ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 15ರ ವರೆಗೆ ₹500ರ ಹಳೆಯ ನೋಟು ಎಲ್ಲಿ ಬಳಸಬಹುದು

Last Updated 25 ನವೆಂಬರ್ 2016, 9:59 IST
ಅಕ್ಷರ ಗಾತ್ರ

ನವದೆಹಲಿ: ₹ 500 ಮುಖಬೆಲೆಯ ಹಳೆಯ ನೋಟುಗಳನ್ನು ಎಲ್ಲೆಲ್ಲಿ ಚಲಾವಣೆ ಮಾಡಬಹುದು ಎಂಬುದರ ಕಿರು ಮಾಹಿತಿ ಇಲ್ಲಿದೆ.

* ವಿದ್ಯುತ್‌ ಮತ್ತು ನೀರಿನ ಬಿಲ್‌ ಪಾವತಿಗೆ ಮಾತ್ರ ಅವಕಾಶ

* ಈಗಿನ, ಹಿಂದಿನ ಬಾಕಿ ಪಾವತಿಗೆ ಅನ್ವಯ. ಗೃಹಬಳಕೆ ಬಿಲ್‌ಗೆ ಮಾತ್ರ ಈ ಸೌಲಭ್ಯ

* ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯ ಗರಿಷ್ಠ ₹2,000 ವರೆಗಿನ ಶುಲ್ಕ ಪಾವತಿ

* ಕೇಂದ್ರ, ರಾಜ್ಯ ಸರ್ಕಾರಗಳ ಅಧೀನದ ಕಾಲೇಜುಗಳ ಶುಲ್ಕ

* ಪ್ರೀಪೇಡ್ ಮೊಬೈಲ್‌ಗೆ ಗರಿಷ್ಠ ₹500 ವರೆಗೆ ಟಾಪ್‌ಅಪ್‌

* ಇಂದಿನಿಂದ ₹1000ದ ನೋಟುಗಳ ಬಳಕೆಗೆ ಅವಕಾಶವಿಲ್ಲ

* ಜನತಾ ಬಜಾರ್‌ಗಳಂತಹ ಗ್ರಾಹಕರ ಸಹಕಾರಿ ಮಳಿಗೆಗಳಲ್ಲಿ ಒಮ್ಮೆಗೆ ಗರಿಷ್ಠ ₹5,000 ಮೊತ್ತದ ಖರೀದಿಗೆ ಅವಕಾಶ

* ಡಿ. 2ರ ಮಧ್ಯರಾತ್ರಿ ವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಇಲ್ಲ

* ಡಿ. 3ರ ನಂತರ ಡಿ. 15ರವರೆಗೆ ₹500ರ ಹಳೆಯ ನೋಟುಗಳಲ್ಲಿ ಶುಲ್ಕ ಪಾವತಿಗೆ ಅವಕಾಶ

* ವಿದೇಶಿಯರು ವಾರಕ್ಕೆ  ಗರಿಷ್ಠ ₹5,000 ವಿನಿಮಯ ಮಾಡಿಕೊಳ್ಳಬಹುದು. ಇದನ್ನು ಅವರ ಪಾಸ್‌ಪೋರ್ಟ್‌ನಲ್ಲಿ  ನಮೂದಿಸಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT