ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ - 2017

ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ
Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ತ್ರೀಸಂವೇದನೆಗಳ ಅಕ್ಷರಲೋಕವೇ ‘ಭೂಮಿಕಾ’. ಮಹಿಳೆಯ ಮಾತು–ಕಥೆ, ಹಾವ–ಭಾವ, ಆಲೋಚನೆ–ಭಾವನೆ, ಸಿಟ್ಟು–ಸಮಾಧಾನ – ಎಲ್ಲ ಭಾವಗಳೂ ಪ್ರಬಂಧಕ್ಕೆ ವಸ್ತುವೇ.

ಅದನ್ನು ಮಹಿಳೆಯೇ ಬರೆದರೆ ಅದು ‘ಲಲಿತಪ್ರಬಂಧ’ ಆಗುವುದು ಸಹಜವೇ! ಪ್ರತಿ ವರ್ಷದಂತೆ ಈ ವರ್ಷವೂ ಪ್ರಜಾವಾಣಿ ‘ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಿದೆ. ಇದರಲ್ಲಿ  ಮಹಿಳೆಯರೆಲ್ಲರೂ ಭಾಗವಹಿಸಬಹುದು.

**
ಸ್ಪರ್ಧೆಯ ನಿಯಮಗಳು

* ನಿಮ್ಮ ಬರಹ ಲಲಿತಪ್ರಬಂಧದ ಪ್ರಕಾರಕ್ಕೆ ಸೇರುವಂತಿಬೇಕು.
 
* ಸ್ವತಂತ್ರ ರಚನೆಯಾಗಿರಬೇಕು.
 
* ಬ್ಲಾಗ್‌, ಸಾಮಾಜಿಕ ಜಾಲತಾಣ ಸೇರಿದಂತೆ ಯಾವ ಮಾಧ್ಯಮದಲ್ಲೂ  ಪ್ರಕಟ/ಪ್ರಸಾರ ಆಗಿರಕೂಡದು.
 
* ಅಂತಿಮ ದಿನಾಂಕದ ಬಳಿಕ ಬಂದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
 
* ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
 
* ಬಹುಮಾನಿತ ಪ್ರಬಂಧಗಳನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ ಕಾಯ್ದಿರಿಸಿಕೊಂಡಿದೆ; ಸಂಪಾದಕರ ತೀರ್ಮಾನವೇ ಅಂತಿಮ.
 
* ಪ್ರಬಂಧಗಳು ಒಂದು ಸಾವಿರ ಪದಗಳನ್ನು ಮೀರದಂತಿರಲಿ.
 
* ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಕಳುಹಿಸಬಹುದು. ಇ–ಮೇಲ್: bhoomika@prajavani.co.in
 
* ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ ವಿವರಗಳು ಕಡ್ಡಾಯ.
 
* ತೀರ್ಪುಗಾರರ ನಿರ್ಣಯವೇ ಅಂತಿಮ; ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.
 
* ಪ್ರಬಂಧಗಳನ್ನು ಹಿಂದಿರುಗಿಸಲಾಗುವುದಿಲ್ಲ.
 
* ಬಹುಮಾನಿತ ಪ್ರಬಂಧಗಳನ್ನು ಭೂಮಿಕಾದಲ್ಲಿ ಪ್ರಕಟಿಸಲಾಗುವುದು.
 
**
ಬಹುಮಾನಗಳ ವಿವರ:
ಮೊದಲನೆಯ ಬಹುಮಾನ
: ₹ 7,500
ಎರಡನೆಯ ಬಹುಮಾನ: ₹ 5,000
ಮೂರನೆಯ ಬಹುಮಾನ: ₹ 2.500

*
ಪ್ರಬಂಧಗಳು ನಮ್ಮನ್ನು ತಲುಪಬೇಕಾದ ಅಂತಿಮ ದಿನಾಂಕ: ಡಿಸೆಂಬರ್‌ 20, 2016

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT