೆ ಜಾರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT