ಜಕಾರ್ತ: ಇಂಡೋನೇಷ್ಯಾ ಪೊಲೀಸ್ ಇಲಾಖೆಗೆ ಸೇರಿದ ವಿಮಾನವೊಂದು ಇಲ್ಲಿನ ರಿಯಾವು ದ್ವೀಪದ ಸಮೀಪ ಶನಿವಾರ ಪತನಗೊಂಡು 12 ಮಂದಿ ಮೃತಪಟ್ಟಿದ್ದಾರೆ.

‘ಬಂಕಾ ದ್ವೀಪದ ಪ್ಯಾಂಗಲ್ ಪಿನಾಂಗ್‌ನಿಂದ ರಿಯಾವು ದ್ವೀಪದ ಬಟಂಗೆ ಹೊರಟಿದ್ದ ವಿಮಾನ ಸಾಗರದಲ್ಲಿ ಪತನಗೊಂಡಿದೆ. ವಿಮಾನ ಹಾರಾಟ ಆರಂಭಿಸಿದ 50 ನಿಮಿಷಗಳ ನಂತರ ಸಂಪರ್ಕ ಕಡಿದುಕೊಂಡಿತ್ತು.’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನ ಪತನಗೊಳ್ಳುವ ಮೊದಲು ಸ್ಫೋಟದ ಸದ್ದು ಕೇಳಿಸಿದೆ. ವಿಮಾನದ ಆಸನದ ಚೂರುಗಳು ಹಾಗೂ ಮೃತದೇಹದ ಅವಶೇಷಗಳು ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ’ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಯುದ್ಧ ನೌಕೆ ಹಾಗೂ ಮೂರು ದೋಣಿಗಳನ್ನು ಬಳಸಿ ಶೋಧ ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.