ನವದೆಹಲಿ: ‘ಸೂಕ್ತ ಮುಂದಾಲೋಚನೆ ಇಲ್ಲದೆ ನೋಟು ರದ್ದು ಮಾಡಿದ ಹಣಕಾಸು ಇಲಾಖೆಯ ಕ್ರಮ ಸರಿಯಲ್ಲ’ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

‘ನೋಟು ರದ್ದತಿಯಿಂದ ಮುಂದಾಗುವ ಅನನುಕೂಲಗಳ ಬಗ್ಗೆ ಹಣಕಾಸು ಇಲಾಖೆ ಯೋಚಿಸಬೇಕಿತ್ತು. ಯೋಜಿತ ರೀತಿಯಲ್ಲಿ ಹೆಚ್ಚುವರಿ ಎಟಿಎಂ ಯಂತ್ರಗಳನ್ನು ಅಳವಡಿಸಬೇಕಿತ್ತು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಎಟಿಎಂ ಯಂತ್ರಗಳನ್ನು ಸ್ಥಾಪಿಸಬೇಕಿತ್ತು’ ಎಂದು ಸ್ವಾಮಿ ಹೇಳಿದ್ದಾರೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

‘ಹಣಕಾಸು ಇಲಾಖೆಯು ಯಾವುದೇ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳಬಹುದು. ಆದರೆ, ಆ ಸಮರ್ಥನೆಗಳು ಕ್ಷಮಾರ್ಹವಲ್ಲ’ ಎಂದು ಸ್ವಾಮಿ ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹಕ್ಕೆ ಭಾರತದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಚೀನಾದ ಫಾರಿನ್ ಕರೆಸ್ಪಾಂಡೆನ್ಟ್ಸ್ ಕ್ಲಬ್‌ನಲ್ಲಿ ವಿಶೇಷ ಉಪನ್ಯಾಸ ನೀಡಲು ತೆರಳಿರುವ ಸ್ವಾಮಿ ಹಾಂಗ್‌ಕಾಂಗ್‌ನಲ್ಲಿ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.