ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ 2016ರ ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದರಾದ ಬೆಂಗಳೂರಿನ ಮಾರ್ಥಾ ಝಾಕಿಮೋವಿಜ್, ಬೆಳಗಾವಿಯ ಬಾಬುರಾವ್ ವಿ.ನಡೋಣಿ, ಬಳ್ಳಾರಿಯ ಕೆ.ಕೆ.ಮಕಾಳಿ ಭಾಜನರಾಗಿದ್ದಾರೆ.

‘ಪ್ರಶಸ್ತಿಯು ತಲಾ ₹50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಂಡ್ಯದಲ್ಲಿ ನಡೆಯಲಿದ್ದು, ದಿನಾಂಕ ನಿಗದಿಪಡಿಸಬೇಕಿದೆ’ ಎಂದು ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಹೇಳಿದರು.

‘ಪೋಲೆಂಡ್ ಮೂಲದ ಮಾರ್ಥಾ ಝಾಕಿಮೋವಿಜ್ ಅವರು ಕಳೆದ 35 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ದೃಶ್ಯಕಲಾ ವೈಚಾರಿಕತೆಯನ್ನು ಆಳವಾಗಿ ಅಭ್ಯಾಸಿರುವ ಅವರು, ರಾಜ್ಯದ ಕಲಾವಿದರು ಹಾಗೂ ಕಲಾಕೃತಿಗಳ ವಿಮರ್ಶೆ ಮಾಡಿದ್ದಾರೆ. ಮಾರ್ಥಾ ಅವರ ಲೇಖನಗಳು ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ’ ಎಂದರು.

‘ಬಾಬುರಾವ್ ನಡೋಣಿ ಅವರು ಬೆಳಗಾವಿ ಜಿಲ್ಲೆಯ ರಾಯಬಾಗದ ವಿವೇಕಾನಂದ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ಕೆ.ಕೆ.ಮಕಾಳಿ ಅವರು ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಹವ್ಯಾಸಿ ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಗೌರವ ಪ್ರಶಸ್ತಿ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.