ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರಗು ತಂದ ಕಲಾ ತಂಡಗಳು

Last Updated 3 ಡಿಸೆಂಬರ್ 2016, 3:16 IST
ಅಕ್ಷರ ಗಾತ್ರ

ರಾಯಚೂರು: ಚುಮು ಚುಮು ಚಳಿ ಮರೆಯಾಗಿ ಬಿಸಿಲು ನೆತ್ತಿಗೇರುವ ಹೊತ್ತಿನಲ್ಲಿ ನಗರದಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಅವರ ಮೆರವಣಿಗೆ ವೈಭವದಿಂದ ನಡೆಯಿತು.

ನಾಲ್ಕು ದಿಕ್ಕುಗಳಿಂದ ಹರಿದು ಬಂದ ಸಾವಿರಾರು ಕನ್ನಡಿಗರ ಕಂಠದಿಂದ ಹೊರಹೊಮ್ಮಿದ ಮುಗಿಲು ಮುಟ್ಟುವ ಉದ್ಘೋಷ,  ಕಣ್ಣು ಹಾಯಿಸಿದಷ್ಟೂ ಕಾಣುತ್ತಿದ್ದ ಕನ್ನಡ ಬಾವುಟಗಳ ನಡುವೆ ಬರಗೂರು ಸಾರೋಟಿನಲ್ಲಿ ಸಾಗಿಬಂದರು.

ಬಂಡಾಯದ ಸಾಹಿತಿ ಮುಜುಗರ ಪಟ್ಟುಕೊಳ್ಳುತ್ತಲೇ ಸಾರೋಟು ಏರಿದರು. ಮೆರವಣಿಗೆಯುದ್ದಕ್ಕೂ ನಗುಮುಖದಿಂದಲೇ ಕೈಬೀಸಿದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರಿಗೆ ಸಾಥ್‌ ನೀಡಿದರು.  

ಮಂಚೂಣಿಯಲ್ಲಿದ್ದ ಸ್ವಯಂಸೇವಕರು ‘ಕನ್ನಡ ನಾಡು ನುಡಿಗೆ ಜಯವಾಗಲಿ’, ‘ಕನ್ನಡವೇ ನಿತ್ಯ– ಕನ್ನಡವೇ ಸತ್ಯ’, ಕನ್ನಡ ಕನ್ನಡ– ಬನ್ನಿ ನಮ್ಮ ಸಂಗಡ’ ಎಂದು ಘೋಷಣೆ ಕೂಗುತ್ತಾ ಕನ್ನಡ ಕೈಂಕರ್ಯಕ್ಕೆ ಎಲ್ಲರನ್ನೂ ಆಹ್ವಾನಿಸಿದರು. 60 ವರ್ಷಗಳ ಬಳಿಕ ನಗರದಲ್ಲಿ ಸಾಹಿತ್ಯ ಜಾತ್ರೆ ನಡೆಯುತ್ತಿರುವ ಕಾರಣ ಕನ್ನಡ ಕಟ್ಟಾಳುಗಳ ಸಂಭ್ರಮ ಉಲ್ಲಾಸ ಮುಗಿಲು ಮುಟ್ಟಿತು. 

ಆರು ಕಿಲೊಮೀಟರ್ ಸಾಲು: ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು, ಜಿಲ್ಲೆಯ ಸಾವಿರಾರು ಜನರು ಸಮ್ಮೇಳನಾಧ್ಯಕ್ಷರ ಜತೆಗೆ ಹೆಜ್ಜೆ ಹಾಕಿ ಹಬ್ಬದ ಸಂಭ್ರಮವನ್ನು ನೂರ್ಮಡಿಗೊಳಿಸಿದರು.

ಮೆರವಣಿಗೆಗೆ ವಿಶೇಷ ಮೆರುಗು ನೀಡಿದ್ದು 3,500 ಅಡಿ ಉದ್ದದ ಕನ್ನಡ ಧ್ವಜ. ಭತ್ತದ ಕಣಜ, ಚಿನ್ನದ ಬೀಡು ಎಂದು ಪ್ರಖ್ಯಾತವಾಗಿರುವ ರಾಯಚೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಧ್ವಜ ಹಿಡಿದು ಹುರುಪಿನಿಂದ ಹೆಜ್ಜೆ ಹಾಕಿದರು. ರಾಜ್ಯದ ವಿವಿಧ ಭಾಗಗಳಿಂದ 30 ಜನಪದ ಕಲಾ ತಂಡಗಳು ಅವರನ್ನು ಹಿಂಬಾಲಿಸಿದವು.  ನೇಸರ ನೆತ್ತಿಯ ಮೇಲೇರಿ ನೆಲ ಕಾದ ಕೆಂಡದಂತಾದರೂ ಕಲಾವಿದರ ಉತ್ಸಾಹ ಕಡಿಮೆ ಆಗಲಿಲ್ಲ.

ಮುಖ್ಯ ವೇದಿಕೆಯಿಂದ ಸುಮಾರು 6 ಕಿಲೊ ಮೀಟರ್‌ ದೂರದಲ್ಲಿರುವ ಕರ್ನಾಟಕ ಸಂಘದಿಂದ ಬೆಳಿಗ್ಗೆ 9.15ಕ್ಕೆ ಭವ್ಯ ಮೆರವಣಿಗೆ ಹೊರಟಿತು. ಸಭಾಂಗಣ ತಲುಪುವಾಗ ಮಧ್ಯಾಹ್ನ 12.30 ದಾಟಿತು.

ಬಾಗಲಕೋಟೆ ನವನಗರದ ಗೊಂದಲಿ ಮೇಳ, ಮಳ ವಳ್ಳಿ ಮಹಿಳಾ ಪೂಜಾ ಕುಣಿತ, ಸಿಂಧನೂರಿನ  ಗವಿಸಿದ್ದೇಶ್ವರ ಸಾಂಸ್ಕೃತಿಕ ಕಲಾ ತಂಡದ ಮಹಿಳಾ ವೀರಗಾಸೆ, ವಿವಿಧ ಕಲಾ ತಂಡಗಳ ಹಗಲು ವೇಷ, ಗೊಂಬೆ ಕುಣಿತ, ಸೋಮನ ಕುಣಿತ, ಕಂಸಾಳೆ, ಲಂಬಾಣಿ ನೃತ್ಯ, ಸುರಪುರದ ಕನಕದಾಸ ಯುವಕ ಸಂಘದ ಡೊಳ್ಳು ಕುಣಿತ, ಕೊಂಬು ಕಹಳೆ ಸೇರಿದಂತೆ ಕಲಾ ತಂಡಗಳು ಪ್ರದರ್ಶನ ನೀಡಿ ಜನರ ಉತ್ಸಾಹವನ್ನು ದುಪ್ಪಟ್ಟುಗೊಳಿಸಿದವು.

ಲಿಂಗಸೂರು ಬಾಲಕನ ಬಾಯಲ್ಲಿ ಭಾರತ!

ರಾಯಚೂರು: ಮಣಿಪುರ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿ ಹೆಸರೇನು ಕೇಳಿದರೆ ಸಾಮಾನ್ಯವಾಗಿ ಹಿರಿಯರಿಗೆ ಸಹ ನೆನಪು ಇರುವುದಿಲ್ಲ. ನಮ್ಮ ರಾಜ್ಯದ ಜಿಲ್ಲೆಗಳ ಹೆಸರು ತಕ್ಷಣ ಬಾಯಿಗೆ ಬರುವುದಿಲ್ಲ.

ಆದರೆ, ಈ ಬಾಲಕ ಈ ಎಲ್ಲ ಪ್ರಶ್ನೆಗಳಿಗೆ ಥಟ್ಟನೆ ಉತ್ತರ ಹೇಳು ತ್ತಾನೆ. ಅರಳು ಹುರಿದಂತೆ ಪಟಪಟನೆ ಮಾತನಾಡುವ ಈ ಬಾಲಕನ ಹೆಸರು ನಿಖಿಲ್ ಗೌಡ. ಈತ ಲಿಂಗಸೂರಿನ ಕೋಕಿಲ ಬಂ ಕ್ಯಾಂಪಿನ ಆಕ್ಸ್‌ಫರ್ಡ್ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ.
ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಯಲ್ಲಿ ಸಾಗಿದ ಈತ ಜನರ ಆಕರ್ಷ ಣೆಯ ಬಿಂದುವಾಗಿದ್ದ. ವ್ಯಾಪಾರಿಯಾ ಗಿರುವ ತಂದೆ ವಿಶ್ವನಾಥ್‌ ಅವರು ಮಗನನ್ನು ಹೊತ್ತು ಮೆರವಣಿಗೆಯ ಉದ್ದಕ್ಕೂ ನರ್ತಿಸುತ್ತಲೇ ಸಾಗಿದರು.

‘ಇತ್ತೀಚಿನ ದಿನಗಳಲ್ಲಿ ಆಂಗ್ಲ ವ್ಯಾಮೋಹ ವಿಪರೀತವಾಗಿದೆ. ಕನ್ನಡ ಮಾತನಾಡುವುದೇ ಕೀಳು ಎಂಬ ಭಾವನೆ ಬಂದಿದೆ. ಗಡಿನಾಡಿನಲ್ಲಿ ಪರಿಸ್ಥಿತಿ ಇನ್ನಷ್ಟು ದಯನೀಯ ವಾಗಿದೆ. ಮಗನನ್ನು ಕನ್ನಡದ ಕಟ್ಟಾಳುವನ್ನಾಗಿ ಮಾಡಬೇಕು ಎಂಬುದೇ ನನ್ನ ಆಶಯ’ ಎಂದು ವಿಶ್ವನಾಥ್‌ ಹೇಳಿಕೊಂಡರು.

ದ್ರೋಣ್‌ ಕಣ್ಗಾವಲು
ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಮೆರವಣಿಗೆ ಮೇಲೆ ‘ದ್ರೋಣ್‌’ ಕಣ್ಣಿಟ್ಟಿತ್ತು. ಭದ್ರತಾ ಸುರಕ್ಷ ತೆಗಾಗಿ ಈ ವ್ಯವಸ್ಥೆ ಮಾಡ ಲಾಗಿತ್ತು. ಮೆರವಣಿಗೆಯು ದ್ದಕ್ಕೂ ಇದು ಸಾಗಿತು. ಅದು ಸರಿಸುಮಾರು ಒಂದೂವರೆ ಕಿಲೊಮೀಟರ್‌ ಉದ್ದದ ಕನ್ನಡ ಬಾವುಟ. ಮೆರವಣಿಗೆಯ ಮಂಚೂಣಿಯಲ್ಲಿ ವಿದ್ಯಾರ್ಥಿಗಳು ಅದನ್ನು ಹಿಡಿದಿದ್ದರು. ಆರಂಭದಲ್ಲಿ ಹಾಡುತ್ತಾ, ಕನ್ನಡ ಘೋಷಣೆಗಳನ್ನು ಕೂಗುತ್ತಾ ಸಂಭ್ರಮದಿಂದಲೇ ಧ್ವಜ ಹಿಡಿದು ಸಾಗಿದರು. ಬಿಸಿಲೇರುತ್ತಿ ದ್ದಂತೆ ಈ ಬಾವುಟ ತಲೆ ಮೇರೆ ಏರಿತು.

ಎಲ್ಲರಿಗೂ ಮಿನರಲ್‌
ಮೆರವಣಿಗೆಯಲ್ಲಿ ಭಾಗವ ಹಿಸಿದ ಕನ್ನಡದ ಕಟ್ಟಾಳುಗಳಿಗೆ ಮಿನರಲ್‌ ವಾಟರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ‘ಬಿಸಿಲು ಜಾಸ್ತಿಯಾಗುತ್ತಿದೆ. ನೀರು ಕುಡಿದು ಸ್ವಲ್ಪ ಸುಧಾರಿಸಿಕೊಳ್ಳಿ. ಸಭಾಂಗಣ ಇನ್ನೂ ತುಂಬ ದೂರ ದಲ್ಲಿದೆ’ ಎಂದು ಸ್ವಯಂಸೇವಕರು ನೀರು ಕೊಡುತ್ತಾ ಸಾಗಿದರು.

ರಸ್ತೆಯಲ್ಲೇ ಪಾರ್ಕಿಂಗ್‌
ನಗರದ ಪ್ರಮುಖ ರಸ್ತೆಗಳೆಲ್ಲ ಶುಕ್ರವಾರ ಬೆಳಿಗ್ಗೆ ವಾಹನ ನಿಲುಗಡೆ ತಾಣಗಳಾಗಿ ಮಾರ್ಪಟ್ಟವು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಬೆಳಿಗ್ಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.  ಆದರೂ ಕೆಲವು ಪ್ರಭಾವಿ ವಾಹನಗಳು ನುಸುಳಿ ಸಾಗಿದವು. ಇದರಿಂದಾಗಿ ಮೆರವಣಿಗೆಯಲ್ಲಿದ್ದವರಿಗೆ ಕಿರಿಕಿರಿ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT