ಚೆನ್ನೈ: ಭಾರಿ ವೇಗದ ಗಾಳಿ ಮತ್ತು ಮಳೆಯ ಅಬ್ಬರದ ವಾರ್ದಾ ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಇಲ್ಲಿಯವರೆಗೂ ಹತ್ತು ಜನರು ಮೃತಪಟ್ಟಿದ್ದಾರೆ.
ವಾರ್ದಾ ಆರ್ಭಟಕ್ಕೆ ನಲುಗಿರುವ ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ತಾಸಿಗೆ ನೂರು ಕಿಲೋಮೀಟರ್‌ಗೂ ಹೆಚ್ಚು ವೇಗದಲ್ಲಿ ಬೀಸುತ್ತಿದ್ದ ಗಾಳಿ ಸಾವಿರಾರು ಮರಗಳನ್ನು ಬುಡಮೇಲುಗೊಳಿಸಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ, ವಿಮಾನ ಸೇವೆಯೂ ಸೇರಿ ಎಲ್ಲ ಸಂಚಾರ ವ್ಯವಸ್ಥೆ ಸ್ತಬ್ಧವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ

ಚೆನ್ನೈನಗರದಲ್ಲಿ 4, ಕಾಂಚಿಪುರಂ, ತಿರುವಳ್ಳೂರ್ ನಲ್ಲಿ ತಲಾ ಇಬ್ಬರು ಹಾಗೂ ವಿಳ್ಳುಪುರಂ ಮತ್ತು ನಾಗಪಟ್ಟಣಂನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಳಿಸರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ 2.30ರಿಂದ 4.30ರೊಳಗೆ ಚೆನ್ನೈ ಸಮೀಪ ‘ವಾರ್ದಾ’ ಭೂಪ್ರದೇಶವನ್ನು ಪ್ರವೇಶಿಸಿತು. ಆರಂಭದಲ್ಲಿ ಗಾಳಿಯ ವೇಗ ತಾಸಿಗೆ 110ರಿಂದ 120 ಕಿ.ಮೀಗಳಷ್ಟಿತ್ತು. ನಂತರ ವಾರ್ದಾ ವೇಗ 60–70 ಕಿ.ಮೀ.ಗೆ ಇಳಿದಿದೆ.

ನಿರೀಕ್ಷೆಯಂತೆಯೇ ಸಂಜೆ 7–8 ಗಂಟೆಯ ಹೊತ್ತಿಗೆ ‘ವಾರ್ದಾ’ ಭೂ ಪ್ರದೇಶವನ್ನು ಹಾದು ಹೋಗಿದೆ. ವಾರ್ದಾ ಪರಿಣಾಮ ತೀವ್ರವಾಗಿದ್ದ ಚೆನ್ನೈ, ತಿರುವಳ್ಳೂರು ಮತ್ತು ಕಾಂಚೀಪುರ ಜಿಲ್ಲೆಗಳ ಜನರಿಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.