ಫುಜೌ, ಚೀನಾ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ಭಾರತದ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿ ರುವ ಚೀನಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿಯೆಡೆಗೆ ದಾಪುಗಾಲಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಅಜಯ್ ಜಯ ರಾಮ್ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗ ರಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು 22–20, 21–10ರ ನೇರ ಗೇಮ್‌ಗಳಿಂದ ಚೀನಾದ ಹಿ ಬಿಂಗ್‌ಜಿಯಾವೊ ಅವರನ್ನು ಪರಾಭವ ಗೊಳಿಸಿದರು.

ಹಿಂದಿನ ಪಂದ್ಯಗಳಲ್ಲಿ ಗುಣಮಟ್ಟದ ಆಟ ಆಡಿ ಗಮನ ಸೆಳೆದಿದ್ದ ಸಿಂಧು ಎಂಟರ ಘಟ್ಟದ ಹೋರಾಟದಲ್ಲಿಯೂ ಮಿಂಚು ಹರಿಸಿದರು.
ಭಾರತದ ಆಟಗಾರ್ತಿಯ ವಿರುದ್ಧ 5–1ರ ಗೆಲುವಿನ ದಾಖಲೆ ಹೊಂದಿದ್ದ ಬಿಂಗ್‌ಜಿಯಾವೊ ಮೊದಲ ಗೇಮ್‌ನ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದರು. ವೇಗವಾಗಿ ಪಾಯಿಂಟ್ಸ್ ಹೆಕ್ಕಿದ ಅವರು 5–1ರ ಮುನ್ನಡೆ ಗಳಿಸಿದ್ದರು. ಈ ಹಂತದಲ್ಲಿ ಸಿಂಧು ಪುಟಿದೆದ್ದರು. ಇಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದ ಹೈದರಾಬಾದ್‌ನ ಆಟಗಾರ್ತಿ ಬಳಿಕ ಶ್ರೇಷ್ಠ ಆಟ ಆಡಿದರು. ಹೀಗಿದ್ದರೂ ಚೀನಾದ ಆಟಗಾರ್ತಿ 7–6, 12–11, 14–12ರಲ್ಲಿ ಮುನ್ನಡೆ ಕಾಯ್ದುಕೊಂಡು ಸಾಗಿದರು.

ಒಂದು ಹಂತದಲ್ಲಿ ಬಿಂಗ್‌ಜಿ ಯಾವೊ 17–14ರಿಂದ ಮುಂದಿದ್ದರು. ಇದರಿಂದ ಕಿಂಚಿತ್ತೂ ವಿಶ್ವಾಸ ಕಳೆದು ಕೊಳ್ಳದ ಸಿಂಧು ದಿಟ್ಟ ಹೋರಾಟ ಮುಂದುವರಿಸಿದರು. ಹೀಗಾಗಿ ಪಂದ್ಯದಲ್ಲಿ 17–17, 20–20ರ ಸಮಬಲ ಕಂಡುಬಂತು. ಒತ್ತಡದ ಪರಿಸ್ಥಿತಿಯಲ್ಲಿ ಕೆಚ್ಚೆದೆ ಯಿಂದ ಹೋರಾಡಿ ಅಗತ್ಯ ಎರಡು ಪಾಯಿಂಟ್ಸ್ ಸಂಗ್ರಹಿಸಿದ ಸಿಂಧು 21ನೇ ನಿಮಿಷದಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಆರಂಭಿಕ ನಿರಾಸೆಯಿಂದ ಬಿಂಗ್‌ಜಿಯಾವೊ ಎದೆಗುಂದಲಿಲ್ಲ. ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿದಿದ್ದ ಅವರು ಚುರುಕಿನ ಆಟ ಆಡಿ 2–0ರ ಮುನ್ನಡೆ ಪಡೆದರು. ಈ ಹಂತದಲ್ಲಿ ಸಿಂಧು ಆಕ್ರಮಣಕಾರಿಯಾದರು. ಅಂಗಳದ ಮೂಲೆ ಮೂಲೆಗೂ ಷಟಲ್ ಅನ್ನು ಬಾರಿಸಿ ಎದುರಾಳಿಯನ್ನು ಹೈರಾಣಾಗಿ ಸಿದ ಭಾರತದ ಆಟಗಾರ್ತಿ ಸತತ 6 ಪಾಯಿಂಟ್ಸ್ ಕಲೆಹಾಕಿ 7–3ರ ಮುನ್ನಡೆ ಗಳಿಸಿದರು. ಬಳಿಕವೂ ಸಿಂಧು ಆಟ ಕಳೆಗಟ್ಟಿತು. ಆಕರ್ಷಕ ಡ್ರಾಪ್‌ಗಳ ಮೂಲಕ ಅಂಗಳದಲ್ಲಿ ಮಿಂಚಿನ ಸಂಚಲನ ಹುಟ್ಟುಹಾಕಿದ ಅವರು ಮುನ್ನಡೆಯನ್ನು 14–5ಕ್ಕೆ ಹೆಚ್ಚಿಸಿಕೊಂಡರು.

ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಬಿಂಗ್‌ಜಿಯಾವೊ ಹಲವು ಸ್ವಯಂ ಕೃತ ತಪ್ಪುಗಳನ್ನು ಮಾಡಿದರು. ಒಲಿಂಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಸಿಂಧು ಇದರ ಪೂರ್ಣ ಲಾಭ ಎತ್ತಿಕೊಂಡು 38ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಜಯರಾಮ್‌ಗೆ ನಿರಾಸೆ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದ ಜಯರಾಮ್ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದರು. ಆಲ್ ಇಂಗ್ಲೆಂಡ್ ಮತ್ತು ವಿಶ್ವ ಚಾಂಪಿಯನ್ ಚೆನ್ ಲಾಂಗ್ 21–15, 21–14ರಲ್ಲಿ ಜಯರಾಮ್ ಅವರನ್ನು ಪರಾಭವಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.