ವಾಷಿಂಗ್ಟನ್: ಅಮೆರಿಕ ಸೆನೆಟ್‍ಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಮತ್ತು ರಾಜಾ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಸೆನೆಟ್‍ಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ. ಕಮಲಾ ಮತ್ತು ಕೃಷ್ಣಮೂರ್ತಿ ಇಬ್ಬರೂ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದ 51ರ ಹರೆಯದ ಕಮಲಾ, ಲೊರೆಟ್ಟಾ ಸಾಂಕೆಜ್ ಅವರನ್ನು ಪರಾಭವಗೊಳಿಸಿದ್ದಾರೆ.
ಕಮಲಾ ಅವರು ಕ್ಯಾಲಿಫೋರ್ನಿಯಾದ ಓಕ್ಲೆಂಡ್‌ನಲ್ಲಿ ಜನಿಸಿದವರು. ಚೆನ್ನೈ ಮೂಲದವರಾದ ಅವರ ತಾಯಿ ಡಾ. ಶ್ಯಾಮಲಾ ಗೋಪಾಲನ್ 1960ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕಮಲಾ ಅವರ ತಂದೆ ಜಮೈಕಾ ಮೂಲದ ಅಮೆರಿಕನ್ ಪ್ರಜೆ.

40ರ ಹರೆಯದ ರಾಜಾ ಕೃಷ್ಣಮೂರ್ತಿ ಇಲಿನಾಯ್ ನಿಂದ ಸೆನೆಟ್‍ಗೆ ಸ್ಪರ್ಧಿಸಿದ್ದರು. ನವದೆಹಲಿ ಮೂಲದವರಾದ ಕೃಷ್ಣಮೂರ್ತಿ ಈ ವರ್ಷ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.

ಭಾರತದಲ್ಲಿ ಜನಿಸಿದ್ದರೂ ರಾಜಾ ಅವರು ಬೆಳೆದದ್ದು, ಓದಿದ್ದು ಅಮೆರಿಕದಲ್ಲೇ. ವಕೀಲ, ಉದ್ಯಮಿ, ಇಂಜಿನಿಯರ್ ಆಗಿಯೂ ಕೃಷ್ಣಮೂರ್ತಿ ಕೆಲಸ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.