ಬೆಂಗಳೂರು: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಶುಕ್ರವಾರದಿಂದ ಎಟಿಎಂಗಳು ಕಾರ್ಯಾಚರಣೆ ಮಾಡಲು ಆರಂಭಿಸಿವೆ. ಜನರು ಹಣ ಜಮಾ ಮಾಡಲು ಮತ್ತು ನೋಟು ಬದಲಾವಣೆಗಾಗಿ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತರೆ, ಹಣ ವಿತ್ ಡ್ರಾ ಮಾಡಲು ಎಟಿಎಂ ಮುಂದೆ ಸಾಲು ಗಟ್ಟಿ ನಿಂತಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ.

ನೋಟು ರದ್ದು ಆದೇಶ ಪ್ರಕಟವಾದ ನಂತರ ಗ್ರಾಹಕರು ಪ್ರತಿದಿನ ₹2000 ಮಾತ್ರ ಎಟಿಎಂನಿಂದ ವಿತ್ ಡ್ರಾ ಮಾಡಬಹುದಾಗಿದೆ. ಹೀಗಿರುವಾಗ ಎಟಿಎಂ ನಿಂದ ವಿತ್ ಡ್ರಾ ಮಾಡುವ ಗ್ರಾಹಕರು ಗಮನಿಸಬೇಕಾದ ಅಂಶಗಳು ಏನೇನು?

ಇಲ್ಲಿವೆ ಸಲಹೆ ಸೂಚನೆ
ನವೆಂಬರ್ 8ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಸುತ್ತೋಲೆಯ ಪ್ರಕಾರ ಡಿಸೆಂಬರ್ 30ರವರೆಗೆ ಗ್ರಾಹಕರು ತಮ್ಮ ಬ್ಯಾಂಕ್ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಗ್ರಾಹಕರಿಗೆ ಕಾರ್ಡ್‌ಗಳ ಬಳಕೆ ಮೇಲೆ ವಿನಿಮಯ ಶುಲ್ಕವನ್ನು ವಿಧಿಸಬಾರದೆಂದು ಹೇಳಿದೆ. ಅಂದರೆ ಪ್ರತೀ ವಿನಿಮಯವೂ ಉಚಿತವಾಗಿರುತ್ತದೆ. ಎಚ್‌ಡಿಎಫ್‍ಸಿ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳು ತಮ್ಮ ಗ್ರಾಹಕರು ತಮ್ಮದೇ ಬ್ಯಾಂಕ್ ಎಟಿಎಂನಲ್ಲಿ ವಿನಿಮಯ ಮಾಡಿದರೆ ಮಾತ್ರ ಡಿಸೆಂಬರ್ 30ರ ವರೆಗೆ ಉಚಿತ ವಿನಿಮಯ ಮಾಡಬಹುದಾಗಿದೆ ಎಂದು ಹೇಳಿವೆ. ಕೆಲವೊಂದು ಬ್ಯಾಂಕ್‍ಗಳು ತಮ್ಮ ಬ್ಯಾಂಕ್ ಎಟಿಎಂಗಳಲ್ಲಿಯೇ 5 ಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದರೆ ವಿನಿಮಯ ಶುಲ್ಕವನ್ನು ವಿಧಿಸುತ್ತವೆ.

6 ಮೆಟ್ರೊ ನಗರಗಳಲ್ಲಿ - ಮುಂಬೈ, ನವದೆಹಲಿ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‍ನಲ್ಲಿ ಗ್ರಾಹಕರು ಇತರ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಮೂರು ಬಾರಿ ಹಣ ವಿತ್ ಡ್ರಾ ಮಾಡಿದರೆ ವಿನಿಮಯ ಶುಲ್ಕ ಉಚಿತವಾಗಿರುತ್ತದೆ. ಮೆಟ್ರೋ ನಗರ ಹೊರತು ಪಡಿಸಿದ ಪ್ರದೇಶಗಳಲ್ಲಿ ಇತರ ಬ್ಯಾಂಕ್‍ಗಳ ಎಟಿಎಂನಿಂದ 5 ಬಾರಿ ಉಚಿತವಾಗಿ ವಿನಿಮಯ ಮಾಡುವ ಅವಕಾಶವಿದೆ.

ಆದ್ದರಿಂದ, ಎಟಿಎಂನಿಂದ ಹಣ ವಿತ್‍ಡ್ರಾ ಮಾಡುವಾಗ ವಿನಿಮಯ ಶುಲ್ಕ ಮುಕ್ತವಾಗಲು ಗ್ರಾಹಕರು ತಮ್ಮ ಖಾತೆ ಹೊಂದಿರುವ ಬ್ಯಾಂಕ್‍ಗಳ ಎಟಿಎಂನಿಂದಲೇ ಡಿ.30ರ ವರೆಗೆ ಹಣ ವಿತ್ ಡ್ರಾ ಮಾಡಿದರೆ ಒಳ್ಳೆಯದು.

ಹಣ ವಿತ್ ಡ್ರಾ ಮಿತಿ
ನವೆಂಬರ್ 18ರ ವರೆಗೆ ಎಟಿಎಂನಿಂದ ದಿನಕ್ಕೆ ₹2000 ಮಾತ್ರ ವಿತ್ ಡ್ರಾ ಮಾಡಬಹುದು. ಏತನ್ಮಧ್ಯೆ, ಗ್ರಾಹಕರಿಗೆ ₹100 ನೋಟುಗಳು ಎಟಿಎಂನಿಂದ ಲಭಿಸಲಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ನವೆಂಬರ್ 19 ರ ನಂತರ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಮಿತಿ ದಿನಕ್ಕೆ ₹4000 ಆಗಲಿದೆ. ಹೀಗಿರುವಾಗ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದರೆ ಹಣ ವಿತ್ ಡ್ರಾ ಮಾಡುವುದು ಸುಲಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.