ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮಣಿದ ಇಂಗ್ಲೆಂಡ್‌

Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಲಖನೌ: ಆತಿಥೇಯ ಭಾರತ ತಂಡ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿಯಲ್ಲಿ ಶನಿವಾರ ಇಂಗ್ಲೆಂಡ್ ತಂಡವನ್ನು ಮಣಿಸಿದೆ.
ಹರ್ಜೀತ್‌ ಸಿಂಗ್‌ ಬಳಗ 5–3 ಗೋಲುಗಳಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಪಂದ್ಯದ 10ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡ ಗೋಲು ದಾಖಲಿಸಿ ಭಾರತದ ಮೇಲೆ ಒತ್ತಡ ಹೇರಿತು. ಜಾಕ್‌ ಕ್ಲೀ ಪ್ರವಾಸಿ ತಂಡಕ್ಕೆ ಆರಂಭಿಕ ಗೋಲು ತಂದುಕೊಟ್ಟರು. ಮೊದಲರ್ಧದಲ್ಲಿ ಎರಡು ಗೋಲು ದಾಖಲಿಸಿದ ಭಾರತ 2–1ರ ಮುನ್ನಡೆ ಪಡೆಯಿತು.

24ನೇ ನಿಮಿಷದಲ್ಲಿ ಆತಿಥೇಯ ತಂಡದ ಪರ್ವಿಂದರ್ ಸಿಂಗ್‌ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ದಾಖಲಿಸಿ ಸಮಬಲ ಮಾಡಿಕೊಂಡರು. ಹರ್ಜೀತ್‌ ಸಿಂಗ್‌ ನೀಡಿದ ಪಾಸ್‌ ಅನ್ನು ಹಿಡಿತಕ್ಕೆ ಪಡೆದ ಅರ್ಮಾನ್‌ ಖುರೇಷಿ 35ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಎರಡು ನಿಮಿಷದ ಅಂತರದಲ್ಲಿ ಹರ್ಮನ್‌ಪ್ರೀತ್ ಸಿಂಗ್‌ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ ನೀಡಿದರು. ಸಿಮ್ರನ್‌ಜೀತ್ ಸಿಂಗ್‌ (45ನೇ ನಿ.) ಹಾಗೂ ಡ್ರ್ಯಾಗ್‌ಫ್ಲಿಕರ್‌ ವರುಣ್‌ ಕುಮಾರ್‌ (59ನೇ ನಿ.) ಭಾರತದ ಗೋಲು ಪಟ್ಟಿಯನ್ನು ಹೆಚ್ಚಿಸಿದರು.

ಭಾರತ ತಂಡ ಪೆನಾಲ್ಟಿ ಕಾರ್ನರ್‌ನಲ್ಲಿ ಐದನೇ ಗೋಲು ಗಳಿಸಿದಾಗ ಇಂಗ್ಲೆಂಡ್ ಒತ್ತಡಕ್ಕೆ ಒಳಗಾಯಿತು. 63ನೇ ನಿಮಿಷದಲ್ಲಿ ವಿಲ್‌ ಕಲ್‌ನಾನ್‌ಗೆ ಯಶಸ್ಸು ಸಿಕ್ಕಿತು. 67ನೇ ನಿಮಿಷದಲ್ಲಿ ಎಡ್ವರ್ಡ್‌ ಹೋರ್ಲರ್‌ ಇಂಗ್ಲೆಂಡ್‌ ತಂಡದ ಮೂರನೇ ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಿದರು.

‘ಡಿ’ ಗುಂಪಿನಲ್ಲಿ ಭಾರತ ತಂಡ ಆರು ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನದಲ್ಲಿದೆ. ಡಿಸೆಂಬರ್‌ 12ರಂದು ದಕ್ಷಿಣ ಆಫ್ರಿಕಾ ಎದುರು ಆಡಲಿದೆ.
ಇಂಗ್ಲೆಂಡ್ ತಂಡ ಮೂರು ಪಾಯಿಂಟ್ಸ್‌ಗಳಿಂದ ಎರಡನೇ ಸ್ಥಾನದಲ್ಲಿದೆ. ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 4–0 ಗೋಲುಗಳಲ್ಲಿ ಕೆನಡಾ ಎದುರು ಜಯಗಳಿಸಿತ್ತು.
*
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾವು ಯಾವುದೇ ವಿಶೇಷವಾದ ತಂತ್ರಗಳನ್ನು ಬಳಸದೇ ಸರಳ ಹಾಕಿ ಆಡಿದೆವು. ಇದರಿಂದ ಗೆಲ್ಲಲು ಸಾಧ್ಯವಾಯಿತು’|ಹರ್ಜೀತ್ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT